ಕೆ.ಸಿ.ಸಿ. ಬ್ಯಾಂಕ್ ಅತ್ಯಂತ ಅಭಿವೃದ್ಧಿಯತ್ತ ದಾಪುಗಾಲು -- ಶೀಘ್ರ 17 ನೂತನ ಶಾಖೆ ಆರಂಭ.
ಧಾರವಾಡ 27 :
ಕೆ.ಸಿ.ಸಿ. ಬ್ಯಾಂಕ್ ಅತ್ಯಂತ ಅಭಿವೃದ್ಧಿಯಂತ ಧಾಪುಗಾಲು ಹಾಕುವ ನಿಟ್ಟಿನಲ್ಲಿ ನೂತನ ಆಡಳಿತ ಮಂಡಳಿಯು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತವೆ ಬರುವ ದಿನಗಳಲ್ಲಿ ಅವಿಬಾಜೀತ ಧಾರವಾಡ ಜಿಲ್ಲೆಯಲ್ಲಿ ನೂತನ ಬ್ಯಾಂಕಿನ 17 ಶಾಖೆಗಳನ್ನು ಆರಂಭಿಸಲು ನಿಧ೯ರಿಸಲಾಗಿದೆ ಎಂದು ಕೆ.ಸಿ.ಸಿ. ಬ್ಯಾಂಕ್ಅಧ್ಯಕ್ಷರಾದ ಶಿವಕುಮಾರಗೌಡ ಪಾಟೀಲ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ನೂತನ ಶಾಖೆಯ ಆರಂಭಿಸಿದ ನಂತರ ಎಲ್ಲಾ ತಾಲೂಕು, ಗ್ರಾಮೀಣ ಭಾಗದಲ್ಲಿ ಇನ್ನಷ್ಟು ಬ್ಯಾಂಕಿನ ಶಾಖೆಗಳನ್ನು ಆರಂಭಿಸಲು ಆರ್.ಬಿ.ಐ ಗೆ ಪತ್ರಬರೆದು ಒತ್ತಾಯಿಸುತ್ತೆವೆ ಶೀಘ್ರದಲ್ಲಿಯೇ ಪೋನ್ ಫೇ, ಎಟಿಎಮ್ ಗಳ ವಿತರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಕೃಷಿಸಾಲ ಸೌಲಭ್ಯದಡಿ ಕೆ.ಸಿ.ಸಿ. ಬ್ಯಾಂಕು ಧಾರವಾಡ , ಗದಗ ಮತ್ತು ಹಾವೇರಿ ಜಿಲ್ಲೆಗಳ ಕಾರ್ಯವ್ಯಾಪ್ತಿಯಲ್ಲಿನ ಲಕ್ಷಾಂತರ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅವಶ್ಯವಾದ ಸಾಲ ಸೌಲಭ್ಯಗಳನ್ನು ಒದಗಿಸುತ್ತಲಿದೆ . ರೈತರ ಜೀವನಾಡಿ ಎಂದೇ ಖ್ಯಾತಿ ಪಡೆದಿರುವ ಕೆ.ಸಿ.ಸಿ. ಬ್ಯಾಂಕು ರೈತರಿಗೆ ಬೆಳೆಸಾಲ , ಮಾಧ್ಯಮಿಕ ಕೃಷಿ ಸಾಲ ಮತ್ತಿತರ ಕೃಷಿ ಉದ್ದೇಶಿತ ಚಟುವಟಿಕೆಗಳಿಗೆ 550 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಸಕಾಲದಲ್ಲಿ ಸರ್ಕಾರದ ಯೋಜನೆಯನುಸಾರ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಂಭಂಧಿತ ಚಟುವಟಿಕೆಗಳಿಗೆ ಸಾಲ ವಿತರಿಸುತ್ತಿದೆ ಎಂದರು.
ಕಳೆದ 2022-23 ನೇ ಸಾಲಿನಲ್ಲಿ 103651 ರೈತ ಸದಸ್ಯರಿಗೆ ರೂ .657,30 ಕೋಟಿ ಬೆಳೆಸಾಲ ಮತ್ತು ಶೇ .3 % ರ ಬಡ್ಡಿದರದಲ್ಲಿ 1011 ಸದಸ್ಯರಿಗೆ ರೂ .52,16 ಕೋಟಿ ಮಾಧ್ಯಮಿಕ ಕೃಷಿ ಸಾಲ ಸೌಲಭ್ಯಗಳನ್ನು ವಿತರಿಸಿದೆ . ಪ್ರಸ್ತುತ ಸಾಲಿನಲ್ಲಿ ರೂ .720.00 ಕೋಟಿ ಬೆಳೆಸಾಲ ಹಾಗೂ ರೂ .48.00 ಕೋಟಿ ಮಾಧ್ಯಮಿಕ ಕೃಷಿ ಸಾಲ ವಿತರಿಸುವ ಗುರಿ ಹಾಕಿಕೊಳ್ಳಲಾಗಿದೆ.ಪ್ರಸ್ತುತ ಸಾಲಿನ ಗುರಿಗೆ ಅನುಸಾರವಾಗಿ ಈಗಾಗಲೆ 47844 ಸದಸ್ಯರಿಗೆ ರೂ .368.49 ಕೋಟಿ ಬೆಳೆಸಾಲ ಹಾಗೂ 501 ಸದಸ್ಯರಿಗೆ ರೂ .26.57 ಕೋಟಿ ಮಾಧ್ಯಮಿಕ ಕೃಷಿ ಸಾಲ ವಿತರಿಸಲಾಗಿದೆ ಎಂದರು.
ಕೃಷಿಯೇತರ ಸಾಲ ಬ್ಯಾಂಕು ಸಹಕಾರ ತತ್ವದಡಿ ಪ್ರಮುಖವಾಗಿ ಗ್ರಾಮೀಣ ಭಾಗದ ರೈತರ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ನೆರವನ್ನು ಕಲ್ಪಿಸುವುದರ ಜೊತೆಗೆ ಕೃಷಿಯೇತರ ಸಾಲದ ಯೋಜನೆಯಡಿ ಹೆಚ್ಚಿನ ಆದಾಯ ತರುವ ಕೃಷಿಯೇತರ ಸಾಲಗಳಾದ ವೇತನ ಆಧಾರಿತ , ಬಂಗಾರ ಆಭರಣಗಳ ತಾರಣ ಸಾಲ , ವಾಹನ ಖರೀದಿ , ಹಾಗೂ ವಿವಿಧ ಸಹಕಾರ ಸಂಸ್ಥೆಗಳಿಗೆ ಮತ್ತು ವ್ಯಕ್ತಿದಾರರಿಗೆ ನಗದು ಪತ್ತಿನ ಸಾಲಗಳನ್ನು ನೀಡುತ್ತಾ ಬರುತ್ತಿದೆ . * ಕಳೆದ 2022-23 ನೇ ಸಾಲಿನಲ್ಲಿ ರೂ .405.05 ಕೋಟಿ ಕೃಷಿಯೇತರ ಸಾಲ ವಿತರಿಸಲಾಗಿದೆ . * ಪ್ರಸ್ತುತ ಸಾಲಿನಲ್ಲಿ ರೂ .500.00 ಕೋಟಿ ಕೃಷಿಯೇತರ ಸಾಲ ವಿತರಿಸುವ ಗುರಿ ಹಾಕಿಕೊಳ್ಳಲಾಗಿದೆ . ಈ ಗುರಿಗೆ ಅನುಸಾರವಾಗಿ ಈಗಾಗಲೆ ರೂ .241.05 ಕೋಟಿ ಕೃಷಿಯೇತರ ಸಾಲ ವಿತರಿಸಲಾಗಿದೆ . ಠೇವಣಿ ಸಂಗ್ರಹಣೆ : . ಕಳೆದ 2022-23 ನೇ ಸಾಲಿನ ಠೇವಣಿ ರೂ . 963,66 ಕೋಟಿ ಇರುತ್ತದೆ . ಈ ಪ್ರಸ್ತುತ ಸಾಲಿನಲ್ಲಿ ರೂ .1160.00 ಕೋಟಿ ಠೇವಣಿ ಸಂಗ್ರಹಣೆ ಗುರಿ ಹಾಕಿಕೊಳ್ಳಲಾಗಿದೆ . ಗುರಿಗೆ ಅನುಸಾರವಾಗಿ ಈಗಾಗಲೆ ರೂ .920.00 ಕೋಟಿ ಠೇವಣಿ ಸಂಗ್ರಹಣೆ ಮಾಡಲಾಗಿದೆ . > ಸ್ವ ಸಹಾಯ ಗುಂಪುಗಳು ಬ್ಯಾಂಕಿನಲ್ಲಿ 16207 ಸ್ವ ಸಹಾಯ ಗುಂಪುಗಳು ರಚನೆಯಾಗಿದ್ದು 8662 ಗುಂಪುಗಳಿಗೆ ರೂ .158.79 ಕೋಟಿ ಸಾಲ ವಿತರಿಸಿದೆ . ಹಾಗೂ 2538 ಜಂಟಿ ಭಾಧ್ಯತಾ ಗುಂಪುಗಳಿದ್ದು ಈ ಪೈಕಿ 1514 ಗುಂಪುಗಳಿಗೆ ರೂ . 26.06 ಕೋಟಿ ಸಾಲ ವಿತರಿಸಿದೆ ಎಂದರು..
2023-24 ನೇ ಸಾಲಿಗೆ ಬ್ಯಾಂಕಿನಿಂದ ಹಾಕಿಕೊಳ್ಳಲಾದ ಕಾರ್ಯ ಯೋಜನೆಗಳು : ಘನ ಕೇಂದ್ರ ಸರ್ಕಾರದ ಕ್ಯಾಶಲೆಸ್ ( ನಗದು ರಹಿತ ) ಯೋಜನೆಯನ್ನು ಉತ್ತೇಜಿಸಲು ಕ್ರಮ ಹಾಕಿಕೊಳ್ಳಲಾಗಿದೆ . > ಹೈನುಗಾರಿಕೆ ಉತ್ತೇಜನಗೊಳಿಸಲು ರೈತ ಸದಸ್ಯರಿಗೆ ಹಸುಗಳನ್ನು ಖರೀದಿಸಲು ಸಾಲ ನೀಡಲು ಕ್ರಮ ಹಾಕಿಕೊಳ್ಳಲಾಗಿದೆ . ಬ್ಯಾಂಕಿನ ಸಂಪನ್ಮೂಲ ಹೆಚ್ಚಿಸುವ ನಿಟ್ಟಿನಲ್ಲಿ ಠೇವು ಮಾಸಾಚರಣೆ ಹಾಗೂ ಗ್ರಾಹಕರ ಸಮಾವೇಶ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದರು.
ಪ್ರಸ್ತುತ ಸಾಲಿನಲ್ಲಿ ರೂ .1160.00 ಕೋಟಿ ಠೇವಣಿ ಸಂಗ್ರಹಣೆ ರೂ .720.00 ಕೋಟಿ ಕೃಷಿ ಸಾಲ ಹಾಗೂ ರೂ .500.00 ಕೋಟಿ ಕೃಷಿಯೇತರ ಸಾಲ ವಿತರಣೆಗೆ ಯೋಜನೆಯನ್ನು ಹಾಕಿಕೊಳ್ಳಲಾಗಿದೆ . ಗ್ರಾಹಕರಿಗೆ QR Code ಸೌಲಭ್ಯವನ್ನು ಜಾರಿಮಾಡಲಾಗಿದೆ . ಸಧ್ಯದಲ್ಲಿಯೇ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನೂ ಜಾರಿಗೋಳಿಸಲಾಗುತ್ತದೆ . > ಬ್ಯಾಂಕಿನಲ್ಲಿ ಹೊಸದಾಗಿ ಅಡಮಾನ ಸಾಲ ಸೌಲಭ್ಯವನ್ನು ಜಾರಿಗೊಳಿಸಲಾಗಿದೆ ಎಂದರು.
ಬೆಳೆವಿಮಾ ಸೌಲಭ್ಯ , ಯಶಸ್ವಿನಿ ಆರೋಗ್ಯ ವಿಮೆ , ಪ್ರಧಾನಮಂತ್ರಿ ಸುರಕ್ಷಾ ವಿಮೆ , ಪ್ರಧಾನಮಂತ್ರಿ ಜೀವನ ಜ್ಯೋತಿ ಎಮ , ಅಟಲ್ ಪಿಂಚಣಿ ಯೋಜನೆ ಸೌಲಭ್ಯಗಳನ್ನು ನೀಡುತ್ತಲಿದೆ .ಇತರ ಸೌಲಭ್ಯಗಳು ಪ್ರಸ್ತುತದಲ್ಲಿ ಕೆ.ಸಿ.ಸಿ.ಬ್ಯಾಂಕು ಧಾರವಾಡ , ಗದಗ ಮತ್ತು ಹಾವೇರಿ ಜಿಲ್ಲೆಗಳ ಕಾರ್ಯವ್ಯಾಪ್ತಿಯಲ್ಲಿ 48 ಶಾಖೆಗಳನ್ನು ಹೊಂದಿದೆ . ಎಲ್ಲ ಶಾಖೆಗಳನ್ನೂ ಕೋರ ಬ್ಯಾಂಕಿಂಗ ವ್ಯವಸ್ಥೆಯಡಿ ಗಣಕೀಕರಣಗೊಳಿಸಿ ( Computerisation ) ಸಿ.ಬಿ.ಎಸ್.ನಡಿ ವ್ಯವಹಾರವನ್ನು ನಿರ್ವಹಣೆ ಮಾಡಲಾಗಿದೆ . ● ಅಲ್ಲದೆ ಈಗ 17 ನೂತನ ಶಾಖೆಗಳನ್ನು ಪ್ರಾರಂಭಿಸಲು ಆರ್.ಬಿ.ಆಯ್.ನಿಂದ ಅನುಮತಿ ಪಡೆಯಲಾಗಿರುತ್ತದೆ . IFSC ಕೋಡ ಹೊಂದಿದ್ದು , ಐ.ಟಿ.ಪಾಲಿಸಿ , ಎಸ್.ಎಂ.ಎಸ್.ಅಲರ್ಟ , RTGS / NEFT ಮೂಲಕ ತ್ವರಿತಗತಿಯಲ್ಲಿ ಹಣ ವರ್ಗಾವಣೆ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ . ಹಾಗೂ ಡಿ.ಬಿ.ಟಿ. ಮೂಲಕ ಗ್ಯಾಸ ಸಬ್ಸಿಡಿಯನ್ನು ನೇರವಾಗಿ ಗ್ರಾಹಕರ ಖಾತೆಗೆ ಜಮಾ ಮಾಡಲಾಗುತ್ತಿದೆ . . ಈಗಾಗಲೆ 64860 ಜನ ರೈತ ಸದಸ್ಯರ ಖಾತೆಗಳಿಗೆ ಜೋಡಣೆ ಮಾಡಿದೆ . 62504 ಜನ ಗ್ರಾಹಕರ ಖಾತೆಗಳಿಗೆ ಮೊಬೈಲ ಲಿಂಕ ಹಾಗೂ 44880 ಜನ ಗ್ರಾಹಕರ ಖಾತೆಗಳಿಗೆ ಆಧಾರ ಲಿಂಕ ಮಾಡಲಾಗಿರುತ್ತದೆ . ಒಟ್ಟು ಉಳಿತಾಯ / ಚಾಲ್ತಿ ಖಾತೆಗಳು -246586 ಇರುತ್ತವೆ . ಬ್ಯಾಂಕಿನ ಕಾರ್ಯವ್ಯಾಪ್ತಿಯಲ್ಲಿನ 550 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಆರ್ಥಿಕವಾಗಿ ಸಬಲತೆ ಸಾಧಿಸುವ ಮತ್ತು ಅಭಿವೃದ್ಧಿಪರ ಕಾರ್ಯಚಟುವಟಿಕೆಗಳನ್ನು ಸಮರ್ಪಕವಾಗಿ ಕೈಗೊಳ್ಳುವ ಸಲುವಾಗಿ ನಬಾರ್ಡನ ಸಹಯೋಗದೊಂದಿಗೆ ಬ್ಯಾಂಕಿನಲ್ಲಿ ಪ್ರತ್ಯೇಕವಾಗಿ ತಜ್ಞ ಅಧಿಕಾರಿಗಳನ್ನೊಳಗೊಂಡ ಸಂಘಗಳ ಅಭಿವೃದ್ಧಿ ಕೋಶವನ್ನು ತೆರೆಯಲಾಗಿದೆ . ಮುಖಾಂತರ ಕೃಷಿ ಬ್ಯಾಂಕಿನ ಕಾರ್ಯವ್ಯಾಪ್ತಿಯಲ್ಲಿನ 550 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಂಬಂಧಿತ ಚಟುವಟಿಕೆಗಳಿಗೆ ಬೆಳೆಸಾಲ , ಮಾಧಯಮಿಕ ಸಾಲಗಳ ವಿತರಣೆಯಲ್ಲದೆ ಪಡಿತರ ವಿತರಣೆ , ರಸಗೊಬ್ಬರ ಹಾಗೂ ಬೀಜಗಳ ಮಾರಾಟ ಕಾರ್ಯಗಳನ್ನು ನಡೆಸುತ್ತಿರುತ್ತವೆ . • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ದಾಸ್ತಾನು ಸಂಗ್ರಹಣೆಗಾಗಿ ನಬಾರ್ಡನ PACS as MSC ಯೋಜನೆಯಡಿಯಲ್ಲಿ ಗೋದಾಮುಗಳನ್ನು ನಿರ್ಮಾಣ ಮಾಡಿಕೊಂಡಿರುತ್ತವೆ . ನಬಾರ್ಡ ಸಹಯೋಗದಲ್ಲಿ ಪ್ರಾಕೃ.ಪ.ಸ.ಸಂಘಗಳಿಗೆ ಮೈಕ್ರೋ ಎ.ಟಿ.ಎಂ , ಕಮ್ POS machine ಪೂರೈಸಲು ಕ್ರಮ ಹಾಕಿಕೊಳ್ಳಲಾಗಿದೆ . ರೈತ ಸದಸ್ಯರಿಗೆ ರೂಪ ಕೆಸಿಸಿ ಕಾರ್ಡ ಸೌಲಭ್ಯ ಜಾರಿಗೊಳಿಸಲಾಗಿದೆ . ಬ್ಯಾಂಕಿನ ಇತರ ಗ್ರಾಹಕರಿಗೂ ರೂಪೆ ಡೆಬಿಟ್ ಕಾರ್ಡ ಸೌಲಭ್ಯ ಜಾರಿಗೊಳಿಸಲಾಗಿದೆ ಎಂದರು .
ನೂಲವಿ, ಹಳೆಹೆಬ್ಬಳ್ಳಿ,ಅಮರಗೋಳ,ಶಿರಗುಪ್ಪಿ,ಶಲವಡಿ,ಮೂರಬ,ಗರಗ,ಮಿಶ್ರೀಕೋಟಿ,ಯಲಿವಾಳ,ಕುಬಿಹಾಳ,ಹುಲಕೋಟಿ,ಡಂಬಳ,ಬಳಗಾಲಪೇಟ,ಭೂಮ್ಮನಹಳ್ಳಿ,ಯಾವಳಗಿ,ಗುತ್ತಲ ಮಾಸೂರ ಹೀಗೆ ಹದಿನೇಳು ಕಡೆ ಹೂಸದಾಗಿ ಬ್ಯಾಂಕಿನ ಕಚೇರಿಯನ್ನು ತೆರೆಯಲಾಗುವದು ಎಂದು ತಿಳಸಿದರು.
ಪತ್ರಿಕಾಗೋಷ್ಟಿಯಲ್ಲಿ ಉಪಾಧ್ಯಕ್ಷ ನಿಂಗನಗೌಡ ಮರಿಗೌಡ್ರ, ನಿರ್ದೇಶಕರಾದ ಜಿ.ಪಿ.ಪಾಟೀಲ, ಮಲ್ಲಿಕಾರ್ಜುನ ಹೊರಕೇರಿ, ಉಮೇಶ ಹೆಬಸೂರ, ಮಂಜುನಾಥ ಮುರಳ್ಳಿ, ಸಂಗಮೇಶ ಕಂಬಾಳಿಮಠ, ಸಿದ್ದಪ್ಪ ಸಪ್ಪೂರಿ, ಇತರ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಮುನಿಯಪ್ಪ, ಪ್ರಧಾನ ವ್ಯವಸ್ಥಾಪಕ ಎಸ್. ವಿ.ಹೂಗಾರ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.