ಕನ್ನಡ ರಾಜ್ಯೋತ್ಸವ ನಿಮಿತ್ತ ಹಂಪಿ ಕನ್ನಡ ವಿ.ವಿ.* *ಪ್ರಸಾರಾಂಗದ ಪುಸ್ತಕಗಳಿಗೆ ಶೇ. ೫೦ ರಿಯಾಯತಿ

*ಕನ್ನಡ ರಾಜ್ಯೋತ್ಸವ ನಿಮಿತ್ತ ಹಂಪಿ ಕನ್ನಡ ವಿ.ವಿ.* 
 *ಪ್ರಸಾರಾಂಗದ ಪುಸ್ತಕಗಳಿಗೆ ಶೇ. ೫೦ ರಿಯಾಯತಿ* 
 *ಧಾರವಾಡ* : ಪ್ರಸ್ತುತ ೬೭ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯವು ತನ್ನ ಪ್ರಸಾರಾಂಗದಿಂದ ಪ್ರಕಟವಾಗಿರುವ ಎಲ್ಲ ಪುಸ್ತಕಗಳ ಮೇಲೆ ಶೇಕಡಾ 50 ರಷ್ಟು ರಿಯಾಯಿತಿ ಘೋಷಿಸಿದೆ.
ನವ್ಹೆಂ. 1 ರಿಂದ ತಿಂಗಳು ಪೂರ್ತಿ ಅಂದರೆ ನವ್ಹೆಂ.30 ರವರೆಗೆ ಈ ರಿಯಾಯಿತಿ ಸೌಲಭ್ಯವು ಲಭ್ಯವಿದ್ದು, ಅರ್ಧ ಬೆಲೆಗೆ ಮಾರಾಟವಾಗುವ ಪುಸ್ತಕಗಳನ್ನು ಪಡೆದುಕೊಳ್ಳಲು ಸಾರ್ವಜನಿಕರು ಈ ಮುಂದಿನ ವಿಳಾಸವನ್ನು ಇಲ್ಲವೇ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕಿ ಡಾ. ಶೈಲಜಾ ಹಿರೇಮಠ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಸಂಪರ್ಕ ವಿಳಾಸ   ನಿರ್ದೇಶಕರು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ-583276 ಹೊಸಪೇಟೆ  ತಾಲ್ಲೂಕು, ವಿಜಯನಗರ ಜಿಲ್ಲೆ. ಮೊಬೈಲ್ 
 9449262647
ಪುಸ್ತಕ ಮಾರಾಟ ಮಳಿಗೆ, ಪ್ರಸಾರಾಂಗ, ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಾದೇಶಿಕ ಕಚೇರಿ, ನಂ. 1, ಕಾನೂನು ಕಾಲೇಜು ಹಳೆಯ ಕಟ್ಟಡ, ಮೈಸೂರು ಬ್ಯಾಂಕ್ ವೃತ್ತ, ಅರಮನೆ ರಸ್ತೆ, ಬೆಂಗಳೂರು-560009. ಮೊಬೈಲ್ ಸಂಖ್ಯೆ:  9448241077 ಅಥವಾ ದೂರವಾಣಿ ಸಂಖ್ಯೆ: 
080-22372388
ಮುಖ್ಯಸ್ಥರು, ಪ್ರಸಾರಾಂಗ ಪುಸ್ತಕ ಮಾರಾಟ ಕೇಂದ್ರ, ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಕುಪ್ಪಳ್ಳಿ- ,577126 ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಮೊಬೈಲ್ ಸಂಖ್ಯೆ: .9448092732 ಕಚೇರಿ ಅವಧಿಯಲ್ಲಿ ಕರೆ ಮಾಡಿ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ.

 ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ವಿಕಾಸದ ಆಶಯಗಳನ್ನೇ ಕೇಂದ್ರೀಕರಿಸಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ತನ್ನ ಪ್ರಸಾರಾಂಗದ ಎಲ್ಲ ಪ್ರಕಟಣಾ ಕೃತಿಗಳ ಮೇಲೆ ಶೇ.50 ರಿಯಾಯಿತಿ ನೀಡಿರುವುದರಿಂದ ಸಾರ್ವಜನಿಕರು ಹೆಚ್ಚೆಚ್ಚು ಹೊಸ ಪುಸ್ತಕಗಳನ್ನು ಖರೀದಿಸಿ ಹೊಸ ಓದು ಮತ್ತು ಪುಸ್ತಕ ಪ್ರೀತಿಗೆ ತೆರೆದುಕೊಳ್ಳಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ”* 
-ಡಾ. ಶೈಲಜಾ ಹಿರೇಮಠ, ಪ್ರಸಾರಾಂಗ ನಿರ್ದೇಶಕರು, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ನವೀನ ಹಳೆಯದು

نموذج الاتصال