ದೇಶದ್ರೋಹಿ ಕಾಂಗ್ರೇಸ್ ನಾಯಕನ ಮೇಲೆ ಕ್ರಮ ಕೈಗೊಳ್ಳುವ ಬಿಜೆಪಿ ಆಗ್ರಹ

ದೇಶದ್ರೋಹಿ ಕಾಂಗ್ರೇಸ್  ನಾಯಕನ ಮೇಲೆ  ಕ್ರಮ ಕೈಗೊಳ್ಳುವ ಬಿಜೆಪಿ ಆಗ್ರಹ

   ಧಾರವಾಡ 28 : 
ದೇಶದ ಇತಿಹಾಸದಲ್ಲಿ ನಿನ್ನೆ ಕರ್ನಾಟಕದ ಶಕ್ತಿ ಕೇಂದ್ರ ವಿಧಾನಸಭೆಯಲ್ಲಿ  ನಡೆದ ಕಾಂಗ್ರೆಸಿನ ದೇಶದ್ರೋಹಿಗಳು ದೇಶದ ಅನ್ನ ಉಂಡು ಅದೇ ತಾಯಿ ದೇಶಕ್ಕೆ ತೀರಾ ಅವಮಾನ ಮಾಡುವ ಮೂಲಕ ಪಕ್ಕದ ದೇಶದ ಮೇಲಿನ ಪ್ರೀತಿಯಿಂದಾಗಿ ಪಾಕಿಸ್ತಾನ ಪರ ಜಿಂದಾಬಾದ್ ಎಂದು ಘೋಷಣೆ ಕೂಗುವ ಮೂಲಕ ನಮ್ಮ ಭಾರತ ದೇಶಕ್ಕೆ ಅವಹೇಳನ ಅವಮಾನ ಮಾಡುತ್ತಿರುವುದನ್ನು ಭಾರತೀಯ ಜನತಾ ಪಕ್ಷ ಖಂಡಿಸುತ್ತದೆ   ದೇಶ ದ್ರೋಹಿಗಳ ಮೇಲೆ ದೇಶದ್ರೋಹಿ ಮೇಲೆ ಸೂಕ್ತ ಕ್ರಮ ಕೈಗೋಳ್ಳುವಂತೆ ರಾಜ್ಯಪಾಲರನ್ನು  ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಅವರಿಗೆ ಮನವಿ ಅಪಿ೯ಸಿದರು.
     ನಿನ್ನೆ ನಡೆದ ರಾಜ್ಯಸಭಾ ಚುನಾವಣೆ ನಡೆದು ನೂತನ ಸದಸ್ಯರ ಆಯ್ಕೆ ನಡೆದ ಸಂದಭ೯ದಲ್ಲಿ  ನಾಸಿರ್ ಹುಸೇನ ಬೆಂಬಲಿಗರು ''ಪಾಕಿಸ್ತಾನ ಜಿಂದಾಬಾದ್ " ಎಂಬ ಘೋಷಣೆ ಕೂಗುತ್ತ ಕೇಕೆ ಹಾಕುವ ಮೂಲಕ ಭಾರತ ಮಾತೆಗೆ ಅಪಮಾನ ಮಾಡಿದ್ದಲ್ಲದೇ  ಉಂಡ ಮನೆಗೆ ದ್ರೋಹ ಬಗೆದಿರುತ್ತಾರೆ.   ದೇಶದಲ್ಲಿ ಇಂತಹ ದೇಶ ದ್ರೋಹಿಗಳು ಬೇಕೆ ? ಇಂತಹ ಪುಡಾರಿಗಳಿಗೆ ದ್ರೋಹಿಕಾಯ್ದೆ 1948 ರ ಕಲಂ 124 ಎ ಅಡಿಯಲ್ಲಿ ಕ್ರಮ ಕೈಗೊಳ್ಳಲೇಬೇಕು ಮತ್ತು ಇದಕ್ಕೆ ಪ್ರೋತ್ಸಾಹ ನೀಡುತ್ತಿರುವ ಕಾಂಗ್ರೇಸ ನಾಯಕರನ್ನು ಹುಡುಕಿ ಪ್ರತಿಯೊಬ್ಬರಿಗೂ ಕಾನೂನುರೀತ್ಯಾ ಅನೇಕರ ವಿರುದ್ಧ ಕ್ರಮ ಕೈಗೊಂಡರೆ ಮಾತ್ರ ಇಂತಹ ದೇಶದ್ರೋಹಿ ಘಟನೆಗಳನ್ನು ಮರುಕಳಿಸದಂತೆ ತಡೆಯಲು ಸಾಧ್ಯ ಎಂದು ಬಿಜೆಪಿ ಹೇಳಿದೆ.

      ಕಾಂಗ್ರೇಸಿನ ಕೆಲವರು ದೇಶ ಒಡೆಯುವ ಮಾತ್ತು ಕೇಳಿಯೇ ಕಾಂಗ್ರೇಸ ಪುಡಾರಿಗಳಿಗೆ ಕುಮ್ಮಕ್ಕೂ ಸಿಗುತ್ತಿರುವುದು. ಕಾರಣ ರಾಜ್ಯಪಾಲರೆ ಕೂಡಲೇ ಇಂತಹ ಪುಡಾರಿಗಳನ್ನು ಬಂದಿಸುವ ಹಾಗೂ ಶಿಕ್ಷಿಸುವ ಮೂಲಕ ಮತ್ತು ನೈತಿಕತೆ ಇಲ್ಲದ ನೂತನವಾಗಿ ಆಯ್ಕೆಯಾದ ನಾಶೀರ ಹುಸೇನ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ದೇಶದ 140 ಕೋಟಿ ಜನರ ಭಾವನೆಗೆ ಧಕ್ಕೆ ಬರದ ಹಾಗೆ ಕ್ರಮ ಕೈಗೊಳ್ಳಲು ಭಾರತೀಯ ಜನತಾ ಪಕ್ಷ ಆಗ್ರಹಿಸುತ್ತದೆ ಮತ್ತು ಮುಂದೆ ದೇಶದಲ್ಲಿ ಆಗಬಹುದಾದ ಮುಂದಿನ ಹೋರಾಟಗಳಿಗೆ ಆಸ್ಪದ ನೀಡದಿರಲು ತಮ್ಮಲ್ಲಿ ಕೋರುತ್ತೇವೆ ಎಂದು ಬಿಜೆಪಿ ಹೇಳಿದೆ.
      ಈ ಸಂಧರ್ಭದಲ್ಲಿ ಸಂಜಯ ಕಪಟಕರ, ವಿಜಯಾನಂದ ಶಟ್ಟಿ, ಶಿವು ಹೀರೇಮಠ,ಮಲ್ಲಿಕಾರ್ಜಿನ ಬಾಳಿಕಾಯಿ,  ಬಸವರಾಜ ಗರಗ, ಮೋಹನ ರಾಮದುರ್ಗ, ಸುರೇಶ ಬೇದರೆ, ಆನಂದ ಯಾವಗಲ್, ಶಂಕರ ಶೇಳಕೆ, ಸಂತೋಷ ದೇವರಡ್ಡಿ, ನಾಗರಾಜ,ಪವನ ತೀಟೆ, ಶಕ್ತಿ ಹೀರೆಮಠ,  ಮಂಜುನಾಥ ನೀರಲಕಟ್ಟಿ, ಪ್ರಮೂದ ಬಾಗಿಲದ, ವಿನಾಯಕ ಗೊಂದಳ್ಳಿ,  ಉದಯ ಏನಡಿಗೇರಿ, ಮಹಾಂತೇಶೆ ವಿರಕ್ತಮಠ, ಶಫೀ ಬಿಜಾಪುರಿ, ಸಂಜಯ ಘಾಟಗೆ ಹಾಗೂ ಅನೇಕರು ಉಪಸ್ಥಿತರಿದರು.
ನವೀನ ಹಳೆಯದು

نموذج الاتصال