ಶ್ರೀರಂಗರ ಹರಟೆಗಳು ಸರ್ವಕಾಲಿಕ - ಡಾ.ಕೃಷ್ಣ ಕಟ್ಟಿ ‘

ಶ್ರೀರಂಗರ ಹರಟೆಗಳು ಸರ್ವಕಾಲಿಕ - ಡಾ.ಕೃಷ್ಣ ಕಟ್ಟಿ ‘
ಶ್ರೀರಂಗರು ಬರೆದ ಹರಟೆಗಳು ತುಂಬಾ ಆಪ್ತವಾಗಿ ಹರಡಿಕೊಳ್ಳುತ್ತ ನಿತ್ಯ ಜೀವನದಲ್ಲಿಯ ನೋವು ನಲಿವಿಗೆ ಸ್ಪಂದಿಸುತ್ತ ಹೇಗೆ ಉತ್ತಮ ದಾರ್ಶನಿಕ ಬದುಕಿನತ್ತ ಸಾಗಬೇಕು ಎಂಬುದನ್ನು ವಿವರಿಸುತ್ತವೆ ಎಂದು ಡಾ.ಕೃಷ್ಣ ಕಟ್ಟಿ ನುಡಿದರು.

ಶ್ರೀರಂಗರ ಹರಟೆಗಳು ಎಂಬ ವಿಷಯವಾಗಿ ಅವರು ಮಾತನಾಡುತ್ತಿದ್ದರು. ಜಿ. ಬಿ ಜೋಶಿ ಮೆಮೋರಿಯಲ್ ಟ್ರಸ್ಟ್ ಅಡಿಯಲ್ಲಿ ಧಾರವಾಡದ ಚಿಂತಕರ ಚಾವಡಿ ಎಂದು ಕರೆಸಿಕೊಳ್ಳುವ ಮನೋಹರ ಗ್ರಂಥಮಾಲೆ 'ಅಟ್ಟ'ದಲ್ಲಿ ಶ್ರೀರಂಗರ 119 ನೇ ಜನ್ಮ ದಿನದ ಅಂಗವಾಗಿ ನಡೆದ,ಶ್ರೀರಂಗರ ಬದುಕು ಬರಹ ಕುರಿತು ನಡೆದ ವಿಶೇಷ ಕಾರ್ಯಕ್ರಮ ಗುರುವಾರ ದಿನಾಂಕ 29 ರಂದು ನಡೆಯಿತು.
ಶ್ರೀರಂಗರ ಹರಟೆಗಳಲ್ಲಿ ಜನರ ಜೀವನದಲ್ಲಿ ನಡೆದ ಘಟನೆಗಳು ಹೇಗೆ ಹರಡಿಕೊಂಡಿವೆ,ಪ್ರಸ್ತುತ ಬದುಕಿನಲ್ಲಿಯ  ಘಟನೆಗಳನ್ನು ನಮ್ಮ ಐತಿಹಾಸಿಕ ನಮ್ಮ ಐತಿಹಾಸಿಕ ಘಟನೆಗಳೊಂದಿಗೆ ತಳುಕು ಹಾಕಿ ಅವರು ಸೃಷ್ಟಿಸುವ ಅಪರೂಪದ ಪಾತ್ರಗಳು ಹೇಗೆ ಹರಟೆ ಹೊಡೆಯುತ್ತ ,ಮೆಲಕು ಹಾಕುವಂಥ ಸನ್ನಿವೇಶಗಳನ್ನು ಸೃಷ್ಟಿಸುತ್ತವೆ ಎಂಬುದನ್ನು ಶ್ರೀರಂಗರ ಹರಟೆಯಲ್ಲಿರುವ ಉದಾಹರಣೆಗಳೊಂದಿಗೆ ವಿವರಿಸಿದರು.ಮನೋಹರ ಗ್ರಂಥಮಾಲೆ ಪ್ರಕಟಿಸಿರುವ ಶ್ರೀರಂಗರ ಅರ್ಥಾತ್ ಹರಟೆಗಳು ಎಂಬ ಪುಸ್ತಕದಲ್ಲಿಯ ನಾಲ್ಕಾರು ಹರಟೆಗಳನ್ನು ಆಯ್ದುಕೊಂಡು ಬಹಳ ಸ್ವಾರಸ್ಯಕರವಾಗಿ ಪ್ರೇಕ್ಷಕರ ಜೊತೆ ಹರಟೆ ಹೊಡೆದರು.'ಸ್ವಲ್ಪದರಲ್ಲಿ ಸ್ವಾರಸ್ಯ ಅರ್ಥಾತ ಕುದುರೆಮೋತಿ ಕನಕಾಚಾರ್ಯರು'ಎಂಬ ನಾಲ್ಕು ಹರಟೆಗಳನ್ನು ಕುರಿತು ಡಾ ಕಟ್ಟಿ ತಮ್ಮ ವಿಚಾರಗಳನ್ನು ಜನರ ಮುಂದೆ ಇಟ್ಟರು.ಈ ತಲೆ ಮಾರಿನವರಿಗೆ ಹಳೆಯದನ್ನು ಮತ್ತೆ ಹೊಸದನ್ನಾಗಿಸಿ ಪ್ರಸ್ತುತಕ್ಕೆ ಸಂಬಂಧಿಸದ ಈ ಹರಟೆಗಳು ಸರ್ವಕಾಲಿಕ ಎಂಬುದನ್ನು ತಮ್ಮ ಮಾತಿನಲ್ಲಿ ಹೇಳಿದರು.

ಶ್ರೀರಂಗರನ್ನು ಬಹಳ ಹತ್ತಿರದಿಂದ ಕಂಡ ನಗರದ ಹಿರಿಯ ಅಧ್ಯಾಪಕರು ಹಾಗೂ ಸಾಹಿತಿಗಳಾದ ಶ್ರೀ ಹರ್ಷ ಡಂಬಳ ಅವರು ಇವರ ಬದುಕಿನ ಹಲವಾರು ಘಟನೆಗಳನ್ನು ವಿವರಿಸಿದರು. ಶ್ರೀರಂಗರು ಮಹಾನ್ ಸ್ವಾಭಿಮಾನಿ, ನೇರ ನಡೆ-ನುಡಿಯ ವ್ಯಕ್ತಿ. ಯಾವತ್ತು ಬರವಣಿಗೆಯಲ್ಲಿ ತೊಡಗಿರುತ್ತಿದ್ದರು.ಶ್ರೇಷ್ಠ ಭಾಷಾ ಪ್ರೌಢಿಮೆ, ಭಾರತೀಯ ಸಾಹಿತ್ಯ ಜ್ಞಾನ ಹೊಂದಿದ್ದರು ಆದ್ಯರು.ಶ್ರೀರಂಗರಿಗೆ ಭಗವದ್ಗೀತೆ ಎಂದರೆ 'ಪಂಚ ಪ್ರಾಣ' .ಕಷ್ಟಗಳು ಬಂದಾಗ ಎದೆಗುಂದದೆ ಹೇಗೆ ಬದುಕ ಬೇಕು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟವರು ತೋರಿಸಿಕೊಟ್ಟವರು ಶ್ರೀರಂಗರು. ಅವರಿಗೆ ತಮ್ಮ ಕುಟುಂಬದ ಬಗ್ಗೆ ಎಲ್ಲಿಲ್ಲದ ಕಾಳಜಿ ಮತ್ತು ಪ್ರೀತಿ ಇತ್ತು.ಹೆಂಡತಿ ಮತ್ತು ಮಕ್ಕಳೆಂದರೆ ವಿಶೇಷ ಕಾಳಜಿ ತೋರುತ್ತಿದ್ದರು ಎಂದು ಅನೇಕ ಸಂಗತಿಗಳನ್ನು ಶ್ರೀ ಡಂಬಳ ಅವರು ವಿವರಿಸಿದರು.
ಮನೋಹರ ಗ್ರಂಥಮಾಲೆಯ ಡಾ.ರಮಾಕಾಂತ ಜೋಶಿ ಅವರು ಅಧ್ಯಕ್ಷತೆ ವಹಿಸಿದ್ದರು. ಶ್ರೀರಂಗರ ಕೃತಿಗಳನ್ನು ಗ್ರಂಥಮಾಲೆ ಪ್ರಕಟಿಸುವಾಗಿನ ಅನೇಕ ಪ್ರಸಂಗಗಳನ್ನು ನೆನಪಿಸಿಕೊಂಡರು.

ಡಾ.ಹ ವೆಂ ಕಾಖಂಡಕಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿದರು.ಹಿರಿಯ ಸಾಹಿತಿಗಳಾದ ಶ್ರೀ ರಾಘವೇಂದ್ರ ಪಾಟೀಲ,ಶ್ರೀ ಮಲ್ಲಿಕಾರ್ಜುನ ಹಿರೇಮಠ, ಡಾ.ಅರವಿಂದ ಯಾಳಗಿ,ಡಾ.ಶಶಿಧರ ನರೇಂದ್ರ ಸಮೀರ  ಜೋಶಿ ಅಲ್ಲದೇ ನಗರದ ಇನ್ನೂ ಅನೇಕ  ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನವೀನ ಹಳೆಯದು

نموذج الاتصال