*ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ*
*ಆ.13 ರಿಂದ 15 ರವರೆಗೆ ಹಗಲು ರಾತ್ರಿ ತಿರಂಗಾ ಹಾರಿಸಿ*;
*ಹರ ಘರ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಿ*
-*ಜಿಲ್ಲಾಧಿಕಾರಿ ಗುರುದತ್ತ ಹೆಗಡೆ*
*ಧಾರವಾಡ(ಕರ್ನಾಟಕ ವಾರ್ತೆ) ಆ.04*: ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಸುಸಂದರ್ಭದಲ್ಲಿ ಹರ ಘರ ತಿರಂಗಾ ಅಭಿಯಾನವನ್ನು ಬರುವ ಆಗಸ್ಟ 13 ರ ಬೆಳಿಗ್ಗೆ 8 ಗಂಟೆಯಿಂದ ಆಗಸ್ಟ್ 15 ರ ಸಾಯಂಕಾಲದ ಸೂರ್ಯಾಸ್ತದವರೆಗೆ 20x30 ಅಳತೆಯ ರಾಷ್ಟ್ರಧ್ವಜವನ್ನು ಹಗಲು ಮತ್ತು ರಾತ್ರಿ ನಿರಂತರವಾಗಿ ಎಲ್ಲ ಶಾಲೆ, ಕಾಲೇಜು, ಸರಕಾರಿ ಕಟ್ಟಡಗಳು, ಗ್ರಾಮ ಪಂಚಾಯತಿಗಳು, ವಿವಿಧ ಸಂಘ ಸಂಸ್ಥೆಗಳು, ಅಂಗನವಾಡಿ ಕಟ್ಟಡಗಳ ಮೇಲೆ ಧ್ವಜ ಹಾರಿಸುವ ಮೂಲಕ ಆಚರಿಸಿ, ಯಶಸ್ವಿಗೊಳಿಸಬೇಕೆಂದು ಎಲ್ಲ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಈ ಕುರಿತು ಸುತ್ತೋಲೆ ಹೊರಡಿಸಿರುವ ಅವರು, ಖಾದಿ ಉದ್ಯಮವನ್ನು ಪ್ರೋತ್ಸಾಹಿಸುವ ಹಿನ್ನಲೆಯಲ್ಲಿ ಧಾರವಾಡ ಜಿಲ್ಲೆಯ ಖಾದಿ ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರಗಳಾದ ಬೆಂಗೇರಿ, ಹೆಬ್ಬಳ್ಳಿ ಹಾಗೂ ಗರಗ ಸಂಸ್ಥೆಗಳಿಂದ ನಿಗದಿ ಅಳತೆಯ ಖಾದಿ ಧ್ವಜಗಳನ್ನು ಖರೀದಿಸಿ, ಧ್ವಜಾರೋಹಣ ಮಾಡುವಂತೆ ಸೂಚಿಸಿದ್ದಾರೆ.
ಖಾದಿ ರಾಷ್ಟ್ರಧ್ವಜಗಳಿಗಾಗಿ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ಮೊ: 9448482603 ಹಾಗೂ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ನಾಗನಗೌಡ ನೆಗಳೂರು ಮೊ: 9448329244 ಇವರಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
*************