ಇಂದು ಕೃಷಿ ವಿವಿಯಲ್ಲಿ ವಿಶೇಷ ಉಪನ್ಯಾಸ
ಐಸಿಎಆರ್ ಮಾಜಿ ನಿರ್ದೇಶಕ ಹಾಗೂ ಡಿಎಆರ್‌ಇ ಕಾರ್ಯದರ್ಶಿ ಪದ್ಮಶ್ರೀ ಡಾ. ಎಸ್. ಅಯ್ಯಪ್ಪನ್ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ವಿಶ್ರಾಂತ ಕುಲಪತಿ ಡಾ. ಜೆ.ವಿ. ಗೌಡ, ಡಾ.ಎಸ್.ಎ.ಪಾಟೀಲರ ಪತ್ನಿ ಅನ್ನಪೂರ್ಣ ಪಾಟೀಲ ಉಪಸ್ಥಿತರಿರುವರು ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.