ಅಲಗಿಲವಾಡ ಶಾಲೆಯಲ್ಲಿ
ಪೋಷಣಾಅಭಿಯಾನ ಕಾರ್ಯಕ್ರಮ ಆಯೋಜನೆ
ಗದಗ : ಶಿರಹಟ್ಟಿ ತಾಲೂಕಿನ ಅಲಗಿಲವಾಡ ಶಾಲೆಯಲ್ಲಿ ರಾಷ್ಟೀಯ ಪೋಷಣಾ ಅಭಿಯಾನ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ಆಹಾರ ಮೇಳ ಆಯೋಜಿಸಲಾಗಿತ್ತು .ಕೇಂದ್ರ ಸರಕಾರದ ಕಾರ್ಯಕ್ರಮ ಇದಾಗಿದ್ದು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಗಳು ಆರೋಗ್ಯಯುತ ಸಧೃಡ ಸಮಾಜ ನಿರ್ಮಾಣ ಮಾಡುವ ಹಿನ್ನೇಲೆಯಲ್ಲಿ 08 ನೆಯ ಮಾರ್ಚ 2018 ರಂದು ಜಾರಿಗೊಳಿಸಿದರು . ಈ ಕಾರ್ಯಕ್ರಮದಲ್ಲಿ ಪ್ರಸಕ್ತವರ್ಷ ರಾಷ್ಟ್ರೀಯ ಸಿರಿಧಾನ್ಯ ವರ್ಷ ಘೋಷಣೆ ಹಿನ್ನೆಲೆಯಲ್ಲಿ ಮಕ್ಕಳಿಗೆ ಸಿರಿಧಾನ್ಯಗಳಿಂದ ಸಿದ್ದಪಡಿಸಿದ ಆಹಾರ ಪದಾರ್ಥಗಳನ್ನು ನೀಡಿ ಸಧೃಡ ಸಮಾಜ ನಿರ್ಮಾಣ ಮಾಡುವದರಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದೆ
ಪ್ರಧಾನ ಗುರುಗಳಾದ ಹಾಲೇಶ ಜಕ್ಕಲಿ ಮಾತನಾಡಿ ಮಹಿಳೆಯರು ಮತ್ತುಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಸರಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಈ ಯೋಜನೆ ಜಾರಿಗೆ ತಂದಿದೆ .
ತಾಯಂದಿರಿಗೆ , ಮಕ್ಕಳಿಗೆ ಉತ್ತಮ ಆರೋಗ್ಯಕ್ಕಾಗಿ ಮೊಳಕೆಕಾಳು ತರಕಾರಿ , ಸೊಪ್ಪು ಹೆಚ್ಚು ಹೆಚ್ಚು ಬಳಸುವುದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ, ರಕ್ತ ಹೀನತೆಯನ್ನು ತಡೆಗಟ್ಟಬಹುದಾಗಿದೆ ಎಂದರು ಅಂಗನವಾಡಿ ಮೇಲ್ವಿಚಾರಕಿಯರಾದ ರೇಣುಕಾ ಹುಲ್ಲೂರ ಮಾತನಾಡಿ ಮಕ್ಕಳು ಹಾಗೂ ಮಹಿಳೆಯರ ವಯಕ್ತಿಕ ಆರೋಗ್ಯ ಸುರಕ್ಷಿತ ಬಗ್ಗೆ ತಾಯಂದಿರು ವಿಶೇಷ ಕಾಳಜಿವಹಿಸಬೇಕು ಎಂದರು .
ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಮೇಲ್ವಿಚಾರಕಿಯರಾದ ರೇಣುಕಾ ಹುಲ್ಲೂರ , ಹೆಬ್ಬಾಳ ಸಿ ಆರ್ ಪಿ ತಿರಕಪ್ಪ ಪೂಜಾರ ,ಪ್ರಧಾನ ಗುರುಗಳಾದ ಹಾಲೇಶ ಜಕ್ಕಲಿ , ಗುರುಮಾತೆಯರಾದ ಜಿ ಎಚ್ ರಡ್ಡೇರ , ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಜ್ಯೋತಿ ಎಚ್, ಅರುಣಕುಮಾರ ಹಿರೇಮಠ , ಗ್ರಾಮದ ಹಿರಿಯರಾದ ರಾಮಣ್ಣ ಬೆಳ್ಳಟ್ಟಿ , ಬಸವರಾಜ ಯಳವತ್ತಿ , ರಾಮಣ್ಣ ಹರಿಜನ , ನೀಲಮ್ಮ ಹಿರೇಮಠ , ಲಕ್ಷ್ಮವ್ವ ಮಠಪತಿ , ಅಂಗನವಾಡಿ ಗುರುಮಾತೆಯರಾದ ಮಹಾದೇವಿ ಹಸವಿಮಠ , ಜ್ಯೋತಿ ಪೂಜಾರ , ಶೀಲಾ ಮೇವುಂಡಿ , ಆಶಾ ಕಾರ್ಯಕರ್ತೆ ಉಷಾರಾಣಿ ದೇಸಳ್ಳಿ ಒಳಗೊಂಡಂತೆ ಮಹಿಳಾ ಸಂಘದ ಪದಾಧಿಕಾರಿಗಳು ಗ್ರಾಮದ ಗುರುಹಿರಿಯರು ತಾಯಂದಿರು ಮಕ್ಕಳು ಭಾಗವಹಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಿದರು .
(ಬಾಕ್ಸ್ ) : ಆರೋಗ್ಯಯುತ ಜೀವನಕ್ಕಾಗಿ ಸಿರಿಧಾನ್ಯಗಳು ತರಕಾರಿಗಳು ,ಮೊಳಕೆ ಕಾಳುಗಳನ್ನು ಹೆಚ್ಚು ಹೆಚ್ಚು ಬಳಸಬೇಕು
ರೇಣುಕಾ ಹುಲ್ಲೂರ ಅಂಗನವಾಡಿ
ಮೇಲ್ವಿಚಾರಕಿಯರು
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ : 9945564891.