ಅಗತ್ಯ ವಸ್ತುಗಳ ಬೆಲೆ ಇಳಿಸಿ ರಾಜ್ಯದ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವಂತೆ ಕರ್ನಾಟಕ ನವನಿರ್ಮಾಣ ಸೇನೆ ಮನವಿ,
ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನ ವಿರೋಧಿ ಆಡಳಿತ ನಡೆಸುತ್ತಿರುವ ರಾಜ್ಯ ಸರಕಾರದ ನಡೆಯನ್ನು ಕರ್ನಾಟ ನವನಿರ್ಮಾಣ ಸೇನೆ ಬಲವಾಗಿ ಖಂಡಿಸುತ್ತದೆ.
ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಸ್ಪರ್ಧೆಗೆ ಬಿದ್ದತಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮುಗಿಯುವುದರೊಳಗಾಗಿ ಹಾಲಿನ ಬೆಲೆ ಹೆಚ್ಚಳ ಮಾಡಿ ಜನ ಸಾಮಾನ್ಯರ ಬದುಕಿಗೆ ಬರೆ ಹಾಕುವ ಕೆಲಸ ಸರಕಾರ ಮಾಡಿದೆ.ರಾಜ್ಯದ ಅನೇಕ ಕಡೆ ಬಹುತೇಕ ಜಿಲ್ಲೆ ತಾಲೂಕು, ಹೋಬಳಿ ಪ್ರದೇಶಗಳಲ್ಲಿ ಬಡತನ ರೇಖೆಗಿಂತ ಕೆಳಗಡೆ ಇರುವ ಜನ ಸಾಮಾನ್ಯರೆ ಹೆಚ್ಚಾಗಿ ವಾಸಿಸುತ್ತಿದ್ದಾರೆ.ತಮ್ಮ ಆಡಳಿತದ ಅನುಕೂಲಕ್ಕಾಗಿ ಬೇಕಾ ಬಿಟ್ಟಿ ಬೆಲೆ ಏರಿಕೆ ಮಾಡಿ ಅವರ ದೈನಂದಿನ ಬದುಕಿನ ಜೊತೆ ಆಟವಾಡುವ ಕೆಲಸ ಸರಕಾರ ಮಾಡುತ್ತಿದೆ.ವಿದ್ಯಾರ್ಥಿ,ರೈತಕಾರ್ಮಿಕ ಸೇರಿದಂತೆ ಮಧ್ಯಮವರ್ಗದ ಬಡಜನರಿಗೆ ಸರಕಾರದ ಈ ನಡೆ ಆಘಾತವನ್ನುಂಟು ಮಾಡಿದೆ.
ಮುಂಬರುವ ದಿನಗಳಲ್ಲಿ ಬಸ್ ದರ ಹೆಚ್ಚಿಸುವ ಪ್ರಸ್ತಾವನೆಯನ್ನೂ ಸಾರಿಗೆ ಸಚಿವರು ಮಾಡಲಿದ್ದಾರೆ ಎನ್ನುವ ಮಾಹಿತಿ ಇದೆ.ಆರ್ಥಿಕ ಸಂಪನ್ಮೂಲಗಳ ಕ್ರೂಢಿಕರಣಕ್ಕೆ ಸರಕಾರಕ್ಕೆ ಸಾಕಷ್ಟು ದಾರಿಗಳಿವೆ.ಆದರೆ ಸರಕಾರ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಿ ಆ ಹಣದಿಂದಲೇ ಆಡಳಿತ ಯಂತ್ರ ನಡೆಸಲು ಮುಂದಾಗಿರುವುದು ನಿಜಕ್ಕೂ ನಾಚಿಕೆಗೇಡು,ಬೆಲೆ ಏರಿಕೆ ದುಷ್ಪರಿಣಾಮದ ಮಾಹಿತಿ ಸರಕಾರಕ್ಕೆ ಸ್ಪಷ್ಟವಾಗಿ ಇಲ್ಲ. ಸರಕಾರ ಈ ಕೂಡಲೇ ತನ್ನ ನಿರ್ಧಾರದಿಂದ ಹಿಂದೆ ಸರಿದು ಅಗತ್ಯ ವಸ್ತುಗಳ ಬೆಲೆ ಇಳಿಸುವಂತೆ ಕರ್ನಾಟಕ ನವನಿರ್ಮಾಣ ಸೇನೆ ಒತ್ತಾಯಿಸುತ್ತದೆ.ಒಂದು ವೇಳೆ ಸರಕಾರ ಇದೇ ರೀತಿ ಜನ ಸಾಮಾನ್ಯರ ಬದುಕಿಗೆ ಹೊರೆಯಾಗುವಂತಹ ಆಡಳಿತ ಮಾಡಲು ಮುಂದಾದರೆ ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡುವುದರ ಮೂಲಕ ಸರಕಾರದ ಜನ ವಿರೋಧಿ ಆಡಳಿತವನ್ನು ಖಂಡಿಸಲಿದೆ,ಮತ್ತು ಸರಕಾರದ ಸಚಿವರು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ಕಪ್ಪು ಬಟ್ಟೆ ಪ್ರದರ್ಶಿಸುವ ಹೋರಾಟ ಹಮ್ಮಿಕೊಳ್ಳಲಶಗುವುದೆಂದು ಕರ್ನಾಟಕ ನವನಿರ್ಮಾಣ ಸೇನೆಯ ಈ ಮೂಲಕ ಗಿರೀಶ ಪೂಜಾರ
ಎಚ್ಚರಿಸಿದ್ದಾರೆ.