ಪ್ರತಿಭಾ ಪುರಸ್ಕಾರ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೋಡಿಗೆ ಸಮಾರಂಭ.

ಪ್ರತಿಭಾ ಪುರಸ್ಕಾರ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೋಡಿಗೆ ಸಮಾರಂಭ. 
ಧಾರವಾಡ  : 
ವಿದ್ಯಾರ್ಥಿಗಳು ನಿರಂತರವಾದ ಪ್ರಯತ್ನ, ಅಧ್ಯಯನದಲ್ಲಿ ಶ್ರದ್ಧೆ ಮತ್ತು ಅಪರ್ಣಾ ಮನೋಭಾವವನ್ನು ಅಳವಡಿಸಿಕೊಂಡಾಗ ಮಾತ್ರ  ನಿರ್ದಿಷ್ಟ ಗುರಿಯನ್ನು ಸಾಧಿಸಲು ಸಾಧ್ಯ ಎಂದು ಬೆಳಗಾವಿಯ ಜಿಲ್ಲಾ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರಾದ  ಯಾಸ್ಮಿನ್ ವಾಲಿಕಾರ ಅಭಿಪ್ರಾಯಪಟ್ಟರು. 

ಅವರು  ಕರ್ನಾಟಕ ವಿಜ್ಞಾನ ಕಾಲೇಜು ಗುರುವಾರದಂದು ಸೃಜನಾ ರಂಗಮಂದಿರದಲ್ಲಿ ಆಯೋಜಿಸಿದ ' ಪ್ರತಿಭಾ ಪುರಸ್ಕಾರ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೋಡಿಗೆ', ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. 

ವಿದ್ಯಾರ್ಥಿಗಳಾದ ನೀವು ಏನಾದರೂ ಸಾಧನೆ ಮಾಡಲು ಮುಂದುವರೆದಾಗ ನಿಮಗೆ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ನಿರುತ್ಸಾಹಗೊಳಿಸುವವರೆ ಜಾಸ್ತಿ, ಅದಕ್ಕೆಲ್ಲ ನೀವು ತಲೆ ಕೆಡಿಸಿಕೊಳ್ಳದೇ ಪ್ರಯತ್ನ ಮಾಡಿದಲ್ಲಿ, ನೀವು ಸಾಧನೆ ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.  

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ  ಕರ್ನಾಟಕದ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎಮ್.ಎಸ್.ಸಾಳುಂಕೆ ಮಾತನಾಡಿ ಸಾಧನೆ ಮಾಡಲು ದೃಡ ಮನಸ್ಸು ಬಹಳ ಅಗತ್ಯ ವಿದ್ಯಾರ್ಥಿ ದೆಸೆ ಯಲ್ಲಿ ಹಲವಾರು ಅಡೆತಡೆಗಳು ಬರುವದು ಸಾಮಾನ್ಯ ಎಲ್ಲಾ ಸವಾಲುಗಳನ್ನು ಎದುರಿಸಿ ಮುನ್ನಡೆದು ಸಾಧಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಬಿ.ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ  ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಮಖಾನ ಉಪಾಧ್ಯಕ್ಷರಾದ ಪ್ರೊ.ಜೆ.ಟಿ.ಗುಡಗೂರ ಮತ್ತು ಶೈಕ್ಷಣಿಕ ಡೀನ್ ಪ್ರೊ.ಆರ್.ವಾಯ್.ಬೂದಿಹಾಳ, ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ ಚೇರಮನ್  ಡಾ.ವಿ.ಬಿ.ಸಾವಿರಮಠ, ಪಿ.ಯು.ಸಿ ವಿಭಾಗದ ಸಂಯೋಜಕ ಡಾ.ಜಿ.ಎಚ್.ಮಳಿಮಠ, ಡಾ.ಕೆ.ಎಸ್.ಕಟಗಿ, ಪ್ರೊ. ಎಸ್.ಮಂಜುನಾಥ, ಪ್ರೊ.ಎಸ್.ಡಿ.ದುಮ್ಮವಾಡ, ಡಾ.ಜಯಲಕ್ಷ್ಮಿ.ಕೆ, ಪ್ರೊ. ಲಲಿತಾ, ಪ್ರೊ.ನೀರೂಪಮಾ, ಡಾ. ಅಂಬಿಕಾ, ಪ್ರೊ.ರಾಜಶೇಖರ ಬಾರಕೇರ, ಡಾ.ಜಿ.ಎನ್.ಕುಮ್ಮೂರ, ಡಾ.ಆರ್.ಜಿ.ಕಲಖಾಂಕರ, ದೈಹಿಕ ನಿರ್ದೇಶಕ ಡಿ.ಬಿ.ಗೊವಿಂದಪ್ಪ, ಪ್ರೊ.ನಾಗರಾಜ, ಎನ್.ಎಸ್.ಎಸ್ ಅಧಿಕಾರಿಗಳಾದ ಡಾ.ಎಸ್.ಎಸ್.ಮಂಗಳವೇಡೆ, ಡಾ.ಆರ್.ಡಿ.ಸಣಕಲ್,  ಪ್ರೊ. ಬ್ಲೇಸ್ ಲೋಬೊ, ಪ್ರೊ.ಕೆ.ಕೊಟ್ರೇಶಾ, ಡಾ.ಎಸ್.ಪಿ.ಮಾಸ್ತಿ, ಡಾ.ಗೀತಾ.ಚವ್ಹಾನ
ಡಾ.ಜೋತಿ.ದೊಡಮನಿ, ಡಾ.ರೇಷ್ಮಾ ನೇಸರಗಿ ಮತ್ತು ವಿವಿಧ ವಿಭಾಗದ ಮುಖ್ಯಸ್ಥರು ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು,ವಿದ್ಯಾರ್ಥಿ ಕಾರ್ಯದರ್ಶಿಗಳು, ವಿದ್ಯಾರ್ಥಿಗಳು ಹಾಜರಿದ್ದರು. 
ಕರ್ನಾಟಕ ವಿಜ್ಞಾನ ಕಾಲೇಜು ಗುರುವಾರದಂದು ಸೃಜನಾ ರಂಗಮಂದಿರದಲ್ಲಿ ಆಯೋಜಿಸಿದ ಪ್ರತಿಭಾ ಪುರಸ್ಕಾರ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೋಡಿಗೆ ಸಮಾರಂಭದಲ್ಲಿ  ಬೆಳಗಾವಿಯ ಜಿಲ್ಲಾ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರಾದ  ಯಾಸ್ಮಿನ್ ವಾಲಿಕಾರ ಮಾತನಾಡಿದರು.
ನವೀನ ಹಳೆಯದು

نموذج الاتصال