*ಸಮಾಜ ಮುಖಿ ಕಾಯಕದಲ್ಲಿ ತೊಡಗಿರುವ ಸಂಜಯಕುಮಾರ ಬಿರಾದಾರ ಅವರಿಗೆ ಜಮ್ಮು ಮತ್ತು ಕಾಶ್ಮೀರದ ನಿಕಟ ಪೂರ್ವ. ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರಿಂದ ನ್ಯಾಷನಲ್ ಯೂತ್ ಎಕ್ಸಲೇನ್ಸ್ ರಾಷ್ಟ್ರ ಪ್ರಶಸ್ತಿಯಿಂದ ಸನ್ಮಾನ..
ಕರ್ನಾಟಕದ ಯುವ ಪ್ರತಿಭೆ ಸಂಜಯಕುಮಾರ ಯ. ಬಿರಾದಾರ ಅವರಿಗೆ ಜಮ್ಮು ಕಾಶ್ಮೀರದಲ್ಲಿ ಅವರ ಎನ್.ಎಸ್.ಎಸ್ ನಲ್ಲಿಯ ಕಾರ್ಯ ವೈಖರಿ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಜಮ್ಮುವಿನ ಗಾಂಧಿನಗರ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ 'ಲಿವ್ ಫಾರ್ ಅದರ್ಸ್ - ಬಿಯಿಂಗ್ ಹೆಲ್ಪ್ ಪುಲ್ ಪೌಂಡೇಶನ್' ವತಿಯಿಂದ ಆಯೋಜಿಸಿದ್ದ 'ನ್ಯಾಷನಲ್ ಯೂತ್ ಎಕ್ಸ್ಚೇಂಜ್' ಕಾರ್ಯಕ್ರಮದಲ್ಲಿ “ನ್ಯಾಷನಲ್ ಯೂತ್ ಎಕ್ಸಲೇನ್ಸ್ ಪ್ರಶಸ್ತಿ"ಯನ್ನು.
ಭಾರತ ಆದ್ಯಂತ 25 ಯವಕರಿಗೆ ಜಮ್ಮು ಮತ್ತ ಕಾಶ್ಮಿರದ ನಿಕಟ ಪೂರ್ವ ಮುಖ್ಯಮಂತ್ರಿಗಳು, ರಾಜ್ಯಸಭಾ ವಿರೋಧ ಪಕ್ಷದ ನಾಯಕರು ಹಾಗೂ ಪದ್ಮಭೂಷಣ ಸನ್ಮಾನ್ಯ ಗುಲಾಮ್ ನಬಿ ಆಜಾದ್ ಅವರು ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಪದ್ಮಶ್ರೀ ಪಡೆದ ಮೋಹನ್ ಸಿಂಗ್ ಅವರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ. ಫೌಂಡೆಶನ್ ನ ಸಂಸ್ಥಾಪಕ ಅಧ್ಯಕ್ಷರಾದ ವಿವೇಕ ಪರಿಹಾರ ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರಶಸ್ತಿಯನ್ನು ಪಡೆದ ಸಂಜಯಕುಮಾರ ಯ. ಬಿರಾದಾರ ಅವರಿಗೆ ಶಾಸಕರಾದ ಶಿವಾನಂದ ಎಸ್ ಪಾಟೀಲ್.
ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ. ಬಿ ಗುಡಸಿ, ಐಎಎಸ್ ಅಧಿಕಾರಿ ಶ್ರೀ ಯಶಪಾಲ್ ಕ್ಷೀರಸಾಗರ, ಸಮಾಜ ಸೇವಕರಾದ ಕೃಷ್ಣಾ ಡಿ ಕೊಳ್ಳಾನಟ್ಟಿ, ರೇಷ್ಮೆ ಇಲಾಖೆ ಮಾಜಿ ಅಧ್ಯಕ್ಷರಾದ ಶ್ರೀಮತಿ ಸವಿತಾ ಅಮರಶೇಟ್ಟಿ ಹಾಗೂ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ. ಸಂಗಪ್ಪ ಚಲವಾದಿ ಮತ್ತು ಶಿಕ್ಷಕರು, ಸ್ನೇಹಿತರು, ಕುಟುಂಬದವರು ಶುಭ ಹಾರೈಸಿ ಅಭಿನಂದಿಸಿದ್ದಾರೆ.