ಶಿವದಾಸ್ ಘೋಷ್ ಜನ್ಮ ಶತಮಾನೋತ್ಸವ

ಶಿವದಾಸ್ ಘೋಷ್ ಜನ್ಮ ಶತಮಾನೋತ್ಸವ
ಸ್ವಾತಂತ್ರ ಹೋರಾಟದ ರಾಜಿ ರಹಿತ ಪಂಥದ ಕ್ರಾಂತಿಕಾರಿ , ಈ ಯುಗದ ಓರ್ವ ಮಹಾನ್ ಮಾರ್ಕ್ಸ್ ವಾದಿ ಚಿಂತಕರು ಹಾಗೂ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕರಾದ ಕಾ. ಶಿವದಾಸ್ ಘೋಷ್ ರವರ ಜನ್ಮ ಶತಮಾನೋತ್ಸವವನ್ನು ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಛೇರಿಯಲ್ಲಿ ಆಚರಿಸಲಾಯಿತು.
ದೇಶದ ದುಡಿಯುವ ಜನ, ಕಾರ್ಮಿಕ ವರ್ಗ ಎದುರಿಸುತ್ತಿರುವ ಜಲಂತ ಸಮಸ್ಯೆಗಳಾದ ಬೆಲೆ ಏರಿಕೆ ನಿರುದ್ಯೋಗ, ಭ್ರಷ್ಟಾಚಾರ ,ಶಿಕ್ಷಣ ಆರೋಗ್ಯದ ವ್ಯಾಪಾರಿಕರಣ , ಎಲ್ಲಾ ಸಮಸ್ಯೆಗಳಿಂದ ಮುಕ್ತವಾದ ಸಮಾಜ ನಿರ್ಮಾಣ ಮಾಡಲು ಈ ದೇಶದ ಜನತೆ  ಮಹಾನ್ ಮಾರ್ಕ್ಸ್ ವಾದಿ  ಚಿಂತಕರಾದ ಶಿವದಾಸ್ ಘೋಷ್ ವಿಚಾರಗಳ ಆಧಾರದ ಮೇಲೆ ಪ್ರಬಲ ಹೋರಾಟವನ್ನು ಬೆಳೆಸಿ ಸಮಾಜವಾದಿ ಭಾರತವನ್ನು ನಿರ್ಮಿಸಲು ಪಣತೊಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಜನತೆಗೆ ಶಿವದಾಸ್ ಘೋಷ್
 ವಿಚಾರಗಳನ್ನು ಪರಿಚಯಿಸಲು ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಜನ್ಮ ಶತಮಾನತ ಸಂದರ್ಭದಲ್ಲಿ ಆಗಸ್ಟ್ 5 2022 ರಿಂದ ಆಗಸ್ಟ್ 5 2023ರ ವರೆಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗಿದೆ. ಉದ್ಘಾಟನಾ ಕಾರ್ಯಕ್ರಮ ದೆಹಲಿಯಲ್ಲಿ ನಡೆಯುತ್ತಿದೆ. ಸಮಾರೋಪ ಕಾರ್ಯಕ್ರಮವು ಕಲ್ಕತ್ತಾದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿಯ ಸೆಕ್ರೆಟರೇಟ್ ಸದಸ್ಯರಾದ ರಾಮಾಂಜಿನಪ್ಪ ಆಲ್ದಳ್ಳಿ, ಜಿಲ್ಲಾ ಸಮಿತಿಯ ಹಿರಿಯ ಸದಸ್ಯರಾದ ಲಕ್ಷ್ಮಣ ಜಡಗಣ್ಣವರ, ಗಂಗಾಧರ ಬಡಿಗೇರ, ಭುವನಾ ಎ ,ಮದುಲತಾ ಗೌಡರ,
ಭವಾನಿಶಂಕರ ,ಶರಣು ಗೋನವಾರ  ಪಕ್ಷದ ಸದಸ್ಯರು ಬೆಂಬಲಿಗರು ಮುಂತಾದವರು ಇದ್ದರು.
ನವೀನ ಹಳೆಯದು

نموذج الاتصال