ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಸಲ್ಲ- ಪಿ.ವಿ.ಹಿರೇಮಠ.
ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಮಾಡುತ್ತಿರುವುದು ದುರದೃಷ್ಟಕರ ಸಂಗತಿ ಆಗಿದ್ದು, ಪರಿಸರ ಮತ್ತು ಜೀವ ವೈವಿಧ್ಯತೆ ಮೇಲೆ ನಡೆಯುತ್ತಿರುವ ನಿರಂತರ ಪ್ರಹಾರ ಮನುಕುಲದ ನಾಶಕ್ಕೆ ದಾರಿ ಮಾಡಿ ಕೊಟ್ಟಂತೆ ಎಂದು ಧಾರವಾಡದ ನೇಚರ್ ಫಸ್ಟ್ ಇಕೊ ವಿಲೇಜ್ ನ ಸಂಸ್ಥಾಪಕರಾದ ಪಿ.ವಿ.ಹಿರೇಮಠ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿಶ್ವವಿದ್ಯಾಲಯದ ಎನ್ .ಎಸ್. ಎಸ್. ಕೋಶವು ಸೆನೆಟ್ ಸಭಾಂಗಣದಲ್ಲಿ ಕರ್ನಾಟಕ ಕಲಾ, ವಿಜ್ಞಾನ ಮತ್ತು ಶಿಕ್ಷಣ ಮಹಾವಿದ್ಯಾಲಯ ಮತ್ತು ನೇಚರ್ ಫಸ್ಟ್ ಇಕೊ ವಿಲೇಜ್ ಸಹಯೋಗದಲ್ಲಿ ಆಯೋಜಿಸಿದ ಏಳು ದಿನಗಳ ಕವಿವಿ ಅಂತರ ಮಹಾವಿದ್ಯಾಲಯಗಳ ಎನ್.ಎಸ್.ಎಸ್ ಶಿಬಿರದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು
ಮನುಕುಲದ ಉಳಿವಿಗಾಗಿ ಎಲ್ಲರೂ ಪರಿಸರವನ್ನು ಉಳಿಸುವತ್ತ ಗಮನ ಹರಿಸಬೇಕು ಎಂದ ಅವರು
ಪ್ರಸ್ತುತ ಕೇವಲ 9.8 ಪ್ರತಿಶತ ಕಾಡು ಭಾರತದಲ್ಲಿ ಇದೆ. ಕಾಡಿನ ನಾಶ ದಿಂದ ಅನೇಕ ಪ್ರಾಣಿ ಪಕ್ಷಿಗಳು ಅವಸಾನದ ಅಂಚಿನಲ್ಲಿ ಇವೆ. ಭಾರತದಲ್ಲಿ 400 ನದಿಗಳು ವರ್ಷ ಪೂರ್ತಿ ತುಂಬಿ ಹರಿಯುತ್ತಿದ್ದವು. ಎಂದರು.
ಹವಾಮಾನದ ಬದಲಾವಣೆಯಿಂದ ಇಂದು ಕೇವಲ 10 ರಿಂದ 12 ನದಿಗಳು ಮಾತ್ರ ನದಿಗಳು ತುಂಬಿ ಹರಿಯುತ್ತಿವೆ. 80% ರಷ್ಟು ಭಾರತದಲ್ಲಿನ ನದಿಗಳು ಬತ್ತಿ ನೀರಿನ ಬರ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ ಎಂದ ಅವರು ಮನುಷ್ಯನಿಗೆ ಪಕ್ಷಿ ಮತ್ತು ಮಣ್ಣಿನಲ್ಲಿರುವ ಬ್ಯಾಕ್ಟೀರಿಯಾ ಗಳು ಬಹಳ ಉಪಯುಕ್ತವಾಗಿವೆ. ರಾಸಾಯನಿಕ ಬಳಕೆಯಿಂದ ಶೇಕಡಾ 30 ರಷ್ಟು ಭೂಮಿ ಫಲವತ್ತತೆ ಕಳೆದುಕೊಂಡಿದೆ ಆದ್ದರಿಂದ ಪ್ರತಿಯೊಬ್ಬರೂ ಗಿಡ ನೆಡಬೇಕು. ಒಂದು ಮರ ಹತ್ತು ಜನರಿಗೆ ಶುದ್ಧ ಆಕ್ಸಿಜನ್ ನೀಡುತ್ತದೆ. ಹಿಂದೆ ಪ್ರತಿ ವರ್ಷ1200 ಮಿಲಿಮೀಟರ್ ಗಳಷ್ಟು ಮಳೆ ಆಗುತ್ತಿತ್ತು. ಹವಾಮಾನದ ಬದಲಾವಣೆಯಿಂದ ಜೇವಲ 400 ಮಿಲಿಮೀಟರ್ ನಷ್ಟು ಮಾತ್ರ ಮಳೆಯಾಗುತ್ತದೆ. ಪರಿಸರ ನಾಶದಿಂದ ಅನೇಕ ಹೊಸ ರೀತಿಯ ಕಾಯಿಲೆಯಿಂದ ಸಾವಿರಾರು ಜನರು ಸಾವನ್ನು ಅಪ್ಪುತ್ತಿದ್ದಾರೆ ಎಂದ ಅವರು ಮಾನವ ನಿರ್ಮಿತ ಹವಾಮಾನ ಬದಲಾವಣೆ ಮನುಕುಲಕ್ಕೆ ಮಾರಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಮಾತನಾಡಿ ಎನ್.ಎಸ್.ಎಸ್.ಒಂದು ಮಹತ್ವದ ಯೋಜನೆ ಆಗಿದ್ದು, ಎನ್.ಎಸ್.ಎಸಗ.ಸ್ವಯಂ ಸೇವಕರ ಪಾತ್ರ ಪರಿಸರ ಬೆಳೆಸುವಲ್ಲಿ ಕಾಪಾಡುವಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಎನ್.ಎಸ್.ಎಸ್.ಸ್ವಯಂ ಸೇವಕರು ಸಮಾಜದ ಹಿತವನ್ನು ಕಾಪಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದ ಅವರು ಅಧ್ಯಯನದ ಜೊತೆಗೆ ಪರಿಸರಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸ್ವಯಂ ಸೇವಕರು ಉತ್ತಮ ಅಭಿರುಚಿ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದ ಅವರು ಎನ್‌ಎಸ್.ಎಸ್. ಯೋಜನೆಯಿಂದ ದೇಶಕ್ಕೆ ಸಮಾಜಕ್ಕೆ ಉತ್ತಮ ಸ್ವಯಂ ಸೇವಕರನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಎಲ್ಲ ಸ್ವಯಂ ಸೇವಕರು ಸಮಾಜಮುಖಿ ಯಾಗಿ ಸೇವೆ ಮಾಡಬೇಕು ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಕೋಶದ ಸಂಯೋಜಕರಾದ ಡಾ.ಎಂ.ಬಿ.ದಳಪತಿ ಮಾತನಾಡಿ ಪರಿಸರದ ದಿನಾಚರಣೆಯ ಅಂಗವಾಗಿ ಎನ್.ಎಸ್.ಎಸ್ ವಿಶೇಷ ಶಿಬಿರದಲ್ಲಿ ಸುಮಾರ 500 ಸಸಿಗಳನ್ನು ನೆಡಲಾಗುತ್ತದೆ ಎಂದ ಅವರು ಪರಿಸರದ ಮಹತ್ವವನ್ನು ಇಂದಿನ ಯುವ ಪೀಳಿಗೆಗೆ ನೀಡುವ ಉದ್ದೇಶದಿಂದ ಪ್ರತಿಯೊಬ್ಬರಿಗೂ ಸಸಿಗಳನ್ನು ದತ್ತು ನೀಡಲಾಗುತ್ತದೆ. ಸಸಿಗಳನ್ನು ದತ್ತು ವಿದ್ಯಾರ್ಥಿಗಳು ಅದರ ಸಮಗ್ರ ಪಾಲನೆ ಪೋಷಣೆ ನೋಡಿಕೊಳ್ಳುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಕವಿವಿ ಪ್ರಭಾರ ಕುಲಸಚಿವರಾದ ಡಾ. ರಾಜೇಂದ್ರ ನಾಯಕ, ಮೌಲ್ಯಮಾಪನ ಕುಲಸಚಿವರಾದ ಡಾ.ನಿಜಲಿಂಗಪ್ಪ ಮಟ್ಟಿಹಾಳ, ಕರ್ನಾಟಕ ಕಲಾ, ವಿಜ್ಞಾನ ಮತ್ತು ಶಿಕ್ಷಣ ಕಾಲೇಜುಗಳ ಎನ್.ಎಸ್.ಎಸ್ ಅಧಿಕಾರಿಗಳಾದ ಡಾ.ಸಲೀಮಾ ಕೊಳೂರ, ಡಾ.ಎಸ್.ಎಸ್.ಮಂಗಳವೇಡಿ, ಡಾ.ಜ್ಯೋತಿ ದೊಡ್ಡಮನಿ, ಡಾ.ಎನ್.ಎಸ್.ತಳವಾರ, ಡಾ.ಭಾಗ್ಯ ಮೇಟಿ ಇದ್ದರು.
ಕರ್ನಾಟಕ ವಿಶ್ವವಿದ್ಯಾಲಯದ ಸಲಂಗ್ನ ಕಾಲೇಜುಗಳ ಸಹಯೋಗದೊಂದಿಗೆ ಆಯೋಜಿಸಿದ ಏಳು ದಿನಗಳ ಎನ್.ಎಸ್.ಎಸ್ ವಿಶೇಷ ಶಿಬಿರದಲ್ಲಿ ಪರಿಸರ ದಿನದ ಅಂಗವಾಗಿ ಕವಿವಿ ಕುಲಪತಿ ಪ್ರೊ. ಕೆ.ಬಿ.ಗುಡಸಿ ಸಸಿಗಳನ್ನು ನೆಟ್ಟರು.
ಕರ್ನಾಟಕ ವಿಶ್ವವಿದ್ಯಾಲಯದ ಸಲಂಗ್ನ ಕಾಲೇಜುಗಳ ಸಹಯೋಗದೊಂದಿಗೆ ಆಯೋಜಿಸಿದ ಏಳು ದಿನಗಳ ಎನ್.ಎಸ್.ಎಸ್ ವಿಶೇಷ ಶಿಬಿರದಲ್ಲಿ ಪರಿಸರ ದಿನದ ಅಂಗವಾಗಿ ನೇಚರ್ ಫಸ್ಟ್ ಇಕೊ ವಿಲೇಜ್ ಸಂಸ್ಥಾಪಕರಾದ ಪಿ.ವಿ.ಹಿರೇಮಠ ಮಾತನಾಡಿದರು.