ವಡವಿ ಗ್ರಾಮ ಪಂಚಾಯತಿಯಲ್ಲಿ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮ
ಶಿರಹಟ್ಟಿ : ವಡವಿ ಗ್ರಾಮಪಂಚಾಯತಿಯಲ್ಲಿ ನಮ್ಮ ನಡೆ ಮತಗಟ್ಟೆ ಕಡೆ ಎನ್ನುವ ಮತದಾನ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಮತಗಟ್ಟೆಗಳನ್ನು ತಳಿರು ತೊರಣಗಳಿಂದ ಸಿಂಗರಿಸಿ ರಂಗೋಲಿ ಬಿಡಿಸಿ ತಮ್ಮ ಮತಗಟ್ಟೆ ವಿಕ್ಷೀಸಲು ಆಗಮಿಸಿದ ಮತದಾರರಿಗೆ ಮತಗಟ್ಟೆ ಪರಿಚಯ ಮಾಡಿಕೊಡಲಾಯಿತು ವಡವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಡವಿ , ಹೊಸೂರ , ಅಲಗಿಲವಾಡ, ಬೆಳಗಟ್ಟಿ ಈ ನಾಲ್ಕು ಗ್ರಾಮಗಳು ಬರುತ್ತಿದ್ದು ಇಲ್ಲಿಯ ಮತದಾರರಿಗೆ ಜಾಗೃತಿ ಮೂಡಿಸಲಾಯಿತು ಮತದಾನಕಿಂತ ಇನ್ನೊಂದಿಲ್ಲ ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಘೋಷವಾಕ್ಯದೊಂದಿಗೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಎಲ್ಲಾ ಅರ್ಹ ಮತದಾರರು ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸುವದರ ಮೂಲಕ ತಮ್ಮ ಹಕ್ಕನ್ನು ಚಲಾಯಿಸುವದು ಕಡ್ಡಾಯವಾಗಿದೆ ಇದೆ ಸಂದರ್ಭದಲ್ಲಿ ಅಲಗಿಲವಾಡ ಶಾಲೆಯ ಪ್ರಧಾನ ಗುರುಗಳಾದ ಹಾಲೇಶ ಜಕ್ಕಲಿ ಪ್ರತಿಜ್ಞಾವಿಧಿ ಬೋಧಿಸಿದರು ಗ್ರಾಮದ ಬೀದಿಗಳಲ್ಲಿ ಜಾಗೃತಿ ಜಾತಾ ಸಂಚರಿಸಿ ಮತದಾರರಿಗೆ ತಿಳುವಳಿಕೆ ನೀಡಿ
ಜಾಗೃತಿಗೊಳಿಸಲಾಯಿತು ಅಲ್ಲದೆ ಬೆಳಗಟ್ಟಿ ಗ್ರಾಮದಲ್ಲಿ ಪಂಚಾಕ್ಷರಿ ಕಲಾ ತಂಡ ಸೊರಟೂರ ಇವರಿಂದ ಬೀದಿ ನಾಟಕ ಏರ್ಪಡಿಸಿ ಮತದಾನದ ಅರಿವು ಮೂಡಿಸುವದರೊಂದಿಗೆ ಜಾಗೃತಿ ಮೂಡಿಸಲಾಯಿತು . ಚುನಾವಣೆಯಲ್ಲಿ ಚುನಾವಣೆ ಆಯೋಗದ ನಿರ್ಧೇಶನದಂತೆ 80 ವರ್ಷ ಮೇಲ್ಪಟ್ಟ ಹಾಗೂ ನಡೆಯಲು ಬಾರದ ವಿಶೇಷ ಅಗತ್ಯಯುಳ್ಳ ನೊಂದಣಿ ಮಾಡಿಕೊಂಡ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿ ಕೊಡಲಾಗಿದ್ದು ಈ ಚುನಾವಣೆಯ ವಿಶೇಷವಾಗಿದೆ ಹೊಸದಾಗಿ ಮತದಾನದ ಹಕ್ಕನ್ನು ಪಡೆದಿರುವ ಯುವ ಮತದಾರರಿಗೆ ಹೆಚ್ಚಿನ ತಿಳುವಳಿಕೆ ನೀಡಲಾಯಿತು ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಅರ್ಹ ಮತದಾರರು ತಪ್ಪದೆ ಮತದಾನ ಮಾಡಿ ಎಂದು ಸಭೆಯಲ್ಲಿ ತಿಳಿಸಲಾಯಿತು ಈ ಕಾರ್ಯಕ್ರಮದಲ್ಲಿ ವಡವಿ ಗ್ರಾಮಪಂಚಾಯತಿಯ
ಕಾರ್ಯದರ್ಶಿಗಳಾದ ಎಚ್ ಎಸ್ ಮಾಳೆಕೊಪ್ಪ , ಅಂಗನವಾಡಿ ಮೇಲ್ವಿಚಾರಕಿಯರಾದ ರೇಣುಕಾ ಹುಲ್ಲೂರ , ಅಲಗಿಲವಾಡ ಶಾಲೆಯ ಪ್ರಧಾನ ಗುರುಗಳಾದ ಹಾಲೇಶ ಜಕ್ಕಲಿ , ಗುರುಬಳಗ ಗ್ರಾಮಪಂಚಾಯತಿಯ ಸಿಬ್ಬಂದಿಗಳು , ಗ್ರಂಥಪಾಲಕರು ,ಬಿ ಎಲ್ ಒ ಗಳು , ಸ್ತ್ರೀ ಶಕ್ತಿ ಸಂಘ , ಮಹಿಳಾ ಸಂಘ , ಅಂಗನವಾಡಿ , ಆಶಾಕಾರ್ಯಕರ್ತೆಯರು ಮತದಾರರು ಆಗಮಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಿದರು