ಶ್ರೀ ದತ್ತ ಜಯಂತಿ ಮಹೋತ್ಸವ.

ಶ್ರೀ ದತ್ತ ಜಯಂತಿ ಮಹೋತ್ಸವ. 
ಧಾರವಾಡ: 
ಗಾಂಧೀಚೌಕ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಶ್ರೀ ಶಾಲಿವಾಹನ ಶಕೆ 1945 ನೇ ಶೋಭನನಾಮ ಸಂವತ್ಸರ, ದಕ್ಷಿಣಾಯನ ಹೇಮಂತ ಋತು ಮಾರ್ಗ ಶೀರ್ಷ ಶುಕ್ಲ ಸಪ್ತಮಿ ಮಂಗಳವಾರ ದಿ 19 ರಿಂದ ಮಾರ್ಗಶೀರ್ಷ ಕೃಷ್ಣ ಪಕ್ಷ ಪ್ರತಿಪದಾ ಬುಧವಾರ ದಿನಾಂಕ 27  ರ ವರೆಗೆ ಶ್ರೀ ಮ।।ಜ ॥ ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆ, ಶ್ರೀ ದತ್ತ ಯುವಕ ಮಂಡಳ, ಶ್ರೀ ದತ್ತ ಭಜನಾ ಮಂಡಳಿ ಹಾಗೂ ಹಾಲಗೇರಿ ಹನುಮಂತ ದೇವರ ಸಂಸ್ಥೆ,ಇವರ ಸಹಕಾರದೊಂದಿಗೆ
ಶ್ರೀ ದತ್ತಾತ್ರೇಯ ಜಯ೦ತಿ ಮಹೋತ್ಸವವು ವಿಧಿವತ್ತಾಗಿ ಜರುಗುತ್ತಿದ್ದು , ಹಗಲು ರಾತ್ರಿ ಅಖಂಡ ದತ್ತನಾಮಸ್ಮರಣೆ ನಡೆಯುತ್ತಿದ್ದು,ಬೆಳಿಗ್ಗೆ ರುದ್ರಾಭಿಷೇಕ,ಪುಷ್ಪಾಲಂಕಾರ,ಅಚ೯ಕರಾದ ಬಾಲು ಗೋಡಬೋಲೆ ನೆರವೇರಿಸಿದರು. 
ಹೋಮದ ನೇತೃತ್ವ
ಅನಂತ ಗೋಡಖಿಂಡಿ ವಹಿಸಿದ್ದು. ನಿನ್ನೆ ಅನ್ನಪೂರ್ಣೆಶ್ವರಿ ಹೋಮ ಜರುಗಿತು ಇಂದು ದತ್ತಯಾಗ ಕಾರ್ಯಕ್ರಮ ನಡೆಯಿತು, ಸಾಯಂಕಾಲ  ಶ್ರೀದತ್ತ ಜನನ ಅಂಗವಾಗಿ ತೊಟ್ಟಿಲೋತ್ಸವ, ಶ್ರೀ ಬಾಲದತ್ತಾತ್ರೇಯನಿಗೆ ನಾಮಕರಣ,  ರಾತ್ರಿ 8 ಕ್ಕೆ ಶ್ರೀ ದತ್ತ ಉತ್ಸವ ಮೂರ್ತಿಯ ಪಾಲಖಿ ಸೇವೆ ಜರುಗಲಿದೆ,
ಈ ಸಂದರ್ಭದಲ್ಲಿ ದತ್ತಾತ್ರೇಯ ಸಂಸ್ಥೆಯ ಅಧ್ಯಕ್ಷ ಪ್ರಕಾಶ ವ. ದೇಸಾಯಿ, ಉಪಾಧ್ಯಕ್ಷ
ಕೃಷ್ಣಾ ಗು. ಪಾಟೀಲ, ಖಜಾಂಚಿ
 ಸಂಜೀವ ಭಿ. ಕುಲಕರ್ಣಿ,  ಕಾರ್ಯದರ್ಶಿ ತ್ರಯಂಬಕ ಗೋಡಖಿಂಡಿ, ಸದಸ್ಯರಾದ  ಹನುಮಂತ ಗೋ. ಕಿತ್ತೂರ,   ರವಿ ನರಗುಂದ, ಅನಂತ ಪಾ. ಗೋಡಖಿಂಡಿ,  ಪ್ರಭಾಕರ ಗದ್ರೆ,
 ಶೇಖರ ಬಿ. ಜಾಧವ, ಸೇರಿದಂತೆ ಅಸಂಖ್ಯಾತ ದತ್ತ ಭಕ್ತರು ಕಾರ್ಯಕ್ರಮಗಳಲ್ಲಿ ಪಾಲ್ಗೂಂಡಿದ್ದರು,ನಾಳೆ 27 ರಂದು ಮಧ್ಯಾಹ್ನ ಮಹಾಪ್ರಸಾದೂಂದಿಗೆ ಕಾರ್ಯಕ್ರಮ ಸಂಪನ್ನ ಗೋಳ್ಳುವದು.
ನವೀನ ಹಳೆಯದು

نموذج الاتصال