ರಾಜ್ಯ ಶಿಕ್ಷಣ ನೀತಿ ಆಯೋಗದ ಸಭೆ- ಜನಪರ ಶಿಕ್ಷಣ ನೀತಿಗೆ ಎಐಡಿಎಸ್ಓ ಆಗ್ರಹ.

ರಾಜ್ಯ ಶಿಕ್ಷಣ ನೀತಿ ಆಯೋಗದ ಸಭೆ- ಜನಪರ ಶಿಕ್ಷಣ ನೀತಿಗೆ ಎಐಡಿಎಸ್ಓ ಆಗ್ರಹ.
    ಧಾರವಾಡ 
ಕರ್ನಾಟಕದಲ್ಲಿ ಜನಪರ ಶಿಕ್ಷಣ ನೀತಿಯನ್ನು ರೂಪಿಸುವ ಕುರಿತು, ಇಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ, ರಾಜ್ಯ ಶಿಕ್ಷಣ ನೀತಿ ಆಯೋಗವು ಸಂವಾದ ಕಾರ್ಯಕ್ರಮವನ್ನ ಎಪ೯ಡಿಸಲಾಗಿತ್ತು.
       ರಾಜ್ಯದ ವಿದ್ಯಾರ್ಥಿ ಸಮೂಹವನ್ನು ಪ್ರತಿನಿಧಿಸಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯು ಈ ಸಭೆಯಲ್ಲಿ ಭಾಗವಹಿಸಿ. ರಾಜ್ಯದಲ್ಲಿ ಬೃಹತ್ ವಿದ್ಯಾರ್ಥಿಗಳ ಹೋರಾಟಕ್ಕೆ ಕಾರಣವಾಗಿದ್ದ, ಹಿಂದಿನ ಸರ್ಕಾರವು ಜಾರಿಗೊಳಿಸಿದ್ದ ಎನ್ಈಪಿ-2020 ರ ಕರಾಳ ಅಂಶಗಳನ್ನು, ಸಮಿತಿಯ ಮುಂದೆ ಮಂಡಿಸಲಾಯಿತು. 
     ನಮ್ಮ ದೇಶದ ನವೋದಯ ಚಳುವಳಿಯ ಹರಿಕಾರರು ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳ ಆಶಯದಂತೆ ಎಲ್ಲ ವಿದ್ಯಾರ್ಥಿಗಳಿಗೂ ಶಿಕ್ಷಣವನ್ನು ಒದಗಿಸುವ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವು ವಹಿಸಿಕೊಳ್ಳಬೇಕು. ಲಾಲಾ ಲಜಪತ್ ರಾಯ್ ಅವರು ಹೇಳಿರುವಂತೆ, "ಶಿಕ್ಷಣಕ್ಕೆ ಹಣಕಾಸು ಒದಗಿಸುವುದು ಸರ್ಕಾರಿ ಖಜಾನೆಯ ಮೊದಲ ಆದ್ಯತೆಯಾಗಬೇಕು" ಎಂದು ಮಂಡಿಸಿದರು. ಶಿಕ್ಷಣದ ಖಾಸಗಿಕರಣ ಮತ್ತು ವ್ಯಾಪಾರಿಕರಣದ ನೀಲಿನಕ್ಷೆಯಾಗಿರುವ ಎನ್‌ಈಪಿ-2020ನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು. ಈಗಾಗಲೇ ಅನುಷ್ಠಾನಗೊಳಿಸಿರುವ, ಆರ್ಥಿಕ ಸ್ವಾಯತ್ತ ಸಂಸ್ಥೆಗಳನ್ನು ಕೊನೆಗಾಣಿಸಬೇಕು. ವಿಲೀನೀಕರಣದ ಹೆಸರಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳ ಮುಚ್ಚುವಿಕೆಯನ್ನು ಕೈಬಿಡಬೇಕು. ಕೌಶಲ್ಯ ಅಭಿವೃದ್ಧಿಯ ಹೆಸರಿನಲ್ಲಿ ಒದಗಿಸಲಾಗುವ ವೃತ್ತಿ ಶಿಕ್ಷಣವು ಶಿಕ್ಷಣದ ಅಡಿಪಾಯವನ್ನೇ ಅಲುಗಾಡಿಸುತ್ತದೆ. ಎಲ್ಲ ವಿದ್ಯಾರ್ಥಿಗಳು ಎಲ್ಲ ವಿಷಯಗಳನ್ನು ಕಲಿಯಬೇಕೆಂಬ ಬಣ್ಣದ ಮಾತಿನೊಂದಿಗೆ, ಕಲಾವಿಭಾಗದ ವಿದ್ಯಾರ್ಥಿಯು ಕಡ್ಡಾಯವಾಗಿ ವಿಜ್ಞಾನದ ವಿಷಯವನ್ನು, ವಿಜ್ಞಾನದ ವಿದ್ಯಾರ್ಥಿಯು ಕಡ್ಡಾಯವಾಗಿ ವಾಣಿಜ್ಯ ವಿಭಾಗದ ವಿಷಯವನ್ನು ಕಲಿಯಲು ಒತ್ತಾಯ ಪಡಿಸುವ ಬಹು ಶಿಸ್ತೀಯ ಪದ್ದತಿ. ಬಹು ಆಗಮನ -ನಿರ್ಗಮನ ಪದ್ಧತಿಯು,  ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಹೊಂದಲು ಪೂರಕ ವಾತಾವರಣವನ್ನು ನಿರ್ಮಿಸುವ ಬದಲು, ಕಾಲೇಜನ್ನು ತೊರೆಯಲು ಉತ್ತೇಜನ ನೀಡುತ್ತ ಡ್ರಾಪ್ ಔಟ್ ಗಳನ್ನು ಶಾಸನಬದ್ಧಗೊಳಿಸುವ ಬಹು ಆಗಮನ-ನಿರ್ಗಮನ ಪದ್ಧತಿಯನ್ನು ಕೈಬಿಡಬೇಕು. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಲ್ಲಿ ಆತಂಕವನ್ನು ಸೃಷ್ಟಿ ಮಾಡಿರುವ ನಾಲ್ಕು ವರ್ಷಗಳ ಪದವಿ ವ್ಯವಸ್ಥೆ. ಶಿಕ್ಷಣವನ್ನು ಜಾಗತಿಕ ಮಟ್ಟದ ವ್ಯಾಪಾರಿ ಸರಕನ್ನಾಗಿಸುವ ಖಾಸಗಿ ಹಾಗೂ ವಿದೇಶಿ ವಿಶ್ವವಿದ್ಯಾಲಯಗಳು. ಈ ಮುಂತಾದ ವಿಷಯಗಳ ಕುರಿತು ವಿದ್ಯಾರ್ಥಿ ಸಮೂಹದ ಅಭಿಪ್ರಾಯಗಳನ್ನು ಮಂಡಿಸಲಾಯಿತು.
     ಮೂಲಭೂತವಾಗಿ, ಸರ್ಕಾರವು ಸಾರ್ವಜನಿಕ ಶಿಕ್ಷಣಗಳು ಸಂಸ್ಥೆಗಳನ್ನು ಬಲಪಡಿಸಬೇಕು. ಈ ನಿಟಲ್ಲಿ ಜನರ ತೆರಿಗೆ ದುಡ್ಡನ್ನು, ಶಿಕ್ಷಣಕ್ಕಾಗಿ ಆದ್ಯತೆಯ ಮೇರೆಗೆ ವಿನಿಯೋಗಿಸಬೇಕು. ಪಠ್ಯಕ್ರಮದ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ವೈಜ್ಞಾನಿಕ-ಧರ್ಮನಿರಪೇಕ್ಷ ಅಂಶಗಳನ್ನು ಬಲಪಡಿಸಬೇಕು. ಪ್ರತಿ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಅಧ್ಯಾಪಕರು ಸೇರಿದಂತೆ ಕಟ್ಟಡ ಹಾಗೂ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂಬ ಹಲವಾರು ಬೇಡಿಕೆಗಳನ್ನು ಸಮಿತಿಯ ಮುಂದೆ ಇಡಲಾಯಿತು. 
     ಸಂಘಟನೆಯ ರಾಜ್ಯ ಸಮಿತಿಯ ಕಚೇರಿ ಕಾರ್ಯದರ್ಶಿಯಾದ ಮಹಾಂತೇಶ್ ಬೀಳೂರ್ ನೇತೃತ್ವದ ವಿದ್ಯಾರ್ಥಿ ನಿಯೋಗದಲ್ಲಿ, ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ರವಿಕಿರಣ್, ಪೂಜಾ ನಂದಿಹಳ್ಳಿ, ಶಶಿಕಲಾ ಮೇಟಿ ಹಾಗೂ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯರಾದ ಸಿಂಧು ಕೌದಿ ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: 9945564891.
ನವೀನ ಹಳೆಯದು

نموذج الاتصال