ಶಂಕರಾಚಾರ್ಯ ಜಯಂತಿ ಆಚರಣೆ
ಧಾರವಾಡ 12 : ಆದಿ ಗುರು ಶಂಕರಾಚಾರ್ಯ ಜಯಂತಿ ಅಂಗವಾಗಿ ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೋನಿಯ ಶಂಕರ ಮಠದಲ್ಲಿ ಶಂಕರಾಚಾರ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ, ನಗರದಲ್ಲಿ ಶೋಭಾ ಯಾತ್ರೆ ನಡೆಸಲಾಯಿತು.
ಈ ಸಂಧರ್ಭದಲ್ಲಿ ವಿಜಯಾ ಜೋಶಿ ಕುಲಕರ್ಣಿ, ಮಹೇಶ್ ಮಳಿಯೇ, ವಿಠ್ಠಲ ಶೆಟ್ಟಿ, ಶ್ರೀಧರ್ ಮಡ್ಲೂರು, ರಮೇಶ್ ದೇಶಪಾಂಡೆ, ಶ್ರೀಧರ್ ಗೋಡ್ಕಿಂಡಿ,ಶ್ರೀರಾಮ್ ಭಟ್ ಪುರೋಹಿತ ಹಾಗೂ ಸೌಂದರ್ಯ ಲಹರಿ ಭಜನಾ ಮಂಡಳಿಯ ಸದಸ್ಯರು ಹಾಗೂ ಶಂಕರ ಸೇವಾ ಸಮಿತಿ ಸದಸ್ಯರು ಭಾಗವಹಿಸಿದ್ದರು.