ವಿಶ್ವಕರ್ಮ ಸಮಾಜದ ರಾಮಣ್ಣ ಕೃ. ಬಡಿಗೇರ ಪೂಜ್ಯ ಮಹಾಪೌರರಿಗೆ ಸನ್ಮಾನ ಹಾಗೂ 2023 -24 ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ
ಪಿಯುಸಿ-2 ಪಾಸಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ, ಪ್ರತಿಭಾ ಪುರಸ್ಕಾರ ಸಮಾರಂಭ.
ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದಲ್ಲಿ
ದಿ14 ರಂದು ಬೆಳಿಗ್ಗೆ 11 ಘಂಟೆಗೆ, ವಿಶ್ವಕರ್ಮ ಸಮಾಜದ ರಾಮಣ್ಣ ಕೃ. ಬಡಿಗೇರ ಪೂಜ್ಯ ಮಹಾಪೌರರಿಗೆ ಸನ್ಮಾನ ಹಾಗೂ 2023 -24 ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ
ಪಿಯುಸಿ-2 ಪಾಸಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ, ಪ್ರತಿಭಾ ಪುರಸ್ಕಾರ ಸಮಾರಂಭ. ಆಚರಿಸಲಾಗುವದು ಎಂದು ಪ್ರಧಾನ ಕಾರ್ಯದರ್ಶಿ ಮಂಜುನಾಥ ಬಡಿಗೇರ ತಿಳಸಿದರು, ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಸತತವಾಗಿ 4 ಬಾರಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾಗಿ ಹಾಗೂ ನೂತನವಾಗಿ ಧಾ-ಹು-ಮಹಾನಗರ ಪಾಲಿಕೆ ಪೂಜ್ಯ ಮಹಾಪೌರರಾಗಿ ಆಯ್ಕೆಯಾದ ರಾಮಣ್ಣ ಕೃ. ಬಡಿಗೇರ ಅವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಇಟ್ಟುಕೊಳ್ಳಲಾಗಿದೆ.
ನೂತನ ಪೂಜ್ಯ ಮಹಾಪೌರರು ಕಳೆದ 16 ವರ್ಷಗಳಿಂದ ಮಹಾನಗರದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ, ಅಲ್ಲಿದೆ ವಿಶ್ವಕರ್ಮ ಸಮಾಜದ ಅಭಿವೃದ್ಧಿಗಾಗಿ, ಸಮಾಜ ಹಾಗೂ ವಿಶ್ವಕರ್ಮ ಮಹಾ ಸಭೆಯ ಜೊತೆಗೆ ಕೈಗೂಡಿಸಿದ್ದಾರೆ ಎಂದರು. ರಾಜ್ಯದಲ್ಲಿ ವಿಶ್ವಕರ್ಮ ಸಮಾಜದ ನಾಯಕರಾದ ಕೆ.ಪಿ. ನಂಜುಂಡಿ ವಿಶ್ವಕರ್ಮ, ರವರ ಜೊತೆಗೂಡಿ ರಾಜ್ಯ ಸಂಘಟನೆಯನ್ನು ಕಟ್ಟುವಲ್ಲಿ ಶ್ರಮಿಸಿದ್ದಾರೆ. ಕಾರಣ ಅವರಿಗೆ ವಿಶ್ವಕರ್ಮ ಮಹಾಸಭಾದ ವತಿಯಿಂದ ವಿಶೇಷ ಸನ್ಮಾನವನ್ನು ಮಾಡಲಿದ್ದೇವೆ.
ವಿಶ್ವಕರ್ಮ ಸಮಾಜದ ಮಕ್ಕಳು ಶೈಕ್ಷಣಿಕವಾಗಿ ಮುಂದುವರೆಯುತ್ತಿದ್ದು, ಉತ್ತಮ ಅಂಕಗಳನ್ನು ಗಳಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರು ಇನ್ನು ಪ್ರತಿಭಾವಂತರಾಗಿ ವಿಶೇಷ ಅಂಕಗಳನ್ನು ಪಡೆಯಲು ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರವನ್ನು ಇಟ್ಟುಕೊಂಡಿದ್ದೇವೆ, ಧಾರವಾಡ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ-2 ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಈ ಸಮಾರಂಭದಲ್ಲಿ ಭಾಗವಹಿಸುವರು.
ಈ ಸಮಾರಂಭದಲ್ಲಿ ಭಾರತ-ಸರಕಾರದ ಮಾನ್ಯ ಮಂತ್ರಿಗಳಾದ ಪ್ರಲ್ಹಾದ ಜೋಶಿಯವರು, ಕರ್ನಾಟಕ ಸರಕಾರದ ಧಾರವಾಡ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಸಭಾದ ಅದ್ಯಕ್ಷರಾದ ಕೆ.ಪಿ. ನಂಜುಂಡಿಯವರು, ಭಾಗವಹಿಸುವರು ಅಲ್ಲದೆ ಚಂದ್ರಕಾಂತ ಬೆಲ್ಲದ ಅಧ್ಯಕ್ಷರು ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಶಾಸಕರು, ವಿಧಾನ ಸಭಾದ ವಿರೋಧ ಪಕ್ಷದ ನಾಯಕರಾದ ಅರವಿಂದ ಬೆಲ್ಲದ ಅವರು, ಶಾಸಕರಾದ ವಿನಯ ಕುಲಕರ್ಣಿಯವರು, ಶಾಸಕರಾದ ಪ್ರಸಾದ ಅಬ್ಬಯ್ಯವರು, ಶಾಸಕರಾದ ಎನ್.ಎಚ್ ಕೊನರಡ್ಡಿಯವರು, ಶಾಸಕರಾದ ಮಹೇಶ ಟೆಂಗಿನಕಾಯಿಯವರು, ಶಾಸಕರಾದ ಎಮ್. ಆರ್ ಪಾಟೀಲ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿಯವರು, ಸಮಾರಂಭದ ಉದ್ಘಾಟನೆ ಮಾಡುವರು.
ರಾಜ್ಯದ ಹಾಗೂ ಧಾರವಾಡ ಜಿಲ್ಲೆಯ ವಿಶ್ವಕರ್ಮರ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಪತ್ರಿಕಾಗೋಷ್ಟಿಯಲ್ಲಿ ಅಧ್ಯಕ್ಷರು,
ಕಾಳಪ್ಪ. ವ್ಹಿ. ಬಡಿಗೇರ ಮುಂತಾದವರು ಇದ್ದರು.