ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕೇಂದ್ರ ಕಚೇರಿಯ ಸಭಾಭವನದಲ್ಲಿ ಸಾಮಾನ್ಯ ಸಭೆಯನ್ನು ನಡೆಸುವ ನಿಟ್ಟಿನಲ್ಲಿ
ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರು ಸಭಾಭವನದ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಈ ತಿಂಗಳ 28 ನೇ ದಿನಾಂಕದಂದು ಬೆಳಿಗ್ಗೆ 10:30 ಗಂಟೆಗೆ ನೂತನ ಸಭಾಭವನದ ಉದ್ಘಾಟನೆ
ಕಾರ್ಯಕ್ರಮ ಹಾಗೂ ಮಧ್ಯಾಹ್ನ 12:00 ಗಂಟೆಗೆ ಈ ತಿಂಗಳ ಸಾಮಾನ್ಯ ಸಭೆಯನ್ನು ನಡೆಸುವುದಾಗಿ ಪ್ರಕಟಿಸಿದರು. ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ಶ್ರೀ ವಿಜಯಾನಂದ ಶೆಟ್ಟಿ ರವರು, ಶ್ರೀ ಸುರೇಶ ಬೆದರೆ ರವರು, ಶ್ರೀ ಶಂಕರ ಶೇಳಕೆ ರವರು,
ಶ್ರೀ ವಿಷ್ಣು ಕೊರ್ಲಹಳ್ಳಿ ರವರು, ಶ್ರೀಮತಿ ಅನಿತಾ ಚಳಗೇರಿ ರವರು, ಶ್ರೀಮತಿ ಜ್ಯೋತಿ ಪಾಟೀಲ ರವರು, ಶ್ರೀಮತಿ ನೀಲಮ್ಮ ಅರವಳದ ರವರು, ಶ್ರೀ ಶಂಭು ಸಾಲಿಮನಿ ರವರು,
ಶ್ರೀ ಬಿಲ್ಕಿಸ್ ಬಾನು ಮುಲ್ಲಾ ರವರು, ಪಾಲಿಕೆಯ ಅಧಿಕಾರಿಗಳಾದ ಶ್ರೀ ಟಿಮ್ಮಪ್ಪ,ಶ್ರೀ ಆರ್.ಎಂ. ಕುಲಕರ್ಣಿ ರವರು, ಶ್ರೀ ರಾಜೇಶ ರವರು ಉಪಸ್ಥಿತರಿದ್ದರು.