ನವೆಂಬರ್-1, ರಂದು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ “ಕನ್ನಡಿಗರ ಹಬ್ಬ-2”, ಅದ್ದೂರಿಯಿಂದ ಆಚರಣೆ.

ನವೆಂಬರ್-1, ರಂದು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಜಯಕರ್ನಾಟಕ ಸಂಘಟನೆ ಧಾರವಾಡ ಜಿಲ್ಲಾ ಘಟಕದ ವತಿಯಿಂದ “ಕನ್ನಡಿಗರ ಹಬ್ಬ-2”, ಅದ್ದೂರಿಯಿಂದ ಆಚರಣೆ.
ಧಾರವಾಡ 29 : 
 ಜಯಕರ್ನಾಟಕ ಸಂಘಟನೆ, ಧಾರವಾಡ ಜಿಲ್ಲಾ ಘಟಕವು ಪ್ರತಿವರ್ಷದಂತೆ ಪ್ರಸಕ್ತ ಈ ವರ್ಷವೂ ಧಾರವಾಡದ ಶ್ರೀನಗರ ವೃತ್ತದಲ್ಲಿ ಬೆಳಿಗ್ಗೆ 11:00 ಘಂಟೆಗೆ ವೇದಿಕೆ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಮಹಾನ್ ಸಾಧಕರಿಗೆ ಅಂದರೆ ಪೌರಕಾರ್ಮಿಕರು, ಯೋಧರು, ನಿಷ್ಠಾವಂತ ಪೊಲೀಸ್ ಅಧಿಕಾರಿಗಳು, ಗರ್ಭಿಣಿಯರಿಗೆ ಉಚಿತ ಸೇವೆ ನೀಡುವ ಆಟೋ ಚಾಲಕರಿಗೆ ಹಾಗೂ ರೈತರಿಗೆ, ಉತ್ತಮ ಸೇವಗ್ಯದ ಕೆ.ಎಸ್.ಆರ್.ಟಿ.ಸಿ. ಬಸ್ ಡ್ರೈವರ್‌ಗಳಿಗೆ, ಆದರ್ಶ ಶಿಕ್ಷಕರಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು 
 ಜಯಕರ್ನಾಟಕ ಸಂಘಟನೆ,
ಜಿಲ್ಲಾಧ್ಯಕ್ಷ ಸುಧೀರ ಎಂ. ಮುಧೋಳ ತಿಳಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 
ಅಂದು ಕಾರ್ಯಕ್ರಮಕ್ಕೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ  ಸಂತೋಷ ಲಾಡ, ಮಾನ್ಯ ಪೊಲೀಸ್ ಆಯುಕ್ತರು, ಹು-ಧಾ ಕಮೀಷನರೇಟ್, ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹಾಗೂ ವಿವಿಧ ಕ್ಷೇತ್ರಗಳ ಗಣ್ಯವ್ಯಕ್ತಿಗಳನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದರು.
ವೇದಿಕೆಯ ಕಾರ್ಯಕ್ರಮದ ನಂತರ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಹಾಗೂ ಕನ್ನಡಪರ ಹಾಡುಗಳನ್ನು ಡಿ.ಜೆ.[ಸೌಂಡ್ ಸಿಸ್ಟಮ್) ಮುಖಾಂತರ ನುಡಿಸುತ್ತ ಶ್ರೀನಗರ ವೃತ್ತದಿಂದ ಸಪ್ತಾಪೂರ ಕೊನೆಯ ಬಸ್ ಸ್ಟಾಪ್, ಜಯನಗರ, ಸಪ್ತಾಪೂರ ಭಾವಿ, ಕೆ.ಸಿ.ಡಿ. ಸರ್ಕಲ್, ಎಲ್.ಐ.ಸಿ. ಜ್ಯುಬಿಲಿ ಸರ್ಕಲ್, ಕಾರ್ಪೊರೇಶನ್ ಸರ್ಕಲ್, ಅಂಜುಮನ್ ವೃತ್ತ, ವಿವೇಕಾನಂದ ಸರ್ಕಲ್, ಕೆ.ಸಿ.ಸಿ. ಬ್ಯಾಂಕ್ ಸರ್ಕಲ್, ಭೂಸಪ್ಪಚೌಕ್, ಲೈನ ಬಜಾರ್, ಹನುಮಂತ ದೇವರ ಗುಡಿ, ಸಂಗಮ ಸರ್ಕಲ್‌ನಲ್ಲಿ
ಮೆರವಣಿಗೆ ಸಂಪನ್ನಗೊಳ್ಳಲಿದೆ. ಈ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾರ್ಯಕರ್ತರಿಗೆ ಮಧ್ಯಾಹ್ನ ಶ್ರೀನಗರ ವೃತ್ತದಲ್ಲಿ ಹಾಗೂ ಸಂಗಮ್ ಟಾಕೀಜ್ ವೃತ್ತದಲ್ಲಿ ರಾತ್ರಿ ಮೆರವಣಿಗೆ ಮುಗಿದ ನಂತರ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ 
ಲಕ್ಷಣ ದೂಡಮನಿ,ರವಿ ಸಿದ್ದಾಟಗಿಮಠ,ಸವಿತಾ ಜೆ ಸಿ,ಸುವರ್ಣಲತಾ ಹಂಚಿನಾಳ ಇದ್ದರು.
ನವೀನ ಹಳೆಯದು

نموذج الاتصال