ಕ್ಲೀನ್ ಸ್ವೀಪ್ ಮಾಡಿದ ಸಮಾನಮನಸ್ಕರ ತಂಡ

ಕ್ಲೀನ್ ಸ್ವೀಪ್ ಮಾಡಿದ ಸಮಾನಮನಸ್ಕರ ತಂಡ
ಧಾರವಾಡ 08 : 
ಧಾರವಾಡ ಶಹರ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘದ ಸನ್ 2024-2029 ನೇ ಅವಧಿಗೆ ನಡೆದ ನಿರ್ದೇಶಕರುಗಳ ಚುನಾವಣೆಯಲ್ಲಿ ಧಾರವಾಡ ಶಹರದ ಪ್ರಬುದ್ಧ ಮತದಾರರು ಪ್ರೌಢಿಮೆ ಮೆರೆದು ಸಮಾನಮನಸ್ಕರ ತಂಡದ 13 ಕ್ಕೆ 13 ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕ್ಲೀನ್ ಸ್ವೀಪ್ ಮಾಡಿದ್ದು ಇದು ಐತಿಹಾಸಿಕ ಅಭೂತಪೂರ್ವ ದಾಖಲೆಯಾಗಿದೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ KSPSTA ಹಾಗೂ ಉರ್ದು ಟೀಚರ್ಸ್ ಅಸೋಸಿಯೇಷನ್, ಅನುದಾನಿತ ಶಿಕ್ಷಕರ ಸಂಘದಿಂದ 13 ಅಭ್ಯರ್ಥಿಗಳು ಹಾಗೂ ಸಮಾನಮನಸ್ಕರ ತಂಡದ ವತಿಯಿಂದ 13 ಅಭ್ಯರ್ಥಿಗಳು ಮತ್ತು ಒಬ್ಬರು ಪಕ್ಷೇತರರು ಸ್ಪರ್ಧಿಸಿದ್ದರು .

ನಿನ್ನೆ ನಡೆದ ಚುನಾವಣೆಯಲ್ಲಿ ಸಮಾನಮನಸ್ಕರ ತಂಡದಿಂದ ಗೆದ್ದ ಅಭ್ಯರ್ಥಿಗಳ ವಿವರ
 

ಎಸ್ ಸಿ ಮೀಸಲು ಕ್ಷೇತ್ರದಲ್ಲಿ  ಹರಳಯ್ಯ ಎಂ ದೊಡಮನಿ 179 ಮತಗಳು

ಎಸ್ ಟಿ ಮೀಸಲು ಕ್ಷೇತ್ರದಿಂದ  ಶ್ರೀದೇವಿ ದ್ಯಾವನಕೊಂಡ 201 ಮತಗಳು

ಹಿಂದುಳಿದ ಅ ವರ್ಗ ಮೀಸಲು ಕ್ಷೇತ್ರದಿಂದ  ಎಂ ಆರ್  ಕಬ್ಬೇರ್ 206 ಮತಗಳು

ಹಿಂದುಳಿದ ಬ ವರ್ಗ ಮೀಸಲು ಕ್ಷೇತ್ರದಿಂದ  ಮಹೇಶ ಬಾಳಗಿ 196 ಮತಗಳು

ಮಹಿಳಾ ಮೀಸಲು ಕ್ಷೇತ್ರದಿಂದ  ಸುಮಿತಾ ಹಿರೇಮಠ  
179 ಮತಗಳು

 ಜಬೀನಾ ಮ ಹುನಗುಂದ 151 ಮತಗಳು

ಸಾಮಾನ್ಯ ವರ್ಗದಲ್ಲಿ
 ಆಸಿಫ್ ಸವಣೂರ ಅವರು 155 ಮತಗಳು

 ಇರ್ಪಾನ್ ಕವಲಗೇರಿ 130 ಮತಗಳು

 ನೀಲಪ್ಪ ರಾ ಕಟ್ಟಿಮನಿ 178 ಮತಗಳು

 ಪ್ರಕಾಶ ರಾಠೋಡ್ 181 ಮತಗಳು

 ಪ್ರಭಾವತಿ ನಿಂಬನಗೌಡ್ರ 
160 ಮತಗಳು

 ಮಂಜುಳಾ ಹಾರಿಕೊಪ್ಪ 166 ಮತಗಳು 

 ಶಕುಂತಲಾ ಅರಮನಿ 184 ಮತಗಳು
 
ಭರ್ಜರಿ ಅಂತರದಿಂದ ಸಮಾನಮನಸ್ಕರ ತಂಡದ ಅಭ್ಯರ್ಥಿಗಳು ವಿಜಯಪತಾಕೆ ಹಾರಿಸಿದ್ದು ಇದರ ಸಂಪೂರ್ಣ  ಯಶಸ್ಸು ನಮ್ಮ ಧಾರವಾಡ ಶಹರದ ಎಲ್ಲ ಸದಸ್ಯರಿಗೂ ಸಲ್ಲುತ್ತದೆ. ಕೊಟ್ಟ ಮಾತಿನಂತೆ ಎಲ್ಲ ಭರವಸೆಗಳನ್ನು ಖಂಡಿತವಾಗಿಯೂ ಈಡೇರಿಸುತ್ತೇವೆ.

ಈ ಸಂದರ್ಭದಲ್ಲಿ ಸಮಾನಮನಸ್ಕರ ತಂಡದ  ವಿ ಎಂ ಪಾಟೀಲ ,  ಲತಾ ಮುಳ್ಳೂರ್ , ಪಿ ಎಫ್ ಗುಡೇನಕಟ್ಟಿ,  ವಿ ಜಿ ಸೇತಸನದಿ,  ಆರ್ ಎಸ್ ಮುಲ್ಲಾ, ನಾಗರಾಜ್ ತಳವಾರ, ರಾಜು ಮಾಳವಾಡ, ಶಂಕರ್ ಘಟ್ಟಿ,ಚಂದ್ರು ತಿಗಡಿ, ಸುಬೇದಾರ್, ಹೊಂಬಳ  ಪ್ರದೀಪ್ ಶೆಟ್ಟಿ,  ಆರ್ ಕೆ ಪಿಂಜಾರ್,,  ಪ್ರಭಾವತಿ ನವಲೂರ,  ವಿ ಪಿ ಬಡಿಗೇರ್, ಭಾಗ್ಯ ಕ್ಯಾಸನೂರ್, ಅಶೋಕ ಬಳಿಗೇರ್,  ವಿಕ್ಟೋರಿಯಾ ಫರ್ನಾಂಡೀಸ್,  ಶಶಿಕಲಾ ನಾಯ್ಕರ್,  ಸಂತೋಷ ಕರಮಳ್ಳವರ,  ಎನ್ ಬಿ ದ್ಯಾಪೂರ  ಹಾಗೂ  ಎಲ್ಲ  ಸರಕಾರಿ ಮತ್ತು ಅನುದಾನಿತ ಶಾಲೆ ಶಿಕ್ಷಕರು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال