"ಸರ್ ನೈಟ ಎಣ್ಣೆ ಹೊಡಿಯೋನ್ನಾ" ಆಲ್ಬಮ್ ಗೀತೆಯ ಕಿರುಚಿತ್ರ ಬಿಡುಗಡೆಗೆ ಸಿದ್ದತೆ
ಧಾರವಾಡ:-- ಧೂಮಪಾನವನ್ನು ಈಗ ಕೆಲವರು ಶೋಕಿಗಾಗಿ ಶುರು ಮಾಡುತ್ತಾರೆ ನಂತರ ಇದು ಚಟವಾಗಿ ಮಾಡಿಕೊಳ್ಳುವಾಗ
ಇಂದಿನ ಅದುನಿಕ ಯುಗದಲ್ಲಿ ಮದ್ಯಪಾನ ಹಾನಿಕರವಾಗಿದರೂ ಅದನ್ನು ಸೇವಿಸಿ ತಮ್ಮ ಜೀವನ ಹಾಳು ಮಾಡಿಕೊಂಡು ಕುಟುಂಬಕ್ಕೆ ಆಧಾರವಾದವರ ಅಮೂಲ್ಯ ಜೀವನವನ್ನು ಹಾಳುಮಾಡುವರ ಸನ್ನಿವೇಶದ "ಸರ್ ನೈಟ ಎಣ್ಣೆ ಹೊಡಿಯೋನ್ನಾ" ಆಲ್ಬಮ್ ಗೀತೆಯನ್ನು ಕಿರುಚಿತ್ರದ ಕಲಾವಿದರ ತಂಡ ಸೇರಿ ಸಿದ್ದಪಡಿಸಿ ಬಿಡುಗಡೆಗೆ ಸಿದ್ಧಮಾಡಿದ್ದಾರೆ.
ಹೌದು!....ನಾದಝೇಂಕಾರ ಸಾಂಸ್ಕೃತಿಕ ಸಂಘ ಹಾಗೂ ಲೋಹಿತಾಸ್ವರ ಯೂಟ್ಯೂಬ್ ಚಾನೆಲ್ ನಿರ್ಮಿಸಿರುವ ತಂಡ....ಆಲ್ಬಮ್ ಗೀತೆಯಲ್ಲಿ ಧಾರವಾಡದ 18 ಕ್ಕೂ ಯುವ ಕಲಾವಿದರಿಂದ
ಈಗಾಗಲೇ ಕೊರೊನಾ ಸಮಯದಲ್ಲಿ ಧಾರವಾಡ ಜಿಲ್ಲಾಡಳಿತವು ನಾದ ಝೇಂಕಾರ ಸಾಂಸ್ಕೃತಿಕ ಸಂಘವನ್ನು ಗುರುತಿಸಿ ಕೊರೊನಾ ಕುರಿತು ಜಿಲ್ಲೆಯಾದ್ಯಂತ ಮಲೇರಿಯಾ ಸೇರಿದಂತೆ ಹಲವಾರು ಜಾಗೃತಿ ಕಿರುಚಿತ್ರ ನಿರ್ಮಾಣ ಜಾಗೃತಿ ಮೂಡಿಸಿದೆ.ಈ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು ಮದ್ಯಪಾನ ಮಾಡಿದ ವ್ಯಕ್ತಿ ಯಾವ ಸ್ಥಿತಿಯಲ್ಲಿ ಮನೆ ಸೇರುತ್ತಾನೆ ಮತ್ತು ಮಾತಿನ ಹಿಡಿತ ತಪ್ಪಿ ಎನ್ನೇಲ ಮಾತನಾಡುತ್ತಾರೆ ಎಂಬುವುದನ್ನು ಹಾಡಿನ ಮೂಲಕ ಆಲಂ ಹಾಡೋದನ್ನ ಹೊರತರಲು ಸಿದ್ದತೆ ನಡೆಸಿದ್ದಾರೆ.
ನಾದ ಝೇಂಕಾರ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಯಮನಪ್ಪ ಜಾಲಗಾರ ಕಿರು ಚಿತ್ರದ ನಿರ್ದೇಶಕರಾಗಿ 18 ಕಲಾವಿದರ ತಂಡದೊಂದಿಗೆ ದಾಂಡೇಲಿಯ ರೆಸಾರ್ಟ್ ಮತ್ತು ಧಾರವಾಡ ನವಲೂರಿನ ಓಝೋನ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಉತ್ತರ ಕರ್ನಾಟಕದ ಭಾಷೆಯಲ್ಲಿಯೇ ನೃತ್ಯದ ಮೂಲಕ ಹಾಡು ಚಿತ್ರಕರಣೆ ಮಾಡಲಾಗಿದ್ದು, ದೃಶ್ಯಗಳು ಸೊಗಸಾಗಿ ಮೂಡಿ ಬಂದಿವೆ.
ಈಗಾಗಲೇ ಹಾಡಿನ ನೃತ್ಯ ಸಂಯೋಜನೆ ಸಂಕಲನ ಮುಕ್ತಾಯ ಹಂತ ತಲುಪಿದ್ದು,ಇದರಲ್ಲಿ 18 ಕಲಾವಿದರು ಭಾಗವಹಿಸಿದ್ದು,ಹಾಡಿಗೆ ನೃತ್ಯ ಮಾಡಿದ್ದಾರೆ.ಉತ್ತರ ಕರ್ನಾಟಕದ ಭಾಷೆಯಲ್ಲಿಯೇ ಹಾಡು ರಚಿಸ,ಕುಟುಂಬದ ನಿರ್ವಹಣೆ ಮಾಡುವ ವ್ಯಕ್ತಿಗಳು ಕುಡಿತದ ಚಟದಿಂದ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಾನೆ. ಮದ್ಯಪಾನ ಮಾಡಿದಾಗ ಹೇಗೆ ವರ್ತಿಸುತ್ತಾನೆ ಎಂಬುದು ಈ ವಿಡಿಯೋ ಮೂಲ ಉದ್ದೇಶವಾಗಿದೆ. ಕೆಲವೇ ದಿನಗಳಲ್ಲಿ ಬಿಡುಗಡೆಗೆ ಸಿದ್ಧತೆ ಮಾಡಲಾಗುತ್ತದೆ ಎಂದು ಕಿರುಚಿತ್ರದನಿರ್ದೇಶಕ ಯಮನಪ್ಪ ಜಾಲಗಾರ ಹೇಳುತ್ತಾರೆ.
ಸರ್ ನೈಟ್ ಎಣ್ಣೆ ಹೊಡೆಯೋನ್ವಾ " ಆಲ್ಬಮ್ ಗೀತೆಗೆ ಚಿತ್ರದ ನಿರ್ದೇಶನ, ನಿರ್ಮಾಣ, ಸಂಕಲನ,
ಯಮನಪ್ಪ ಜಾಲಗಾರ , ಹಾಗೂ
ಸಹ ನಿರ್ದೇಶನ ಹಾಗೂ ಸಂಗೀತ ಸಂಯೋಜನೆ ಫಕ್ಕೀರಪ್ಪ ಎಸ್. ಮಾದನಭಾವಿ, ಸ್ಟುಡಿಯೋ : ಮಧುಬನ್ ಸ್ಟುಡಿಯೋ ಧಾರವಾಡ, ಗಾಯಕ ಫಕ್ಕೀರಪ್ಪ ಮಾದನಭಾವಿ.ಪ್ರಸನ್ನ ಸಿಂದಗಿ ಇವರು ಹಲವಾರು ವಿಶೇಷ ಪಾತ್ರಗಳ ಮೂಲಕ ಗಮನಸೆಳೆದಿದ್ದಾರೆ. ಛಾಯಾಗ್ರಹಣ : ರವಿ.ಎತ್ತಿನಮನಿ ಈ ಹಾಡಿನಲ್ಲಿ ಕಲಾವಿದರಾದ ಯಮನಪ್ಪ ಜಾಲಗಾರ,
ಫಕ್ಕೀರಪ್ಪ ಎಸ್. ಮಾದನಭಾವಿ,ಪ್ರಸನ್ನ ಸಿಂದಗಿ, ಬಸವರಾಜ ಆನೆಗುಂದಿ,
ಮಲ್ಲಪ್ಪ ಹೊಂಗಲ್ ,ಮಣಿಕಂಠ ಶೆಟ್ಟಿ ,ಜಯಶ್ರೀ ಜಾತಿಕರ್ತ ,ವೀರೇಶ್ ಅಕ್ಕಿ, ಈ ಹಾಡಿನಲ್ಲಿ ಕಲಾವಿದರು ನೃತ್ಯ ಮಾಡಿದ್ದಾರೆ.