ಮಕ್ಕಳು ಸ್ವರ್ಗದಿಂದ ಬಂದ ಹೂವುಗಳು, ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳ ಅನಾವರಣ ಅತೀ ಅವಶ್ಯಕ - ಬಸವರಾಜ ಗುರಿಕಾರ

ಮಕ್ಕಳು ಸ್ವರ್ಗದಿಂದ ಬಂದ ಹೂವುಗಳು, ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳ ಅನಾವರಣ ಅತೀ ಅವಶ್ಯಕ - ಬಸವರಾಜ ಗುರಿಕಾರ

ಧಾರವಾಡ: 
ಮಕ್ಕಳು ಸ್ವರ್ಗದಿಂದ ಬಂದ ಹೂಗಳಿದ್ದಂತೆ, ಹಳ್ಳಿಗಾಡಿನ ಮಕ್ಕಳಲ್ಲಿ ವಿವಿಧ ಕಲೆಗಳನ್ನು ಹೊರತರುವುದು, ಕೇವಲ ಸರಕಾರ ಮತ್ತು ಇಲಾಖೆ ಮಾಡಿದರೆ ಸಾಲದು, ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರಹಾಕಲು ಇಂತಹ ಸಂಸ್ಥೆಗಳು ಮುಂದೆ ಬರಲಿ ಎಂದು ಕರೆ ನೀಡಿದರು, ಅವರು
ಧಾರವಾಡದ ರಂಗಾಯಣದಲ್ಲಿ, ಚೇತನ ಫೌಂಡೇಷನ್ ಕರ್ನಾಟಕ ವತಿಯಿಂದ ಆಯೋಜಿಸಿದ್ದ,ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಿರಿಯ ಕವಿಗಳಿಂದ ಮಕ್ಕಳಿಗಾಗಿ ಮುಕ್ತ ಕವಿಘೋಷ್ಠಿ, ಶಿಕ್ಷಣ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮತ್ತು ಉತ್ತಮ ಶಾಲೆ, ವಿಶ್ವಮಾನವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಗ್ರಾಮ ಮಟ್ಟದಲ್ಲಿ ಇರುವ ಪ್ರತಿಭೆಗಳನ್ನು ಹೊರತರಲು ನಾನು ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು, ಪ್ರಾಸ್ತಾವಿಕವಾಗಿ ಮಾತನಾಡಿದ ಚೇತನ ಫೌಂಡೇಷನ್ ಅದ್ಯಕ್ಷರಾದ ಚಂದ್ರಶೇಖರ ಮಾಡಲಗೇರಿ ಚಿಣ್ಣರ ಚಿಲಿಪಿಲಿ ಇದೊಂದು ವಿನೂತನ ಕಾರ್ಯಕ್ರಮವಾಗಿದೆ,
 ಮಕ್ಕಳಲ್ಲಿ ಹುದುಗಿರುವ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು, ಜೊತೆಗೆ ಈ ನಾಡಿನ ಎರಡು ಪ್ರಮುಖ ಶಾಲೆಗಳು ಶ್ರೀ ನಾಗಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮಲಘಾನ, ಬೆಂಗಳೂರಿನ ದಕ್ಷಿಣ ವಲಯದ ಚೋಳನಾಯಕನಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಲಕ್ಷ್ಮೀಪೂರ ಗುರುತಿಸಿ, ಸತ್ಕರಿಸಲಾಗುತ್ತಿದೆ ಎಂದರು. ಅದ್ಯಕ್ಷತೆ ವಹಿಸಿದ್ದ ಬೆಳಗಾವಿಯ ಸಾಹಿತಿ ತೇರಿಗೆ ಅಧಿಕಾರಿ ಸುರೇಶ್ ಕೋರಕೊಪ್ಪ ಮಾತನಾಡಿ,ಮಣ್ಣಿನ ಮುದ್ದೆಯಂತಿರುವ ಮಣ್ಣಿನ ಮುದ್ದೆಯಂತಿರುವ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡಬೇಕು, ಮಕ್ಕಳು ದೇವರಿಗೆ ಸಮಾನ,ಶಿಕ್ಷಣ ವ್ಯವಸ್ಥೆ ತುಂಬಾ ಸುಧಾರಣೆ ಆಗಿದೆ, ಒಳ್ಳೆಯ ಕೆಲಸ ಮಾಡಿದರೆ ಇಲಾಖೆ ಗುರುತಿಸದಿದ್ದರೂ ಸಮಾಜ ಗುರುತಿಸಲಿದೆ, ಇದಕ್ಕೆ ತಾಜಾ ಉದಾಹರಣೆ, ಬೆಂಗಳೂರಿನ ಲಕ್ಷ್ಮೀಪೂರದ ಕಿರಿಯ ಪ್ರಾಥಮಿಕ ಶಾಲೆ ಮತ್ತು ಮಲಘಾಣದ ಶ್ರೀ ನಾಗಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆ ಎಂದರು. ಶಿಕ್ಷಕ ಎಲ್ ಐ ಲಕ್ಕಮ್ಮನವರ ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಚರಂತಿಮಠ, ಫೀರಸಾಬ ನದಾಫ, ಪ್ರಕಾಶ ಗುಡಮನಿ, ಜ್ಯೋತಿ ಗೌರಿಮಠ ಮುಂತಾದವರು ಮಾತನಾಡಿದರು. ಧಾರವಾಡದ ಬಿ ಆರ್ ಸಿಯ ಸಮನ್ವಯಾಧಿಕಾರಿ ಮಂಜುನಾಥ ಅಡಿವೇರ ಮಂಜುಳಾ ಜ್ಯೋತಿ ಎಂ ಎಸ್ ಗಾಣಿಗೇರ ಆದರ್ಶ ದಂಪತಿಗಳಾದ ಮಂಜುನಾಥ ಫ ಪವಾಡಿ ರಾಜೇಶ್ವರಿ ಮ ಪವಾಡಿ ಮುಂತಾದವರು ವೇದಿಕೆಯ ಮೇಲಿದ್ದರು, ಶಿಕ್ಷಕಿ ವಂದನಾ ಕರಾಳೆ ಪ್ರಾರ್ಥಿಸಿದರು, ಶರಣರು ಚಿಕ್ಕನಗೌಡರ ನಿರೂಪಿಸಿದರು ಭಾಗ್ಯಶ್ರಿ ರಜಪೂತ ವಂದಿಸಿದರು‌.
ನವೀನ ಹಳೆಯದು

نموذج الاتصال