ಪಿಎಸ್‌ಐಗಳ ನೇಮಕಾತಿ -- ಕೊನೆಗೂ ಅನ್ಯಾಯಕ್ಕೆ ನ್ಯಾಯ ಸಿಕ್ಕಿದೆ.

(ಇಂದು ನೀಡಿದ ಹೇಳಿಕೆ) 
ಪಿಎಸ್‌ಐಗಳ ನೇಮಕಾತಿ -- ಕೊನೆಗೂ ಅನ್ಯಾಯಕ್ಕೆ ನ್ಯಾಯ ಸಿಕ್ಕಿದೆ.
 
     ಧಾರವಾಡ:--ಪಿಎಸ್‌ಐಗಳ ನೇಮಕಾತಿಗಾಗಿ 2021ರ ಅಕ್ಟೋಬರ್ 3 ರಂದು ರಾಜ್ಯದ 92 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಆಗ ಒಟ್ಟು 54,289 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆ ಬರೆದ 52 ಅಭ್ಯರ್ಥಿಗಳು ಕಲಬುರಗಿ, ಬೆಂಗಳೂರು, ತುಮಕೂರು ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಬ್ಲೂ ಟೂತ್ ಬಳಕೆ, ಓ ಎಂ ಆರ್ ಶೀಟ್ ತಿದ್ದಿದ ಆರೋಪ ಸೇರಿದಂತೆ ಹಲವು ಗಂಭೀರ ಪ್ರಮಾಣದ ಆರೋಪ ಕೇಳಿಬಂದಿದ್ದವು. ತಕ್ಷಣ  ದಾಖಲೆ ಸಮೇತ  ಅಂದಿನ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ ಮಾಡಿ ಸಿಐಡಿ ತನಿಖೆ ನಡೆಸಲು ಒತ್ತಾಯಿಸಲಾಗಿತ್ತು ಕೊನೆಗೂ
ಕೊನೆಗೂ ಅನ್ಯಾಯಕ್ಕೆ ನ್ಯಾಯ ಸಿಕ್ಕಿದೆ. ರಾಜ್ಯದ ಹೈಕೋರ್ಟ್ 
 ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದ್ದ ಪಿಎಸ್ಐ 545  ಹುದ್ದೆಗಳಿಗೆ ಮರುಪರೀಕ್ಷೆ ನಡೆಸುವಂತೆ ಮಹತ್ವದ ಆದೇಶ ಹೊರಡಿಸಿದ್ದು ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಧಾರವಾಡ ಜನಜಾಗೃತಿ ಸಂಘ ಉಪಾಧ್ಯಕ್ಷರಾದ ನಾಗರಾಜ ಕಿರಣಗಿ ಹೇಳಿದ್ದಾರೆ.
   ಈ ಕುರಿತು ಹೇಳಿಕೆ ನೀಡಿರುವ ಅವರು, 
 ನಿರಂತರವಾಗಿ ಹೋರಾಟ, ಒತ್ತಡ ನಡೆಸಿದ ಪರಿಣಾಮ ಸಿಐಡಿ ಒಟ್ಟು 110  ಜನರನ್ನು ಬಂಧಿಸಿತ್ತು. ಅಲ್ಲದೆ, ಈ 52 ಅಭ್ಯರ್ಥಿಗಳು ಯಾವುದೇ ಪೊಲೀಸ್ ನೇಮಕಾತಿಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿತ್ತು. ಜೊತೆಗೆ ಎಡಿಜಿಪಿ ಶ್ರೇಣಿಯ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದ ಅಮೃತ್ ಪಾಲ್ ಅವರನ್ನು ಅಕ್ರಮ ನೇಮಕಾತಿಗೆ ಸಹಕರಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು‌.
ಆ ಮೂಲಕ ಅಂದು  ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ  ನಿರಂತರವಾಗಿ ಸಾವಿರಾರು ಅಭ್ಯರ್ಥಿಗಳ ಜೊತೆಗೆ ಹತ್ತು ಹಲವು ಹೋರಾಟದ ನೇತೃತ್ವ ವಹಿಸಿದ್ದು ನಮ್ಮ ಜನಜಾಗೃತಿ ಸಂಘ ಹಾಗೂ ಅಧ್ಯಕ್ಷರಾದ ಬಸವರಾಜ ಕೊರವರ ಹಾಗೂ ಉಪಾಧ್ಯಕ್ಷನಾಗಿ  ನಾನು ಮತ್ತು ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ವಿದ್ಯಾರ್ಥಿ ಮುಖಂಡ ಸುರೇಶ ಕೋರಿ, ರವಿಶಂಕರ್ ಮಾಲಿ ಪಾಟೀಲ, ವಿನೋದ ಶೆಟ್ಟಿ, ಅರುಣ್,  ಹಾಗೂ ಸಾವಿರಾರು ಅಭ್ಯರ್ಥಿಗಳು ಹೋರಾಟ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು ಎಂದಿದ್ದಾರೆ.
    ಕೊನೆಗೂ ಅನ್ಯಾಯಕ್ಕೆ ನ್ಯಾಯ ಸಿಕ್ಕಿದೆ. ರಾಜ್ಯದ ಹೈಕೋರ್ಟ್ 
 ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದ್ದ ಪಿಎಸ್ಐ 545  ಹುದ್ದೆಗಳಿಗೆ ಮರುಪರೀಕ್ಷೆ ನಡೆಸುವಂತೆ ಮಹತ್ವದ ಆದೇಶ ಹೊರಡಿಸಿದೆ.
ಹೈಕೋರ್ಟ್ ದ್ವಿಸದಸ್ಯ ಪೀಠದ ನ್ಯಾಯಮೂರ್ತಿ ಗಳಾದ ಪಿ.ಎಸ್.ದಿನೇಶ್ ಕುಮಾರ್ ಹಾಗೂ ಟಿ.ಜಿ.ಶಿವಶಂಕರೇಗೌಡ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿರುವುದನ್ನು ನಾವು ಮುಕ್ತ ಕಂಠದಿಂದ ಸ್ವಾಗತಿಸುತ್ತೇವೆ ಎಂದಿದ್ದಾರೆ.
    ಅದೂ ಅಲ್ಲದೆ, ಸ್ವತಂತ್ರ ಸಂಸ್ಥೆಯಿಂದ ಪರೀಕ್ಷೆ ನಡೆಸಲು ರಾಜ್ಯ ಸರಕಾರಕ್ಕೆ ಸೂಚನೆ ನೀಡಿದ್ದು, 
ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದ ಆರೋಪದ ಹಿನ್ನೆಲೆಯಲ್ಲಿ ನೇಮಕಾತಿ ಸಂಬಂಧ ಈ ಹಿಂದೆ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸಿ, ನೂತನವಾಗಿ ಪರೀಕ್ಷೆ ನಡೆಸಿ ರಾಜ್ಯದ 56 ಸಾವಿರ ಪಿಎಸ್ ಐ ಆಕಾಂಕ್ಷಿಗಳ ಹಾಗೂ ಅವರ ಕುಟುಂಬದ ಸದಸ್ಯರ ಪರವಾಗಿ ನಮ್ಮ ಜನಜಾಗೃತಿ ಸಂಘದ ನಿರಂತರವಾದ ಹೋರಾಟಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ನಾವು ಚುರ ಋಣಿಯಾಗಿದ್ದೇವೆ.
ತಡವಾಗಿಯಾದರೂ ಬಡವರ ಮಕ್ಕಳಿಗೆ ನ್ಯಾಯ ದೊರಕಿದೆ‌.
    ಕೊನೆಗೂ ಸತ್ಯ ಮೇವ ಜಯತೆ ಆಗಿದೆ. ಮತ್ತೊಮ್ಮೆ ಕತ್ತಲೆ ಸರಿದು ಎಲ್ಲಡೆ ಬೆಳಕು ಹರಡಲಿ. ಬಡವರ ಮಕ್ಕಳೊಂದಿಗೆ, ನೊಂದು ಬೆಂದವರೊಂದಿಗೆ, ನ್ಯಾಯಕ್ಕಾಗಿ ಸದಾ ಜನಜಾಗೃತಿ ಸಂಘ ನಿಮ್ಮೊಂದಿಗೆ ಇರಲಿದೆ ಎಂದು  ನಾಗರಾಜ ಕಿರಣಗಿ ಹೇಳಿದ್ದಾರೆ.

ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: 9945564891
ನವೀನ ಹಳೆಯದು

نموذج الاتصال