ಕುರಬಗಟ್ಟಿ ಗ್ರಾಮದಲ್ಲಿ ಶ್ರೀಶೈಲ ಜಗದ್ಗುರು ಮಹಾಸನ್ನಿಧಿಯವರ ಧರ್ಮಸಭೆ ಹಾಗೂ ಕಸಾಪ ದತ್ತನಿಧಿಯ ಪ್ರಥಮ ಉಪನ್ಯಾಸದ ಉದ್ಘಾಟನಾ ಸಮಾರಂಭ

ಸೆ.23 ರಂದು ಕುರಬಗಟ್ಟಿ ಗ್ರಾಮದಲ್ಲಿ ಶ್ರೀಶೈಲ ಜಗದ್ಗುರು ಮಹಾಸನ್ನಿಧಿಯವರ   ಧರ್ಮಸಭೆ ಹಾಗೂ ಕಸಾಪ ದತ್ತನಿಧಿಯ ಪ್ರಥಮ ಉಪನ್ಯಾಸದ ಉದ್ಘಾಟನಾ ಸಮಾರಂಭ ಬಸವರಾಜ ವಕ್ಕುಂದ
ಧಾರವಾಡ ಸೆ.21:  ಬರುವ ಶನಿವಾರ ಸೆ.23 ರಂದು ಮಧ್ಯಾಹ್ನ 3 ಗಂಟೆಗೆ ಧಾರವಾಡ ತಾಲ್ಲೂಕಿನ ಕುರಬಗಟ್ಟಿ ಗ್ರಾಮದಲ್ಲಿ ಪಂಚಪೀಠಗಳಲ್ಲಿ ಒಂದಾಗಿರುವ ಶ್ರೀಶೈಲದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಭಗವತ್ಪಾದರ ಧರ್ಮ ಸಭೆ ಹಾಗೂ ಅವರ ಸಾಮಾಜಿಕ, ಸಾಹಿತ್ಯಿಕ, ಧಾರ್ಮಿಕ ಕೊಡುಗೆಗಳ ಕುರಿತು ಕಸಾಪ ಧಾರವಾಡದವರಿಂದ ದತ್ತಿ ಉಪನ್ಯಾಸ ಆಯೋಜಿಸಲಾಗಿದೆ ಎಂದು ವೀರಶೈವ ಲಿಂಗಾಯತ ಮುಖಂಡ, ಗ್ರಾಮ ಪಂಚಾಯತ ಸದಸ್ಯ ಬಸವರಾಜ ವಕ್ಕುಂದ ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ಧಾರವಾಡ ಜರ್ನಲಿಸ್ಟ್ ಗೀಲ್ಡ್ ದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ, ಮಾತನಾಡಿದರು.
,
ವೀರಶೈವ ಲಿಂಗಾಯತ ಸಮಾಜಕ್ಕೆ ಮಾರ್ಗದರ್ಶನ ಮಾಡಿ, ಉತ್ತಮ ಸಂಸ್ಕಾರ ನೀಡಿ, ಸಮಾಜವನ್ನು ಪಂಚಪೀಠಾಧೀಶ್ವರಾಧಿಯಾಗಿ ಎಲ್ಲ ಗುರುವಿರಕ್ತರು ಒಳ್ಳೆಯ ದಾರಿಯಲ್ಲಿ ಮುನ್ನಡೆಸುತ್ತಿದ್ದಾರೆ.

ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಧರ್ಮ ಜಾಗೃತಿ ಸಭೆಯನ್ನು ಏರ್ಪಡಿಸಲಾಗಿದೆ. ಅಂದು ಮಧ್ಯಾಹ್ನ ಗ್ರಾಮದಲ್ಲಿ ಪೂರ್ಣ ಕುಂಭ, ಆರತಿ, ಬಜನಾ ಮಂಡಳ, ಡೊಳ್ಳು ಕುಣಿತ, ಎತ್ತುಗಳ ಮೆರವಣಿಗೆಯೊಂದಿಗೆ ಜಗದ್ಗುರುಗಳ ಭವ್ಯ ಉತ್ಸವವನ್ನು ಮತ್ತು ಗ್ರಾಮಸ್ಥರಿಂದ, ಭಕ್ತರಿಂದ ಸಾಮೂಹಿಕ ಪಾದಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಗ್ರಾಮ ಮುಖಂಡ ತಮ್ಮಣ್ಣ ಗುಂಡಗೋವಿ ಮಾತನಾಡಿ, ಶ್ರೀಶೈಲ ಜಗದ್ಗುರು ಮಹಾಸನ್ನಿಧಿಯವರ ಕಾರ್ಯಕ್ರಮದಲ್ಲಿ ಎಲ್ಲ ಭಕ್ತರು, ವೀರಶೈವ ಲಿಂಗಾಯತ ಸಮಾಜದವರು ಭಾಗವಹಿಸಲು ಅನಕೂಲವಾಗುವಂತೆ ಸುತ್ತಲಿನ ಗ್ರಾಮಗಳಲ್ಲಿ ಪ್ರಚಾರ ಮಾಡಲಾಗಿದೆ. ಎಲ್ಲರೂ ಭಾಗವಹಿಸಿ, ಪೂಜ್ಯರ ಧರ್ಮ ಸಂದೇಶ ಕೇಳಿ, ಪುನಿತರಾಗಬೇಕೆಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಧಾರವಾಡ ತಾಲೂಕು ಅಧ್ಯಕ್ಷ ಮಹಾಂತೇಶ ನರೇಗಲ್ಲ ಅವರು  ಮಾತನಾಡಿ,  ಜಿಲ್ಲಾದ್ಯಕ್ಷರಾದ ಡಾ.ಲಿಂಗರಾಜ ಅಂಗಡಿ ಅವರು ತಮ್ಮ ಅಧಿಕಾರಾವಧಿಯಲ್ಲಿ  ನೂರಕ್ಕು ಹೆಚ್ಚು ವ್ಯಕ್ತಿ, ಸಂಘ, ಸಂಸ್ಥೆಗಳ ಸಹಜಾರದಿಂದ  ಧಾರವಾಡ ಜಿಲ್ಲಾ ಸಾಹಿತ್ಯ ಪರಿಷತ್ತದಲ್ಲಿ ವಿಶೇಷ ಉಪನ್ಯಾಸಕ್ಕಾಗಿ ದತ್ತಿ ನಿಧಿ ಸ್ಥಾಪಿಸಿವೆ. ಧಾರವಾಡ ವೀರಶೈವ ಜಂಗಮ ಸಂಸ್ಥೆಯು  ಪಂಚಪೀಠಾಧೀಶ್ವರರಾದ ಪ್ರಸ್ತುತ ಎಲ್ಲ ಜಗದ್ಗುರುಗಳ ಪೀಠಾರೋಹಣದ ಸವಿನೆನಪಿಗಾಗಿ ದತ್ತಿನಿಧಿಗಳನ್ನು ಸ್ಥಾಪಿಸಿದೆ. ಈಗಾಗಲೇ ಕಳೆದ ಸೆ.18 ರಂದು ಶ್ರೀ ರಂಭಾಪುರಿ ಜಗದ್ಗುರುಗಳ 32 ನೆ ವರ್ಷದ ಪೀಠಾರೋಹಣದ ಸವಿನೆನಪಿಗಾಗಿ ಸುಳ್ಳ ಪಂಚಗ್ರಹ ಹಿರೇಮಠದಲ್ಲಿ ಸಂಶೋಧಕ, ಆಧ್ಯಾತ್ಮಿಕ ಸಾಧಕ ಡಾ.ಎ.ಸಿ.ವಾಲಿ ಅವರಿಂದ ವಿಶೇಷ ಉಪನ್ಯಾಸ ಮಾಡಿಸಲಾಗಿದ್ದು, ಇನ್ನು ಮುಂದೆ ಪ್ರತಿ ವರ್ಷ ಹುಬ್ಬಳ್ಳಿ ತಾಲೂಕಿನಲ್ಲಿ ರಂಭಾಪುರಿ ಜಗದ್ಗುರುಗಳ ಧಾರ್ಮಿಕ, ಸಾಹಿತ್ಯಿಕ, ಸಾಮಾಜಿಕ ಕೊಡುಗೆಗಳ ಕುರಿತು ಉಪನ್ಯಾಸ ಮುಂದುವರಿಯಲಿದೆ ಎಂದರು.

ಬರುವ ಸೆ.23 ರಂದು ಕುರಬಗಟ್ಟಿ ಗ್ರಾಮದಲ್ಲಿ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಭಗವತ್ಪಾದರ 20 ನೇ ವರ್ಷದ ಪೀಠಾರೋಹಣದ ಸವಿನೆನಪಿಗಾಗಿ ಪಂಚಪೀಠಗಳ ಪರಂಪರೆ ಮತ್ತು ಶ್ರೀಶೈಲ ಪೀಠದ ಪ್ರಸ್ತುತ ಜಗದ್ಗುರುಗಳ ಧಾರ್ಮಿಕ, ಸಾಹಿತ್ಯಿಕ ಮತ್ತು ಶೈಕ್ಷಣಿಕ ಕೊಡುಗೆಗಳು ಕುರಿತು ದತ್ತಿನಿಧಿಯ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಶ್ರೀ ಸಿದ್ದಲಿಂಗ ಶಿವಾಚಾರ್ಯ ವೈದಿಕ,ಆಗಮ ಮತ್ತು ಸಂಸ್ಕೃತ ಪಾಠಶಾಕೆ ಗುರುಕುಲದ ವೇದಮೂರ್ತಿ ಶ್ರೀಶೈಲ ಶಾಸ್ತ್ರಿ ಹಿರೇಮಠ ಅವರು ಪ್ರಥಮ ಉಪನ್ಯಾಸ ನೀಡಲಿದ್ದಾರೆ.
 ಹಿರಿಯ ಸಂಶೋಧಕ , ಕವಿವಿ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಜೆ.ಎಂ.ನಾಗಯ್ಯ ಅವರು ಶಾಸನಗಳಲ್ಲಿ ಶ್ರೀಶೈಲ ಪರಂಪರೆ ಕುರಿತು ಸಂಶೋಧನಾತ್ಮಕವಾಗಿ ಮಾತನಾಡಲಿದ್ದಾರೆ.
 ಕಾರ್ಯಕ್ರಮದಲ್ಲಿ ಧಾರವಾಡ ತಾಲೂಕು ಪದಾಧಿಕಾರಿಗಳು, ಸದಸ್ಯರು ಸಹಿತಿಗಳು, ಚಿಂತಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಜಂಗಮ ಸಮಾಜದ ಪ್ರಮುಖರಾದ, ನಿವೃತ್ತ ಎಸಿಪಿ ಜಿ.ಆರ್.ಹಿರೇಮಠ ಅವರು ಮಾತನಾಡಿ, ಧಾರವಾಡ ವೀರಶೈವ ಜಂಗಮ ಸಂಸ್ಥೆಯಿಂದ ನಿರಂತರವಾಗಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಂಸ್ಕಾರಯುತವಾದ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಬೇರೆಬೇರೆ ಧಾರ್ಮಿಕ ಗ್ರಂಥಗಳು ನೀಡಿದ ಕೊಡುಗೆಗಳು ಅಪಾರ. ಸಿದ್ದಾಂತ ಶಿಖಾಮಣಿ, ಶರಣರ ವಚನಗಳು, ದಾಸರ ಪದಗಳು ಹೀಗೆ ವಿವಿಧ ಆಕರಗಳು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕವನ್ನು ಶ್ರಿಮಂತಗೊಳಿಸಿವೆ ಎಂದರು.
 ಪ್ರಸ್ತುತದಲ್ಲಿ ಪಂಚಪೀಠಗಳ ಪೂಜ್ಯ ಜಗದ್ಗುರುಗಳು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಹಾಗೂ ಮಾರ್ಗದರ್ಶನವನ್ನು ಸಮಾಜಕ್ಕೆ ತಲುಪಿಸಿ ಜಾಗೃತಿ ಮೂಡಿಸಲು ಈ ದತ್ತಿನಿಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. 

ವೀರಶೈವ ಜಂಗಮ ಸಂಸ್ಥೆಯ ಉಪಾಧ್ಯಕ್ಷ ಮೃತ್ಯುಂಜಯ ಕೋರಿಮಠ ಮಾತನಾಡಿ
ಪ್ರತಿ ವರ್ಷ ಜಿಲ್ಲೆಯ ಐದು ತಾಲೂಕುಗಳಲ್ಲಿ ಐದು ಪಂಚಪೀಠದ ಜಗದ್ಗುರುಗಳ ಕುರಿತು ಸಂಸ್ಥೆಯ ದತ್ತಿ ನಿಧಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತದಲ್ಲಿ ನಿರಂತರವಾಗಿ ವಿಶೇಷ ಉಪನ್ಯಾಸ ಆಯೋಜಿಸಲು ಸಂಸ್ಥೆ ಕ್ರಮಕೈಗೊಂಡಿದೆ. ಪಂಚಪೀಠಗಳ ಸಾಹಿತ್ಯ, ಧಾರ್ಮಿಕ ಕಾರ್ಯಗಳನ್ನು ಜನರಿಗೆ ತಲುಪಿಸಲಾಗುತ್ತದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಮಹಾಂತೇಶ ನರೇಗಲ್ಲ ಅವರು ಮಾತನಾಡಿ,
ಶ್ರೀಮದ್ ಗಿರಿರಾಜ ಸೂರ್ಯಸಿಂಹಾನಾಧೀಶ್ವರ ಹಾಗೂ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನಿಧ್ಯದ ವಹಿಸಿ, ಸಮಾರಂಭ ಉದ್ಘಾಟಿಸುವರು.

ಸುಳ್ಳ ಗ್ರಾಮ ಪಂಚಗ್ರಹ ಹಿರೇಮಠದ ಷ.ಬ್ರ. ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ಅಧ್ಯಕ್ಷತೆಯನ್ನು,  ಕನ್ನಡ ಸಾಹಿತ್ಯ ಪರಿಷತ್  ಧಾರವಾಡ ಜಿಲ್ಲಾ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಅವರು ನೇತೃತ್ವ ವಹಿಸುವರು. 

  ಜಗದ್ಗುರು ಪಂಚಾಚಾರ್ಯ ಮಾನವ ಧರ್ಮ ಸಂಸ್ಥೆಯ ಡಾ. ಎಸ್. ಆರ್. ರಾಮನಗೌಡರ,  ಬಸವರಾಜ ಕೌಜಲಗಿ, ಹಿರಿಯ ಅಧಿಕಾರಿ ಮಲ್ಲಿಕಾರ್ಜುನ ಪಾಟೀಲ, ದಾರವಾಡ ಕೆಎಂಎಫ್ ಎಂ.ಡಿ.,  ಎನ್. ಎಸ್. ಕೋಡಿಯಾಲಮಠ, ಕರಾಸನೌಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್. ಸಿದ್ದನಗೌಡರ, ಕುರಬಗಟ್ಟಿ ಶಿವಾನಂದ ಮಠದ ಶಂಬುಲಿಂಗ ಮಹಾಸ್ವಾಮಿಗಳು, ಮುರಘಾಮಠದ ಉಚಿತ ಪ್ರಸಾದನಿಲಯದ ಟ್ರಸ್ಟ್ ನಿರ್ದೇಶಕ ಮಂಜುನಾಥ ಸಾಲಿಮಠ ಸೇರಿದಂತೆ ಇತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರಭು ಕೆಂಡದಮಠ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಪಿ.ಎಸ್.ಹಿರೇಮಠ ವಂದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಶೈಲ ಜಗದ್ಗುರುಗಳ ಕಾರ್ಯಕ್ರಮದ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಯಿತು.

ಹಿರಿಯ ವಿನ್ಯಾಸ ಅಭಿಯಂತರ ಸುನೀಲ ಬಿರದೆ, ಶಿವಾನಂದ ಗುಂಡಗೋವಿ ಮಾತನಾಡಿದರು.

 ಪತ್ರಿಕಾಗೋಷ್ಠಿಯಲ್ಲಿ ಜಂಗಮ ಸಂಸ್ಥೆಯ ನಿರ್ದೇಶಕರಾದ ಪ್ರೊ.ಜಗದೀಶ ಕಾಡದೇವರಮಠ,  ಗ್ರಾಮಸ್ಥರಾದ ಚನ್ನಪ್ಪ ಬ್ಯಾಳಿ,,ಮಾರುತಿ ಕರಿಸಿದ್ದನವರ,ಈರಯ್ಯ ಹಿರೇಮಠ,ಮಾರುತಿ ಶಿರೂರ,ಗುರುಸಿದ್ದ ಪೂಜೆರ
ಸೇರಿದಂತೆ ಇತರರ ಇದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ : 9945564891
ನವೀನ ಹಳೆಯದು

نموذج الاتصال