ನರೇಗಾ ಯೋಜನೆ ಅಡಿಯಲ್ಲಿ ‘ಘೋಷಿತ ಮಾನವ ದಿನಗಳ’ ಕೆಲಸ ಸರಿಯಾಗಿ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ.

ನರೇಗಾ ಯೋಜನೆ ಅಡಿಯಲ್ಲಿ ‘ಘೋಷಿತ ಮಾನವ ದಿನಗಳ’ ಕೆಲಸ ಸರಿಯಾಗಿ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ.               
ಧಾರವಾಡ  :         ಗೊಂಗಡಿಕೊಪ್ಪ ಮತ್ತು ಕ್ಯಾರಕೊಪ್ಪ ಗ್ರಾಮಗಳ ದುಡಿಯುವ ಜನರಿಗೆ ನರೇಗಾ ಯೋಜನೆ ಅಡಿಯಲ್ಲಿ ‘ಘೋಷಿತ ಮಾನವ ದಿನಗಳ’ ಕೆಲಸ ಸರಿಯಾಗಿ ನೀಡಬೇಕೆಂದು ಆಗ್ರಹಿಸಿ ಎ.ಐ.ಎಮ್.ಎಸ್.ಎಸ್‌ನ ಗೊಂಗಡಿಕೊಪ್ಪ ಮತ್ತು ಕ್ಯಾರಕೊಪ್ಪ ಗ್ರಾಮ ಘಟಕಗಳಿಂದ ಜಿಲ್ಲಾ ಪಂಚಾಯತ್ ಮುಂದೆ ಪ್ರತಿಭಟನೆ ಮಾಡಿ, ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳಿಗೆ ಮತ್ತು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
       ಇಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎ.ಐ.ಎಮ್.ಎಸ್.ಎಸ್)ಯ ಗೊಂಗಡಿಕೊಪ್ಪ ಮತ್ತು ಕ್ಯಾರಕೊಪ್ಪ ಗ್ರಾಮ ಘಟಕಗಳಿಂದ ಗ್ರಾಮದ ಜನತೆಗೆ ನರೇಗಾ ಯೋಜನೆ ಅಡಿಯಲ್ಲಿ ‘ಘೋಷಿತ ಮಾನವ ದಿನಗಳ’ ಕೆಲಸವನ್ನು ಸರಿಯಾಗಿ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಪಂಚಾಯತ್ ಎದುರಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.     
    ಗ್ರಾಮೀಣ ಭಾಗದ ಜನರಿಗೆ ಅನೂಕೂಲವಾಗಲೆಂದು ಸರಕಾರವು ತಂದಿರುವ ನರೇಗಾ ಯೋಜನೆ  ಯಡಿಯಲ್ಲಿ ಗೊಂಗಡಿಕೊಪ್ಪ ಮತ್ತು ಕ್ಯಾರಕೊಪ್ಪ ಗ್ರಾಮದ ಜನತೆಗೆ ಈ ವರ್ಷ ಸರಿಯಾಗಿ ಕೆಲಸ ದೊರಕಿಲ್ಲ. ಬರಗಾಲ ಬಿದ್ದಿರುವ ಕಾರಣ ದುಡಿಯುವ ಜನರು, ರೈತರು, ಕೃಷಿ-ಕೂಲಿ ಕಾರ್ಮಿಕರು ತೀವ್ರ ಸಮಸ್ಯೆಯಲ್ಲಿದ್ದಾರೆ. ಯಾವುದೇ ಉದ್ಯೋಗವಿಲ್ಲದೇ ಗ್ರಾಮಸ್ತರು ಸಂಕಷ್ಠದಲ್ಲಿದ್ದಾರೆ. ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಸರಿಯಾಗಿ ಕೆಲಸ ನೀಡದ ಕಾರಣ ಅನಿವರ‍್ಯವಾಗಿ ಗ್ರಾಮದ ಜನರು ಜೀವನೋಪಾಯಕ್ಕಾಗಿ ಪಟ್ಟಣದ ದಾರಿ ಹಿಡಿಯುವಂತಾಗಿದೆ ಮತ್ತು ಕಡಿಮೆ ಕೂಲಿಗೆ ಪರ-ಊರುಗಳಿಗೆ ಹೋಗಿ ದುಡಿಯುವಂತಾಗಿದೆ. ಈಗಾಗಲೇ ಮಾರಡಗಿ ಮತ್ತು ಕ್ಯಾರಕೊಪ್ಪ ಗ್ರಾಮ ಪಂಚಾಯತ್ ಅಭಿವೃದ್ಧಿ (PDO) ಅಧಿಕಾರಿಗಳಿಗೆ ನರೇಗಾ ಕೆಲಸ ಕೊಡುವಂತೆ ಕೋರಿ 6 ನಂಬರ್ ಫಾರ್ಮ್ ಸಲ್ಲಿಸಿ ಒಂದು ತಿಂಗಳು ಕಳೆದಿವೆ. ಆದರೆ ಅವರ ಕಡೆಯಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಮತ್ತು ಕೆಲಸ ನೀಡಿಲ್ಲ. ಈ ಕಾರಣ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿಗಳು ಈ ಸಮಸ್ಯೆಯನ್ನು ಪರಿಹರಿಸಿ, ಆದಷ್ಟು ಬೇಗನೇ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಪ್ರಾರಂಭಿಸಬೇಕು ಮತ್ತು ಸಂಪೂರ್ಣ ಮಾನವ ದಿನಗಳನ್ನು ನೀಡಬೇಕು, ಈಗಾಗಲೇ 6 ನಂಬರ್ ಫಾರ್ಮ್ ಕೊಟ್ಟು ಒಂದು ತಿಂಗಳು ಕಳೆದಿರುವುದರಿಂದ ನಿರುದ್ಯೋಗ ಭತ್ಯೆಯನ್ನು ಕೂಡಲೇ Àನೀqಬೇಕೆಂದು
 ಎ.ಐ.ಎಮ್.ಎಸ್.ಎಸ್‌ನ ಗೊಂಗಡಿಕೊಪ್ಪ ಮತ್ತು ಕ್ಯಾರಕೊಪ್ಪ ಗ್ರಾಮ ಘಟಕಗಳಿಂದ ಆಗ್ರಹಿಸಲಾಯಿತು. ಮನವಿ ಸ್ವೀಕರಿಸಿದ ನಂತರ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿಗಳು ಮತ್ತು ನರೇಗಾ ಅಧಿಕಾರಿಗಳು  ಮೂವರು ಎರಡು ಗ್ರಾಮದ ನರೇಗಾ ಸಮಸ್ಯೆಯು ಪರಿಹರಿಸುವುದಾಗಿ ಭರವಸೆಕೊಟ್ಟರು.
     ಈ ಸಂದರ್ಭದಲ್ಲಿ ನರೇಗಾ ಅಧಿಕಾರಿಗಳು  ಉಪಸ್ಥಿತರಿದ್ದರು.  ಎ.ಐ.ಎಮ್.ಎಸ್.ಎಸ್‌ನ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಮಧುಲತಾ ಗೌಡರ್, ಜಿಲ್ಲಾ ಕಾರ್ಯದರ್ಶಿಗಳಾದ ಗಂಗೂಬಾಯಿ ಕೊಕರೆ, ಗ್ರಾಮ ಘಟಕಗಳ ಸದಸ್ಯರುಗಳಾದ ಮಾಸಬ್ಬಿ ಅಗಸಿಮನಿ, ಕಾಶವ್ವ ತಲ್ವಾರ್, ಮುರಗಮ್ಮ ಗರಗದ, ಶೋಭಾ ಹಿರೆಮಠ್, ಶಂಕ್ರಮ್ಮ ಮಲ್ಲಿಗವಾಡ, ಹುಸೇನ ಸಾಬ್ ಎಲಿಗಾರ್, ಹನಮಂತ ಕರಿಕಟ್ಟಿ ಮೊದಲಾದವರು ಇದ್ದರು.       
 ಈ ಕೆಳಗಿನ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಲಾಯಿತು-
ಈ ಕೂಡಲೇ ನರೇಗಾ ಯೋಜನೆ ಅಡಿಯಲ್ಲಿ ನಿರಂತರ ಕೆಲಸ ನೀಡಬೇಕು.

ಸಂಪೂರ್ಣ ಘೋಷಿತ ಮಾನವ ದಿನಗಳನ್ನು ನೀಡಬೇಕು. 
ಬರಗಾಲ ಘೋಷಿತ ತಾಲ್ಲೂಕು ಆಗಿರುವುದರಿಂದ ೫೦ ಮಾನವ ದಿನಗಳನ್ನು ಹೆಚ್ಚಿಗೆ ನೀಡಬೇಕು.
ಇಲ್ಲಿಯವರೆಗೆ ಕೆಲಸ ನೀಡದ ಕಾರಣ ನಿರುದ್ಯೋಗ ಭತ್ಯೆಯನ್ನು ಕೂಡಲೇ ಬಿಡುಗಡೆಮಾಡಬೇಕು. ಎಂದು ಮನವಿ ಮಾಡಲಾಯಿತು. ದೇವಮ್ಮ ದೇವತ್ಕಲ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು
ಸುದ್ದಿ ಹಾಗೂ ಜಾಹೀರಾತುಗಾಗಿ ಸಂರ್ಪಕಿಸಿರಿ:9945564891
ನವೀನ ಹಳೆಯದು

نموذج الاتصال