ಉಣಕಲ್ಲ ಶ್ರೀ ಸದ್ಗುರು ಸಿದ್ಧೇಶ್ವರ ಮಹಾಸ್ವಾಮಿಗಳ ಯುಗಾದಿ ಮಹೋತ್ಸವ, ರಥೋತ್ಸವ ಮತ್ತು ಶ್ರೀ ಸದ್ಗುರು ಸಿದ್ಧೇಶ್ವರರ 102 ನೇ ವರ್ಷದ ಪುಣ್ಯಾರಾಧನೆಯ ಮಹೋತ್ಸವ

ಉಣಕಲ್ಲ ಶ್ರೀ ಸದ್ಗುರು ಸಿದ್ಧೇಶ್ವರ ಮಹಾಸ್ವಾಮಿಗಳ ಯುಗಾದಿ ಮಹೋತ್ಸವ, ರಥೋತ್ಸವ ಮತ್ತು ಶ್ರೀ ಸದ್ಗುರು ಸಿದ್ಧೇಶ್ವರರ 102 ನೇ ವರ್ಷದ ಪುಣ್ಯಾರಾಧನೆಯ ಮಹೋತ್ಸವ
ಹುಬ್ಬಳ್ಳಿ 06: ಉಣಕಲ್ಲ ಶ್ರೀ ಸದ್ಗುರು ಸಿದ್ಧೇಶ್ವರರ 102 ನೇ ವರ್ಷದ ಪುಣ್ಯಾರಾಧನೆಯ ಮಹೋತ್ಸವವು ದಿ 12 ರಿಂದ ಆರಂಭವಾಗುವದೆಂದು ಟ್ರಸ್ಟ ಕಮಿಟಿಯ ಅಧ್ಯಕ್ಷರು ಮತ್ತು ಹು-ಧಾ ಮಹಾನಗರ ಪಾಲಿಕೆಯ ಹಿರಿಯ ಸದಸ್ಯರಾದ ರಾಜಣ್ಣ ಮೂರುಸಾವಿರಪ್ಪ ಕೊರವಿ ಸೋಮವಾರ ಪತ್ರಿಕಾಭವನದಲ್ಲಿ  ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು

ದಿ 12 ರಂದು ರಾತ್ರಿ 10 ಘಂಟೆಗೆ ಸದ್ಗುರು ಸಿದ್ದೇಶ್ವರ ಭಜನಾ ಮಂಡಳಿ ಛಲವಾದಿ ಓಣಿ ಉಣಕಲ್ಲ, ಶ್ರೀಮತಿ.ಚನ್ನಬಸಮ್ಮ ಹೊನ್ನಣ್ಣವರ ಮತ್ತು ತಂಡದ ಮಹಾಜಾಗರಣೆಯೊಂದಿಗೆ ಭಜನೆಯು ಪ್ರಾರಂಭವಾಗುವದು.

ದಿ 13 ರಿಂದ 23 ರವರಗೆ ಸಾಯಂಕಾಲ 6-30 ರಿಂದ ಉಪ್ಪಿನ ಬೆಟಗೇರಿಯ ಮ.ನಿ.ಪ್ರಸ್ವ ಪೂಜ್ಯ ಶ್ರೀ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಇವರಿಂದ ಪ್ರವಚನ ಜರಗುವುದು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮತ್ತು ಸಾನಿಧ್ಯವನ್ನು ಧಾರವಾಡ ಮುರಘಾಮಠದ ಶ್ರೀ ಮ. ನಿ. ಪ್ರ ಸ್ವ ಪೂಜ್ಯ ಶ್ರೀ ಡಾ|| ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾಡಲಿದ್ದು.

ದಿ 17 ರ ದಿವ್ಯ ಸಾನಿಧ್ಯವನ್ನು ಮೂರುಸಾವಿರಮಠದ ಮ.ನಿ.ಪ್ರಸ್ವ ಪೂಜ್ಯ ಶ್ರೀ ಡಾ|| ಜಗದ್ಗುರು ಗುರುಸಿದ್ಧ ರಾಜಯೋಗೇಂದ್ರ ಮಹಾಸ್ವಾಮಿಗಳು ಸಾನಿಧ್ಯವನ್ನು ವಹಿಸಲಿದ್ದಾರೆ.      ದಿ 18 ರ ದಿವ್ಯ ಸಾನಿಧ್ಯವನ್ನು ಹೊಸಹಳ್ಳಿಯ ಬೂದೀಶ್ವರ ಸಂಸ್ಥಾನ ಮಠದ ಮ.ನಿ.ಪ್ರ.ಸ್ವ ಪೂಜ್ಯ ಶ್ರೀ ಬೂದೀಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ.

ದಿ 19 ದಿವ್ಯ ಸಾನಿಧ್ಯವನ್ನು ಗದಗದ ಶ್ರೀ ತೋಂಟದಾರ್ಯ ಮಠದ ಪರಮ ಪೂಜ್ಯ ಶ್ರೀ ಜಗದ್ಗುರು ಡಾ|| ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಲಿದ್ದಾರೆ.      ದಿ 20 ರ ದಿವ್ಯ ಸಾನಿಧ್ಯವನ್ನು ಕುಂದಗೋಳದ ಕಲ್ಯಾಣಪುರ ಮಠದ ತ್ರಿವಿಧ ದಾಸೋಹಿ ಪರಮ ಪೂಜ್ಯ ಶ್ರೀ ಬಸವಣ್ಣ ಅಜ್ಜನವರು ವಹಿಸಲಿದ್ದಾರೆ.      ದಿ 21 ರ ದಿವ್ಯ ಸಾನಿಧ್ಯವನ್ನು ಮನಗುಂಡಿಯ ಶ್ರೀ ಮ.ನಿ.ಪ್ರ. ಪೂಜ್ಯ ಶ್ರೀ ಬಸವಾನಂದ ಸ್ವಾಮಿಗಳು ವಹಿಸಲಿದ್ದಾರೆ. ಪ್ರತಿದಿನ ಸದ್ಗುರು ಸಿದ್ಧಪ್ಪಜ್ಜನವರ ಚರಿತ್ರೆಯನ್ನು ಗುರುನಾಥ ಮುಳಗುಂದ ಅವರು ಮಾಡಲಿದ್ದು, ವಿವಿಧ ಭಜನಾ ಮಂಡಳಿಗಳು ಭಜನೆಯನ್ನು ಮಾಡಲಿವೆ.

ದಿ 22 ರಂದು ಮುಂಜಾನೆ 10-30 ಕ್ಕೆ ಹುಬ್ಬಳ್ಳಿಯ ರುದ್ರಾಕ್ಷಿಮಠದ ಮ.ನಿ.ಪ್ರ.ಸ್ವ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಅವರ ಅಧ್ಯಕ್ಷತೆಯಲ್ಲಿ ಡಾ|| ಸಿದ್ಧಯ್ಯ ಬ.ಹಿರೇಮಠ ಮತ್ತು ಮಹಾಂತಸ್ವಾಮಿ ಹಿರೇಮಠ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ವಿವಾಹಗಳು ಜರುಗಲಿವೆ, ಯುಗಾದಿ ಪ್ರತಿಪದ. ಚೈತ್ರಮಾಸದ ರಥೋತ್ಸವ ಸಾಯಂಕಾಲ 5-30 ಕ್ಕೆ ಜರಗುತ್ತದೆ ಎಂದು ರಾಜಣ್ಣ ಕೊರವಿ ಅವರು ತಿಳಿಸಿದರು . ರಾತ್ರಿ 10 ಘಂಟೆಗೆ ಉಣಕಲ್ಲ ದುರ್ಗದ ಓಣಿಯ ಬಯಲಿನಲ್ಲಿ ಶ್ರೀ ರೇಣುಕಾ ಯಲ್ಲಮ್ಮ ಮಹಾತ್ಮ ಪೌರಾಣಿಕ ನಾಟಕ ಆಯೋಜಿಸಲಾಗಿದೆ.                        ದಿ 26 ಸಾಯಂಕಾಲ 7 ಘಂಟೆಗೆ ತೇರಿನ ಕಳಸ ಇಳಿಸುವ ಕಾರ್ಯಕ್ರಮವು ನಗರದ ಎರಡೆತ್ತಿನ ಮಠದ ಮ.ನಿ.ಪ್ರಸ್ವ ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಸಾನಿದ್ಯದಲ್ಲಿ ಜರುಗುವದೆಂದು ಹೇಳಿದರು.

ದಿ 23 ರಿಂದ 26 ರವರಗೆ ಸಾಯಂಕಾಲ 4-30 ಘಂಟೆಗೆ ಬಯಲುಗಣ ಕುಸ್ತಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು ಮತ್ತು ಗಣ್ಯರಿಗೆ ಸನ್ಮಾನ ಆಯೋಜಿಸಲಾಗಿದೆ. ಸದ್ಭಕ್ತರು ಪರಿವಾರದೊಂದಿಗೆ ಶ್ರೀ ಸದ್ಗುರು ಸಿದ್ಧೇಶ್ವರ ಮಹಾಸ್ವಾಮಿಗಳ ದರ್ಶನಾರ್ಶೀವಾದಗಳನ್ನು ಪಡೆದು ಪ್ರಸಾದ ಸ್ವೀಕರಿಸಿ, ಕೃತಾರ್ಥರಾಗಬೇಕೆಂದು ಸಂಘಟಿಕರು ವಿನಂತಿಸಿದರು. ಕುಟುಂಬ ಮೂರ್ತಿಯ

ಸಾಮೂಹಿಕ ವಿವಾಹದ ನೋಂದಣಿಯನ್ನು ದಿ 14  ರೊಳಗಾಗಿ ಕಾರ್ಯದರ್ಶಿ ಅಡಿವೆಪ್ಪ ಕ. ಮೆನಸಿನಕಾಯಿ ಅವರಲ್ಲಿ ಸೂಕ್ತ ಮಾಹಿತಿಗಳೊಂದಿಗೆ ಮಾಡಬೇಕು ಮತ್ತು ಹೆಚ್ಚಿನ ಮಾಹಿತಿಯನ್ನು ಅವರ ಮೊಬೈಲ ನಂಬರ್ 9901530305 ಪಡೆಯಬಹುದು ಎಂದರು.

ಟ್ರಸ್ಟಿನ ಉಪಾಧ್ಯಕ್ಷರಾದ ರಾಮಣ್ಣ ಮ.ಪದ್ಮಣ್ಣವರ, ಕಾರ್ಯದರ್ಶಿ ಅಡಿವೆಪ್ಪ ಕ. ಮೆಣಸಿನಕಾಯಿ ಸದಸ್ಯರಾದ ಶಿವಾಜಿ, ರಾ ಕನ್ನಿಕೊಪ್ಪ, ಗುರುಸಿದ್ಧಪ್ಪ ಸಿ.ಬೆಂಗೇರಿ ಮುಂತಾದವರು ಪತ್ರೀಕಾಗೋಷ್ಟೀಯಲ್ಲಿ ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال