ಕಾನೂನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಬಿ. ಜಗಲಾಸರ್ ಇಂದಿಲ್ಲಿ ತಿಳಿಸಿದರು.

(ಇಂದು ನಡೆದ ಸಂವಾದ)

    ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ--ಎಸ್ ಪಿ. ಲೋಕೇಶ್ ಬಿ. ಜಗಲಾಸರ್ 
 
    ಧಾರವಾಡ:--ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗುತ್ತಿದೆ.
 ಕಾನೂನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವದು  ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಬಿ. ಜಗಲಾಸರ್  ಇಂದಿಲ್ಲಿ ತಿಳಿಸಿದರು.
       ಧಾರವಾಡ ಜರ್ನಲಿಸ್ಟ್ ಗಿಲ್ಡ್  ದವರು ರಂಗಾಯಣ ಸಭಾಭವನದಲ್ಲಿ ಇಂದು ಆಯೋಜಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಬಿ. ಜಗಲಾಸರ್ 
ಅವರೊಂದಿಗೆ  ಪತ್ರಿಕಾ ಸಂವಾದ ಗೋಷ್ಠಿ ಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
   ಜಾಲತಾಣ ತೀವ್ರ ನಿಗಾ:--  ಸಮಾಜದ ಸಾಮರಸ್ಯ ಹಾಳುಮಾಡುವಂತಹ  ಸಮಾಜ ಘಾತಕ ಶಕ್ತಿಗಳನ್ನು ಗುರುತಿಸಲು ಪೇಸ್ ಬುಕ್, ವಾಟ್ಸ್ ಪ್, ಟ್ವೀಟರ್ ಸೇರಿದಂತೆ ಸಾಮಾಜಿಕ ಚಾಲತಾನಗಳ ಮೇಲೆ ಕಟ್ಡುನಿಟ್ಡಿನ ನೀಗಾವಹಿಸಲಾಗಿದೆ. ಎಂದ ಎಸ್.ಪಿ  ಅವರು ಧಾರ್ಮಿಕ ಭಾವನೆಗಳು, ಕೋಮುಗಲಿಭೆಗೆ ಪ್ರಚೋದನೆ ನೀಡುವವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದರು.
      ಅರ್ಜಿ ವಿಲೇವಾರಿ:--  ಕಳೆದ 2 ತಿಂಗಳಲ್ಲಿ ನಾಗರಿಕ ಸೇವೆ, ಆಡಳಿತ, ನಾಗರಿಕರ ಕುಂದು-ಕೊರತೆ ಸೇರಿದಂತೆ 347 ಬಾಕಿ ಉಳಿದಿಂದ ಅರ್ಜಿಗಳನ್ನು ಇತ್ಯರ್ಥಮಾಡಲಾಗಿದೆ ಎಂದರು.
  
    ಪಾಸ್ ಪೋರ್ಟ್:-- ಜಿಲ್ಲೆಯಲ್ಲಿ ಯಾರೇ ತಮ್ಮ ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಿದ 3 ದಿನಗಳಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಿದ್ದೆನೆ ಇದು ಸುರಳಿತವಾಗಿ ನಡೆಯುತ್ತಿದೆ ಎಂದರು
      
   ಗಣಪತಿ ಬಂದೋಬಸ್ತ್:---ಹೆಚ್ಚುವರಿ 145 ಹೋಮ ಗಾಡ್ಸ್ ನೀಯೋಜನೆ, 2 ಕೆಎಸ್.ಆರ್.ಪಿ ತಂಡವನ್ನು ಸೂಕ್ಷ್ಮ ಪ್ರದೇಶದಲ್ಲಿ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಪೊಲೀಸ್ ರನ್ನು ನೀಯೋಜನೆ ಮಾಡಲಾಗಿದೆ.ಈ ಕುರಿತಂತೆ ಶಾಂತಿ ಸಭೆಯನ್ನು ನಡೆಸಲಾಗಿದೆ ಎಂದ ಅವರು ಜಿಲ್ಲೆಯಲ್ಲಿ ಒಟ್ಟು 1300 ಕ್ಕೊ ಗಣಪತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎಂದರು.
    ಸಿವಿಲ್ ಕೇಸ್:--   ಜಿಲ್ಲೆಯಲ್ಲಿ ಯಾವುದೇ ಸಿವಿಲ್ ಪ್ರಕರಣವನ್ನು
ಪೊಲೀಸ್ ಠಾಣೆಗಳಲ್ಲಿ ರಾಜಿಸಂಧಾನ ಮಾಡದಂತೆ ಹಾಗೂ ಬಗೆಹರಿಸದಂತೆ ನಿರ್ದೇಶನ ನೀಡಿದ್ದೆನೆ. ಪ್ರಕರಣವನ್ನು ದಾಖಲಿಸಬೇಕು ಅದನ್ನು ನ್ಯಾಯಾಲಾಯದ ವ್ಯಾಪ್ತಿಗೆ ಸಂಬಂಧಿಸಿದ್ದಾಗಿದೆ ಎಂದರು.
       ಆಳ್ಳಾವರ, ಕುಂದಗೋಳ ಸೇರಿದಂತೆ ಪೊಲೀಸ್ ಠಾಣೆಯನ್ನು ದುರಸ್ರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಹಾಗೂ ಧಾರವಾಡದ
ಪೊಲಿಸ್ ವಸತಿ ಶಾಲೆಯಲ್ಲಿ ಮೂಲ ಸೌಲಭ್ಯ ಒದಗಿಸಲು ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು.
      ಪತ್ರಿಕಾ ಸಂವಾದ ಗೋಷ್ಟಿಯಲ್ಲಿ ಗಿಲ್ಡ್ ಅಧ್ಯಕ್ಷ, ಕಾರ್ಯದರ್ಶಿ, ಕಾರ್ಯಕಾರಿ ಮಂಡಳಿಯ ಸದಸ್ಯರು ಹಾಗೂ ಗಿಲ್ಡ್ ಸದಸ್ಯರು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال