ಧಾರವಾಡ 27 :
ಇಂದು ಧಾರವಾಡದ ಎಪಿಎಂಸಿಯಲ್ಲಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಶರಣಬಸವ ಗೋನವಾರರವರು ಓಟು ಕೊಡಿ ನೋಟು ಕೊಡಿ ಅಭಿಯಾನ ನಡೆಸಿದರು.
ಧಾರವಾಡ ಲೋಕಸಭಾ ಕ್ಷೇತ್ರದ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಶರಣಬಸವ ಗೋನವಾರ ಅವರು ಇಂದು ಧಾರವಾಡದ ಎಪಿಎಂಸಿಯಲ್ಲಿ ವೋಟು ಕೊಡಿ ನೋಟು ಕೊಡಿ ಎನ್ನುವ ಅಭಿಯಾನದ ಮೂಲಕ ಚುನಾವಣಾ ಪ್ರಚಾರ ನಡೆಸಿದರು.
ಈಗಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಬಿಜೆಪಿ ಇಂತಹ ಪಕ್ಷಗಳು ಈ ದೇಶದ ಶ್ರೀಮಂತ ಬಂಡವಾಳಶಾಹಿಗಳಿಂದ ಕೋಟಿ ಕೋಟಿ ಹಣ ಪಡೆದು ಅದೇ ಹಣದಲ್ಲಿ ಚುನಾವಣೆ ನಡೆಸಿ ಅಧಿಕಾರಕ್ಕೆ ಬಂದ ನಂತರ ತಮಗೆ ಮತ ಹಾಕಿದ ಜನಸಾಮಾನ್ಯರಿಗೆ ಮೋಸ ಮಾಡಿ ಆ ಶ್ರೀಮಂತ ಬಂಡವಾಳಿಗರ ಪರವಾಗಿ ನೀತಿಗಳನ್ನು ರೂಪಿಸುತ್ತಾರೆ. ಆದರೆ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷ ಸಾಮಾನ್ಯ ಜನಗಳಿಂದ ಹಣ ಸಂಗ್ರಹಿಸಿ ಚುನಾವಣಾ ಖರ್ಚನ್ನು ಅದರಲ್ಲೇ ನಿಭಾಯಿಸುತ್ತದೆ. ಹಾಗೂ ಯಾವ ಜನಸಾಮಾನ್ಯರಿಂದ ಹಣ ಸಂಗ್ರಹಿಸಿದ್ದೆವೋ ಆ ಜನಗಳ ಸಮಸ್ಯೆಗಳ ವಿರುದ್ಧ ನಿರಂತರವಾಗಿ ಅವರ ಧ್ವನಿಯಾಗಿ ನಿಂತು ಹೋರಾಟಗಳನ್ನು ಕಟ್ಟುತ್ತಾ ಬರುತ್ತೇವೆ. ಬಂಡವಾಳಗರಿಂದ ಹಣ ಪಡೆದು ಜನಗಳಿಗೆ ಹಣ, ಹೆಂಡದ ಆಮೀಷಗಳನ್ನು ಒಡ್ಡಿ ರಾಜಕೀಯ ಕ್ಷೇತ್ರವನ್ನು ಸಂಪೂರ್ಣವಾಗಿ ಹೊಲಸು ಮಾಡಿರುವ ಈ ಎಲ್ಲಾ ಭ್ರಷ್ಟ ಪಕ್ಷಗಳನ್ನು ಸೋಲಿಸಿ ಜನಗಳ ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ಕಟ್ಟುತ್ತಿರುವ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವನ್ನು ಬೆಂಬಲಿಸಿ ಎಂದು ಹೇಳುತ್ತಾ ಚುನಾವಣಾ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ವಿಸ್ತೃತ ರಾಜ್ಯ ಸಮಿತಿಯ ಸದಸ್ಯರಾದ ವಿ ನಾಗಮ್ಹಾಳ್, ಭುವನಾ ಬಳ್ಳಾರಿ, ಪ್ರೀತಿ, ಸ್ಪೂರ್ತಿ ಚಿಕ್ಕಮಠ, ಚಂದ್ರಶೇಖರ್ ದ್ರಾಕ್ಷಿ, ಸಿಮೋನ್ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಸಂದರ್ಭದಲ್ಲಿ ಉಪಸ್ಥಿತರಿದ್ದರು.