ಧಾರವಾಡದ ಮಧ್ಯವರ್ತಿ ಭಾಗದಲ್ಲಿರುವ ಕಡಪಾ ಮೈದಾನವನಕ್ಕೆ 2 ಕೋಟಿ 30 ಲಕ್ಷದ ಕಾಯಕಲ್ಪದ ಕಾಮಗಾರಿಯ ಬಗ್ಗೆ ಮಹಾಪೌರ ಅವರು, ಸ್ಥಳ ಪರಿಶೀಲನೆ

 ಧಾರವಾಡದ ಮಧ್ಯವರ್ತಿ ಭಾಗದಲ್ಲಿರುವ ಕಡಪಾ ಮೈದಾನವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರ ಮುತುವರ್ಜಿಯ ಮೇರೆಗೆ 2 ಕೋಟಿ 30 ಲಕ್ಷದ ಕಾಯಕಲ್ಪದ ಕಾಮಗಾರಿಯ ಬಗ್ಗೆ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರು, ಸ್ಥಳ ಪರಿಶೀಲನೆ ನಡೆಸಿದರು. 
ಶ್ರೀ ಅಟಲ್ ಬಿಹಾರಿ ವಾಜಪೇಯಿ ರವರು, ಶ್ರೀ ಅಡ್ವಾಣಿ ರವರು, ಶ್ರೀ ಜಗನ್ನಾಥರಾವ್ ಜೋಷಿ ರವರಂಥ ಮಹಾನ್ ವ್ಯಕ್ತಿಗಳು ತಮ್ಮ ವಾಕ್ ಚಾತುರ್ಯವನ್ನು ಪ್ರದರ್ಶಿಸಿದ ಈ ಮೈದಾನದ ಜೀರ್ಣೋದ್ದಾರ ಕಾಮಗಾರಿಯನ್ನು ನಡೆಸಲು ಮಹಾಪೌರರು ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದರು.
 ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ಶ್ರೀ ಸುರೇಶ ಬೆದರೆ ರವರು, ಪಾಲಿಕೆಯ ವಲಯ ಸಹಾಯಕ ಆಯುಕ್ತರಾದ ಶ್ರೀ ಆರ್.ಎಂ. ಕುಲಕರ್ಣಿ ರವರು, ಅಭಯಂತರರಾದ ಶ್ರೀ ರಾಜೇಶ ಪ್ರಕಾಶ ರವರು, ಶ್ರೀ ನಾರಾಯಣ ಚಳಗೇರಿ ರವರು, 

ಶ್ರೀ ಬಸವರಾಜ ರುದ್ರಾಪುರ ರವರು ಉಪಸ್ಥಿತರಿದ್ದರು.

SUBSCRIBE OUR STAR 74 NEWS CHANNEL LIKE SHARE.
ನವೀನ ಹಳೆಯದು

نموذج الاتصال