ಬಸವಕಲ್ಯಾಣದಲ್ಲಿ ಲಿಂಗಾಯತ ಮಹಾಧಿವೇಶನ.ಮಾ 4 ಹಾಗೂ 5 ರಂದು.
ಧಾರವಾಡ :- ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ನಡೆಯಲಿರುವ ರಾಷ್ಟ್ರೀಯ ಪ್ರಥಮ ಲಿಂಗಾಯತ ಮಹಾಧಿವೇಶನವು ಮಾರ್ಚ 4 ಹಾಗೂ 5 ರಂದು ಬೀದರ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಜರುಗಲಿದೆ ಎಂದು ಮುಂಡರಗಿ ತೋಂಟದಾರ್ಯಮಠದ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಜಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು..ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ಲಿಂಗಾಯತ ಸಿದ್ದಾಂತ ಸಮಾಜ ಚರಿತ್ರೆಗಳ ಸ್ವರೂಪ, ಲಿಂಗಾಯತ ಸಂಘಟನೆ ಕುರಿತು ಚಿಂಥನ ಮಂಥನ ನಡೆಸಿ ಸಂಘಟನೆ ಬಲಪಡಿಸುವ ಕೆಲಸ ಮಾಡಲಿದೆ. ಬಸವಾದಿ ಪ್ರಮಥರಿಂದ ಸೃಷ್ಠಿಯಾಗಿರುವ ಲಿಂಗಾಯತವೆನ್ನುವುದು ಒಂದು ಪರಿಪೂರ್ಣ ಸಮಾಜಮುಖಿ ಸಿದ್ದಾಂತವಾಗಿದೆ. ಜೈನ, ಬೌದ್ಧ, ಶಿಖ್ಖ ಧರ್ಮಗಳು ಹಿಂದೂ ಅಥವಾ ವೈದಿಕ ಧರ್ಮದಿಂದ ಪ್ರತ್ಯೇಕಗೊಂಡು ಪ್ರಬುದ್ದವಾಗಿ ಬೆಳೆದಿವೆ, ಅದೇ ತರಹ ಬಸವಾದಿ ಶರಣರ ವಿಚಾರಧಾರೆ, ವಚನ ಸಾಹಿತ್ಯ ಮತ್ತು ಸಂಸ್ಕೃತಿ ಆಧಾರದ ಮೇರೆಗೆ ಲಿಂಗಾಯತ ಕೂಡ ಸ್ವತಂತ್ರ ಧರ್ಮವಾಗಿದೆ ಎಂದರು.
ಇದಕ್ಕೆ ಕೇಂದ್ರ ಸರ್ಕಾರ ಮಾನ್ಯತೆ ಮಾಡಬೇಕು ಆ ನಿಟ್ಟಿನಲ್ಲಿ ನಮ್ಮ ಹಕ್ಕೊತ್ತಾಯ ಮುಂದುವರೆಯಲಿದ್ದು ಲಿಂಗಾಯತ ಧರ್ಮವು ಸ್ವತಂತ್ರ ಧರ್ಮವೆಂದು ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಅಧಿವೇಶನದಲ್ಲಿ ಮಠಾಧೀಶರು, ಸಾಹಿತಿಗಳು, ಸಂಶೋಧಕರು, ಅನುಭಾವಿಗಳು ಭಾಗವಹಿಸಲಿದ್ದು ರಾಜ್ಯ ಅಂತರಾಜ್ಯದಿಂದ ಲಕ್ಷಾಂತರ ಲಿಂಗಾಯತರು, ಬಸವಾಭಿಮಾನಿಗಳು ಆಗಮಿಸುವರು. ಬೀದರ ಜಿಲ್ಲೆಯ ಬಸವ ಕಲ್ಯಾಣಕ್ಕೆ ಆಗಮಿಸುವ ಬಸವಾಭಿಮಾನಿಗಳು, ಲಿಂಗಾಯತ ಹಾಗೂ ಲಿಂಗಾಯತ ಒಳಪಂಗಡಗಳ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಅಧಿವೇಶನಕ್ಕೆ ಆಗಮಿಸುವ ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9886323895. 9448821621. 9738304265. 9448357876 ಸಂಪರ್ಕಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ ವೀರಣ್ಣ ರಾಜೂರ. ಎಂ.ವಿ ಗೊಂಗಡಶೆಟ್ಟಿ. ಪ್ರಭು ನಡಕಟ್ಟಿ. ಬಸವಂತ ತೋಟದ. ಚನ್ನಪ್ಪಗೌಡ ಪಾಟೀಲ. ಸಿದ್ದರಾಮಣ್ಣ ನಡಕಟ್ಟಿ. ಇದ್ದರು