ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಪಾತ್ರ ಅತೀವ ಮಹತ್ವದ್ದು-- ಡಾ ಎನ್ ವಾಯ್ ಮಟ್ಟಿಹಾಳ್
ಧಾರವಾಡ:--- ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಪಾತ್ರ ಅತೀವ ಮಹತ್ವದ್ದು, ಏಕೆಂದರೆ ಹಿರಿಯರ ಹೇಳಿಕೆಯಂತೆ ಈ ನಾಡಿನ ಭವಿಷ್ಯ ವನ್ನು ನಿರ್ಮಾಣಗೊಳ್ಳುತ್ತಿರುವುದು ನಾಲ್ಕು ಗೋಡೆಗಳ ಮದ್ಯದಲ್ಲಿಯೇ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಕೌಶಲ್ಯಭರಿತ ಯುವ ಜನಾಂಗವನ್ನು ಕಟ್ಟುವ ಮೂಲಕ ನಾಡಿಗೆ ಉತ್ತಮ ಪ್ರಜೆಗಳನ್ನು, ನಾಗರಿಕರನ್ನು ನಿರ್ಮಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಡಾ ಎನ್ ವಾಯ್ ಮಟ್ಟಿಹಾಳ್ ಹೇಳಿದರು.
ಶ್ರೀ ಬಸವೇಶ್ವರ ರೂರಲ್ ಎಜುಕೇಷನ್ ಆಂಡ್ ಡೆವಲಪ್ಮೆಂಟ್ ಟ್ರಸ್ಟ್ ನ ರೂರಲ್ ಬಿ. ಇಡಿ ಕಾಲೇಜು ಮತ್ತು ವಿ ಹೆಚ್ ಮರದ ಸ್ನಾತಕೋತ್ತರ ಶಿಕ್ಷಣ ವಿಭಾಗ ಸತ್ತೂರ ಧಾರವಾಡದಲ್ಲಿ ಜರುಗಿದ 2023- 24 ನೇ ಸಾಲಿನ ಬಿ. ಇಡಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಬಸವೇಶ್ವರ ರೂರಲ್ ಎಜುಕೇಷನ್ ಆಂಡ್ ಡೆವಲಪ್ಮೆಂಟ್ ಟ್ರಸ್ಟಿನ ಅಧ್ಯಕ್ಷರಾದ ಡಾ ಶರಣಪ್ಪ ಎಂ. ಕೊಟಗಿ ಯವರು ಮಾತನಾಡಿ, ಅಂತಾರಷ್ಟ್ರೀಯ ಮಹಿಳಾ ದಿನದ ಶುಭಾಶಯಗಳನ್ನು ಎಲ್ಲ ವಿದ್ಯಾರ್ಥಿಗಳಿಗೆ ಹೇಳಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ವಿಭಿನ್ನ ಅವಕಾಶಗಳು ಲಭ್ಯವಾಗುತ್ತಿದ್ದೂ ಅವುಗಳನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಸಾಧನೆಗಳನ್ನು ಮಾಡುತ್ತಿದ್ದಾರೆ. ಅಲ್ಲದೇ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾರೆ. ಹಾಗಾಗಿ ಶಿಕ್ಷಕರಗುತ್ತಿರುವ ತಾವು ಮಕ್ಕಳೊಂದಿಗೆ ನಿರಂತರ ಒಡನಾಟವನ್ನು ಹೊಂದಿ ಬೋಧನೆಯನ್ನು ಮಾಡುತ್ತ ಸಮಾಜಕ್ಕೆ ಕಾಣಿಕೆಯನ್ನು ಸಲ್ಲಿಸಬೇಕು. ಸಮಾಜ ಮತ್ತು ದೇಶ ಪರಿವರ್ತನೆಯಾಗಬೇಕಾದರೆ ಶಿಕ್ಷರ ಜವಾಬ್ದಾರಿ ಬಹಳ ಮುಖ್ಯವಾದದ್ದು. ಮತ್ತು 12 ನೇ ಶತಮಾನದಲ್ಲಿ ಬಸವಣ್ಣನವರ ವಾಣಿಯಂತೆ ನಮ್ಮ ಸಂಸ್ಥೆ ಸಾಗುತ್ತಾ ಹೊರಟಿದೆ ಹಾಗಾಗಿ ತಾವೆಲ್ಲರೂ ಶಿಕ್ಷಕರಾಗುವಂತವರು ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಬೆಳಿಸಿಕೊಂಡು ಉತ್ತಮ ಶಿಕ್ಷಕರಗಿ ಎಂದು ಹೇಳಿದರು.
ಕಾಲೇಜಿನ ಪ್ರಚಾರ್ಯರಾದ ಡಾ ಮಹಾಂತೇಶ ಹಿರೇಮಠ ರವರು ಪ್ರಸ್ತವಿಕವಾಗಿ ಮಾತನಾಡಿ ಕಾಲೇಜು ಬೆಳದು ಬಂದು ಹಾದಿಯನ್ನು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಟ್ರಸ್ಟಿಗಳಾದ ನಾಗರಾಜ ಕೊಟಗಿ, ಬಿ. ಇಡಿ ಪ್ರಥಮ ವರ್ಷದ ವಿದ್ಯಾರ್ಥಿ ಒಕ್ಕೂಟದ ಕಾರ್ಯಧ್ಯಕ್ಷರಾದ ಶ್ರೀಮತಿ ಮಂಗಳ ಹಿರೇಮಠ ಬಿ. ಇಡಿ ದ್ವಿತೀಯ ವರ್ಷದ ವಿದ್ಯಾರ್ಥಿ ಒಕ್ಕೂಟದ ಕಾರ್ಯಧ್ಯಕ್ಷರಾದ ಕು ಶಿರಿನ ಹತ್ತಿಮತ್ತೂರ್, ಬಿ. ಇಡಿ ಪ್ರಥಮ ವರ್ಷದ ವಿದ್ಯಾರ್ಥಿ ಪ್ರತಿನಿಧಿಗಳದ ಕು ಪ್ರದೀಪ್ ಮತ್ತಿ ನಿಸರ್ಗ ವರು ಉಪಸ್ಥಿತರಿದ್ದರು.
ಕಾಲೇಜಿನ ಬೋದಕ ಸಿಬ್ಬಂದಿಯವರದ ಎಲ್ ವಾಯ್ ಬುಡ್ಡಣ್ಣವರ, ವಾಗಿಶ್ ಹಿರೇಮಠ, ನವೀನ ಕೊರಡೂರ್, ಶ್ರೀಮತಿ ಅಪರ್ಣ ಅಗಡಿ, ರಂಗಪ್ಪ ದಾಸರ, ಕು ಸ್ನೇಹ ವಡ್ಡಟ್ಟಿ, ಜಿ ಎಲ್ ಕುಲಕರ್ಣಿ, ಶಾಂತಯ್ಯ ಹಿರೇಮಠ ಮತ್ತು ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.