ಒಬ್ಬ ಗುರುವಿಗೆ ನಿಜವಾದ ಸಂಪತ್ತು ಆತನ ವಿದ್ಯಾರ್ಥಿಗಳ ಹಾರೈಕೆಗಳು ಗುರುವಿಗೆ ನಿಜವಾದ ಶ್ರೀರಕ್ಷೆ’

ಒಬ್ಬ ಗುರುವಿಗೆ ನಿಜವಾದ ಸಂಪತ್ತು ಆತನ ವಿದ್ಯಾರ್ಥಿಗಳ  ಹಾರೈಕೆಗಳು ಗುರುವಿಗೆ ನಿಜವಾದ ಶ್ರೀರಕ್ಷೆ’
-- ಪ್ರೊ.ಪಿ.ಎಲ್.ಪಾಟೀಲ.

ಧಾರವಾಡ :
‘ಒಬ್ಬ ಗುರುವಿಗೆ ನಿಜವಾದ ಸಂಪತ್ತು ಆತನ ವಿದ್ಯಾರ್ಥಿಗಳ  ಹಾರೈಕೆಗಳು ಗುರುವಿಗೆ ನಿಜವಾದ ಶ್ರೀರಕ್ಷೆ’ ಎಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಪಾಟೀಲ ಅಭಿಪ್ರಾಯಪಟ್ಟರು. 
ಅವರು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾದ ಡಾ. ಜೆ. ವಿ. ಗೌಡ ಅವರ 87 ನೇ ಹುಟ್ಟು ಹಬ್ಬಹಬ್ಬದ ಅಂಗವಾಗಿ ಡಾ.ಜಿಗೆನಹಳ್ಳಿ ವಿರುಪನಗೌಡರ ಅಭಿನಂದನಾ ಸಮಿತಿಯು ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನ ನಾಭಿ ವೃದ್ಧಿ ಕೇಂದ್ರದಲ್ಲಿ ಆಯೋಜಿಸಿದ ಗೌರವ ಸಮರ್ಪಣೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಕಾರಣರಾದ ಎಲ್ಲಾ ಮಹನೀಯರನ್ನು ನೆನೆಯುವದು ನಮ್ಮೆಲ್ಲರ ಕರ್ತವ್ಯ ಆಗಿದೆ. ಆದ್ದರಿಂದ ಅನೇಕ ಮಹನೀಯರ ಹೆಸರಿನಲ್ಲಿ ಉಪನ್ಯಾಸ ಮಾಲೆಗಳನ್ನು ಆಯೋಜಿಸುವ ಯೋಜನೆ ಇದೆ ಎಂದ ಅವರು ಡಾ.ಜೆ.ವಿ.ಗೌಡ ಅವರು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಆಗಿದ್ದಾಗ 562 ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ನೇಮಕಾತಿ ಮಾಡಿ ಇತಿಹಾಸ ನಿರ್ಮಿಸಿದವರಲ್ಲಿ ಒಬ್ಬರು ಅವರ ಕೊಡುಗೆ ವಿಶ್ವವಿದ್ಯಾಲಯಕ್ಕೆ ಬಹಳ ಇದೆ ಎಂದ ಅವರು  ಡಾ.ಜೆ.ವಿ.ಗೌಡರ ಹೆಸರಿನಲ್ಲಿ ಕೃಷಿ ಬಿ.ಎಸ್ಸಿ ಮತ್ತು ಎಂ.ಎಸ್ಸಿ ಪದವಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ನೀಡಲಾಗುವದು ಎಂದು ಘೋಷಿಸಿದರು.  

ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಸ್.ಎ.ಪಾಟೀಲ ಮಾತನಾಡಿ ಡಾ.ಜೆ.ವಿ.ಗೌಡ ಅವರು ಒಬ್ಬ ಅತ್ಯುತ್ತಮ ಕೃಷಿ ಸಂಶೋಧಕರಾಗಿದ್ದರು. ಹತ್ತಿ ಮತ್ತು ಅನೇಕ ಬೆಳೆಗಳ ವಿವಿಧ ತಳಿಗಳನ್ನು ಪರಿಚಯಿಸಿದ ಕೀರ್ತಿ ಡಾ.ಜೆ.ವಿ.ಗೌಡ ಅವರಿಗೆ ಸಲ್ಲುತ್ತದೆ ಎಂದ ಅವರು ಡಾ.ಜೆ.ವಿ.ಗೌಡ ಅವರ ಅಪಾರವಾದ ಶಿಷ್ಯರಲ್ಲಿ ಎಂಟು ಕುಲಪತಿಗಳಾಗಿರುವದು ವಿಶೇಷ ಎಂದರು. ಡಾ. ಎಂ.ಪಿ.ಪಾಟೀಲ ಮತ್ತು ಡಾ.ಜೆ.ವಿ.ಗೌಡ ಅವರು ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಭದ್ರ ಬುನಾದಿ ಹಾಕಿದವರು ಎಂದರು. ಧಾರವಾಡದ ಬೀಜಗಳ ಅನ್ವೇಷಣೆ ದೇಶದಲ್ಲಿ ಪ್ರಸಿದ್ಧಿ ಪಡೆದಿದೆ ಎಂದ ಅವರು ನಾನೊಬ್ಬ ಡಾ.ಜೆ.ವಿ.ಗೌಡ ಅವರ ಪರಮಶಿಷ್ಯನಾಗಿದ್ದೇನೆ ಎಂದರು.
 
ಕೃವಿವಿಯ ನಿವೃತ್ತ ಪ್ರಾಧ್ಯಾಪಕ ಡಾ. ಆಯ್.ಎಸ್.ಕಟಗೇರಿ ಅವರು ಡಾ.ಜೆ.ವಿ.ಗೌಡ ಅವರ ಜೀವನದ ಕುರಿತು ಮಾತನಾಡಿ ಡಾ.ಜೆ.ವಿ.ಗೌಡ ಅವರ ಮೇಲೆ ಅವರ ಕುಟುಂಬದ ಸದಸ್ಯರ ವ್ಯಕ್ತಿತ್ವ ಗೌಡ ಅವರ ಮೇಲೆ ಪ್ರಭಾವ ಬೀರಿದ್ದು, ಅವರು ಒಬ್ಬ ವಿಜ್ಞಾನಿಯಾಗಿ ಶೈಕ್ಷಣಿಕ ವಲಯದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದ ಅವರು ಕೃಷಿ ತಜ್ಞ ಡಾ.ಎಮ್.ಎಸ್.ಸ್ವಾಮಿನಾಥನ್  ಸಂಶೋಧನಾ ವಿದ್ಯಾರ್ಥಿ ಆಗಿರುವದು ವಿಶೇಷ ಎಂದ ಅವರು ಡಾ.ಜೆ.ವಿ.ಗೌಡ ಅವರು ‘ಜೆ.ವಿ.ಜಿ' ಎಂದು ಜನಪ್ರಿಯ ಕುಲಪತಿಗಳಾಗಿದ್ದರು ಎಂದರು.
 
ಕೃವಿವಿಯ ವಿಶ್ರಾಂತ ಕುಲಪತಿ ಡಾ.ಜೆ.ವಿ.ಗೌಡ ಅವರು ಅಭಿನಂದನಾ ಸಮಿತಿಯಿಂದ  ಹುಟ್ಟು ಹಬ್ಬದ ಸನ್ಮಾನ ಸ್ವೀಕರಿಸಿ ಮಾತನಾಡಿ ಒಬ್ಬ ಶಿಕ್ಷಕನಿಗೆ ನಿಜವಾದ ಆಸ್ತಿ ಸಂಪತ್ತು ಅವನ ಶಿಷ್ಯಬಳಗ ಆಗಿದೆ ನನ್ನ ಅನೇಕ ಶಿಷ್ಯ ಬಳಗದಲ್ಲಿ ಕುಲಪತಿಗಳಾಗಿ, ಉನ್ನತ ಅಧಿಕಾರಿಗಳಾಗಿರುವದು ನನಗೆ ಹೆಮ್ಮೆಯ ಸಂಗತಿ ಎಂದ ಅವರು ನನ್ನ ಜನ್ಮ ದಿನವನ್ನು ಸಂಭ್ರಮದಿAದ ಆಚರಿಸಿ ಗೌರವ ಸಲ್ಲಿಸುತ್ತಿರುವುದಕ್ಕೆ ಎಲ್ಲರಿಗೂ ನಾನು ಅಭಾರಿಯಾಗಿದ್ದೆನೆ ಎಂದು ಭಾವುಕರಾಗಿ ನುಡಿದರು.

ಡಾ.ಜೆ.ವಿ.ಗೌಡ ಅವರ ವಿದ್ಯಾರ್ಥಿಗಳಾದ ಡಾ.ಎಸ್.ಆರ್ ಭಟ್, ಡಾ. ವಿರಕ್ತಮಠ, ಡಾ. ಸದಾನಂದ ಅವರು ಡಾ.ಜೆ.ವಿ.ಗೌಡ ಅವರ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಕ್ಕಿಂತ ಮುನ್ನ ಕೃವಿವಿಯ ಪ್ರಥಮ ಕುಲಪತಿ ಡಾ.ಜೆ.ವಿ.ಗೌಡ ಅವರ 87 ನೇ ಜನ್ಮದಿನಾಚರಣೆಯ ಅಂಗವಾಗಿ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿರುವ ಬಟಾಣಿಕಲ್ ಗಾರ್ಡನ್ ನಲ್ಲಿ ಗಿಡಗಳನ್ನು ನೀಡಲಾಯಿತು.

ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮಿಜಿ ಮಾತನಾಡಿ ಬದುಕಿರುವ ವರೆಗೂ ಸಮಾಜದಲ್ಲಿ ಇನ್ನೊಬ್ಬರ ಬಾಳಿಗೆ ಬೆಳಕಾಗಿ ಬದುಕುವದೇ ಶ್ರೇಷ್ಠ ಬದಕು,  ಪ್ರತಿಯೊಬ್ಬ ಮನುಷ್ಯನು ಆತ್ಮಸಾಕ್ಷಿಯಾಗಿ ಮತ್ತು ಮನಸಾಕ್ಷಿಯಾಗಿ ಬದುಕಬೇಕು ಅಂತಹವರಲ್ಲಿ ಡಾ.ಜೆ.ವಿ.ಗೌಡ ಒಬ್ಬರು. ಸಮಾಜಕ್ಕೆ ತಮ್ಮದೇ ಆದ ಕೊಡುಗೆ ಗೌಡ ಅವರು ನೀಡಿದ್ದಾರೆ. ಒಬ್ಬ ಕರ್ಮಯೋಗಿ ಆಗಿ ಪ್ರಾಮಾಣಿಕತೆಯಿಂದ ಬಾಳಿದವರಲ್ಲಿ ಡಾ. ಜೆ.ವಿ ಗೌಡ ಒಬ್ಬರು ಎಂದರು. 

ಕಾರ್ಯಕ್ರಮದಲ್ಲಿ ಡಾ.ಜೆ.ವಿ ಗೌಡ ಅವರ ಶಿಷ್ಯ ವರ್ಗ, ಧಾರವಾಡದ ಕೃಷಿ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿಗಳು, ಪ್ರಾಧ್ಯಾಪಕರು ಸೇರಿದಂತೆ ಡಾ.ಜೆ.ವಿ.ಗೌಡ ಅವರ ಕುಟುಂಬ ವರ್ಗದವರು, ಅಭಿಮಾನಿ ಬಳಗದವರು ಈ ಸಂದರ್ಭದಲ್ಲಿ ಹಾಜರಿದ್ದರು. ಡಾ. ಸುರೇಖಾ ಸಂಕನಗೌಡರ, ಕಾರ್ಯಕ್ರಮವನ್ನು ನಿರೂಪಿಸಿದರು ಡಾ.ಎಸ್.ಎಮ್. ಮುಂದಿನಮನಿ ವಂದಿಸಿದರು.
                                   
ಫೊಟೋ ಶಿರ್ಷಿಕೆ 1

ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಧಾರವಾಡ ಕೃವಿವಿಯ ಪ್ರಥಮ ಕುಲಪತಿ ಡಾ. ಜೆ.ವಿ. ಗೌಡ ಅವರ 87 ನೇ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ ಗೌರವ ಸಮರ್ಪಣೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಜೆ.ವಿ. ಗೌಡ ಅವರನ್ನು ಸನ್ಮಾನಿಸಲಾಯಿತು.

ಫೊಟೋ ಶಿರ್ಷಿಕೆ-2
ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಧಾರವಾಡ ಕೃವಿವಿಯ ಪ್ರಥಮ ಕುಲಪತಿ ಡಾ. ಜೆ.ವಿ. ಗೌಡ ಅವರ ೮೭ನೇ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ ಗೌರವ ಸಮರ್ಪಣೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಜೆ.ವಿ. ಗೌಡ ಅವರು ಕೆಕ್ ಕತ್ತರಿಸುವ ಮೂಲಕ ಜನ್ಮ ದಿನವನ್ನು ಆಚರಿಸಿಕೊಂಡರು.
ನವೀನ ಹಳೆಯದು

نموذج الاتصال