ಅಡಿಗೋಣ ಬೀರಣ್ಣ ನಾಯಕ -ರಂಗಚಂದ್ರ ಪ್ರಶಸ್ತಿ ಪ್ರಧಾನ.

ಅಡಿಗೋಣ ಬೀರಣ್ಣ ನಾಯಕ -
ರಂಗಚಂದ್ರ ಪ್ರಶಸ್ತಿ ಪ್ರಧಾನ.
ಧಾರವಾಡ: 
ಸಮಾಜಕ್ಕೆ ನಮ್ಮನ್ನು  ಪರಿಚಯಿಸುವ ಮಾಧ್ಯಮವಾಗಿ ಯಕ್ಷಗಾನ ಕಲೆ ಮಾಡಿದ್ದು ಇಂತಹ ಕಲೆಯನ್ನು ನಾವು  ಉಳಿಸಿ , ಬೆಳೆಸಿಕೊಂಡ ಹೋಗ ಬೇಕು, ಎಂದು ಯಕ್ಷಸಿರಿ ಪ್ರಶಸ್ತಿ ಪುರಸ್ಕøತ, ಯಕ್ಷಸಿರಿ ಅಕ್ಷರಗುರು ಸನ್ಮಾನಿತ ನಿವೃತ ಶಿಕ್ಷಕರಾದ ಅಡಿಗೋಣ ಬೀರಣ್ಣ ನಾಯಕ ಹೇಳಿದರು. ಅವರು  ಧಾರವಾಡದ ಪಂ ಪುಟ್ಟರಾಜ ಗವಾಯಿ ಕಲಾ ಪ್ರತಿಷ್ಟಾನ,  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು, ಇಲ್ಲಿನ ಭಧ್ರಕಾಳಿ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಸಭಾ ಭವನದಲ್ಲಿ ಶನಿವಾರ ನಡೆದ  ರಂಗಚಂದ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರತಿಷ್ಠಾನದಿಂದ ನೀಡಿದ "ರಂಗ ಚಂದ್ರ ಪ್ರಶಸ್ತಿ" ಸ್ವೀಕರಿಸಿ ಮಾತನಾಡಿದರು. ಸಂಗೀತ, ನೃತ್ಯ ಯಾವುದೇ ಇರಲಿ  ಕಲಾವಿದನ ಪ್ರತಿಭೆ  ಗುರುತಿಸುವ ಕಾರ್ಯ ಅವನಲ್ಲಿರುವ ಕಲೆ ಮಾಡುತ್ತದೆ. ಯಕ್ಷಗಾನ ಎಂಬುದು ಜಗತ್ತನ್ನೆ ಆಕರ್ಷಿಸುವ ಕಲೆ ಎಂದರು. ಪ್ರಶಸ್ತಿ ನೀಡಿ ಗೌರವಿಸಿದ ಪಂ ಪುಟ್ಟರಾಜ ಗವಾಯಿ ಕಲಾ ಪ್ರತಿಷ್ಟಾನದವರಿಗೆ ಕೃತಜ್ಞತೆ ಸಲ್ಲಿಸಿ ಕಲಾವಿದರಿಗೆ ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿರಲಿ ಎಂದು ಆಶಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೆನರಾ ಶಿಕ್ಷಣ ಪ್ರಸಾರಕ ಮಂಡಳದ ಅಧ್ಯಕ್ಷ ಡಾ. ವಿ.ಆರ್. ಮಲ್ಲನ್ ಮಾನತಾಡಿ ಶಿಕ್ಷಕರಾಗಿ, ಕಲಾವಿದರಾಗಿ ಸಮಾಜಕ್ಕೆ  ಭಾವಗತ್ ಬೀರಣ್ಣ ನಾಯಕ ನೀಡಿದ ಕೊಡುಗೆ ಅಪಾರ ಎಂದ ಅವರು ಬಹು ಹಿಂದಿನಿಂದ ಅವರೊಂದಿಗಿನ ಆತ್ಮೀಯ ಒಡನಾಟವನ್ನು ವಿವರಿಸಿ, ಅಭಿನಂದಿಸಿದರು.
 ಪ್ರಶಸ್ತಿ ಪ್ರಧಾನ ಮಾಡಿದ ಖ್ಯಾತ ಜಾನಪದ ವಿದ್ವಾಂಸ ಎನ್. ಆರ್. ನಾಯಕ ಮಾತನಾಡಿ ಕನ್ನಡ ಸಂಸ್ಕøತಿ ಮೂಲ ಆಳ ಜಾನಪದ ಮೌಲ್ಯ ಮತ್ತು ಮಹತ್ವದ ಬಗ್ಗೆ ತಿಳಿಸಿ , ಯಕ್ಷಗಾನದ ಹುಟ್ಟು ಹರಿವಿನ ಬಗ್ಗೆ ವಿವವರಿಸಿ, ಬೀರಣ್ಣ ಮಾಸ್ತರವರು ಯಕ್ಷಗಾನ ಉಳುವಿಗೆ ಶ್ರಮಿಸಿದ ಒಂದು ಶಕ್ತಿ  ಎಂದರು.
ವೆಂಕಟು ಮಾಸ್ತರ ಶಿಳ್ಯ ಮಾತನಾಡಿ ಭಾಗವತ ಬೀರಣ್ಣ ಎಂದೇ ಖ್ಯಾತಿಯಾದ ಬೀರಣ್ಣ ನಾಯಕರವರು ಅಕ್ಷರದ ಗುರುವಾಗಿ, ಯಕ್ಷಗಾನದ ಸಿರಿಯಾಗಿ ನಾಡಿನಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದು, ತಮ್ಮ ಇಳಿವಯಸ್ಸಿನಲ್ಲೂ  ಚಟುವಟಿಕೆಯಿಂದ ಕೂಡಿರುವುದು ನಾಡಿನ ಜನತೆಗೆ ಮಾದರಿ ಎಂದರು.
ಲಯನ್ಸ ಮಾಜಿ ಜಿಲ್ಲಾ ಗರ್ವನರ್ ಗಣಪತಿ ನಾಯಕ ಮಾತನಾಡಿರು. ಸಾಹಿತಿ ಕೆ.ಎಚ್. ನಾಯಕ ಕಾರ್ಯಕ್ರಮದ ಅಧ್ಯಕತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಧಾರವಾಡದ ಕೃಷ್ಣಮೂರ್ತಿ ಗೊಲ್ಲರ್, ಸಿ.ಟಿ. ನಾಯಕ, ನಾಗೇಶ ನಾಯಕ, ಮಂಜುನಾಥ ಹಿತ್ತಲಮಕ್ಕಿ, ವಿಷ್ಣು ನಾಯಕ, ಬೇಬಿ ನಾಯಕ, ದೇವಾನಂದ ನಾಯಕ, ಮಂಜುನಾಥ ನಾಯಕ,ಮತ್ತಿರ ಗಣ್ಯರು ಉಪಸ್ಥಿತರಿದ್ದರು. ಸಾಹಿತಿ ಮಾರ್ತಾಂಡಪ್ಪ ಪ್ರ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಎಸ.ಸಿ. ನಾಯಕ ಸ್ವಾಗತಿಸಿದರು.ಉಪನ್ಯಾಸಕಿ ಪಲ್ಲವಿ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
 ಉಪನ್ಯಾಸಕ ರಾಮಮೂರ್ತಿ ನಾಯಕ ವಂದಿಸಿದರು.
ಸುದ್ದಿ ಹಾಗೂ
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ :9945564891.
ನವೀನ ಹಳೆಯದು

نموذج الاتصال