ನಗರದಲ್ಲಿ ಸೋಮವಾರ ಶ್ರೀರಾಮ ಸೇನಾ ಮುಖಂಡ ಪ್ರಮೋದ ಮುತಾಲಿಕ ಅವರನ್ನು‌ಭೇಟಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.

ಧಾರವಾಡ : ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಶ್ರೀರಾಮ ಸೇನಾ ಮುಖಂಡ ಪ್ರಮೋದ ಮುತಾಲಿಕ ಅವರನ್ನು‌
ಭೇಟಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.
ಬಾಂಗ್ಲಾದೇಶದ ನುಸುಳುಕೋರರು ನಾಡಿನ ಬಹುತೇಕ ‌ಭಾಗಗಳಲ್ಲಿ ಕ್ಷೌರಿಕ ವೃತ್ತಿಯಲ್ಲಿ ತೊಡಗುವ ಮೂಲಕ ಈ ನಾಡಿನ ಮೂಲ ವೃತ್ತಿ ಬಾಂಧವರ ಜೀವನ ನಿರ್ವಹಣೆಗೆ ಅಡ್ಡಿಯಾಗಿದ್ದಾರೆ. ಅವರನ್ನು ತೆರವುಗೊಳಿಸುವ ಅಭಿಯಾನ ಹಮ್ಮಿಕೊಳ್ಳುವುದಾಗಿ ಪ್ರಮೋದ ಮುತಾಲಿಕ ಇತ್ತೀಚೆಗೆ ಘೋಷಿಸಿದ್ದರು.
ಈ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಭೇಟಿ ಅಭಿನಂದನೆ ಸಲ್ಲಿಸಿದರು.
ಸಂಘದ ಅಧ್ಯಕ್ಷ ಸಿದ್ದಣ್ಣ ಹಡಪದ ಅವರು, ನಾಡಿನ ಮೂಲ ವೃತ್ತಿದಾರರಾದ ಹಲವು ಹೆಸರುಗಳಲ್ಲಿ ಗುರುತಿಸಿಕೊಂಡಿರುವ ವಿಶ್ವ ಗುರು ಬಸವಣ್ಣನವರ ಅನುಯಾಯಿಗಳಾದ ಹಡಪದ ಸಮಾಜದವರು ಕ್ಷೌರಿಕ ವೃತ್ತಿಯನ್ನೇ ಅವಲಂಬಿಸಿದ್ದಾರೆ. ಆದರೆ, ಇತರೆಡೆಗಳಿಂದ ಬಂದ ಬಂಡವಾಳ ಶಾಹಿಗಳ ವೃತ್ತಿ ಪ್ರವೇಶದಿಂದ  ಹಡಪದ ಸಮಾಜ ಅಪಾರ ತೊಂದರೆಗೆ ಸಿಲುಕಿದೆ. 
ಇನ್ನೊಂದೆಡೆ ಸವಿತಾ ಸಮಾಜದವರ ಪ್ರಾಬಲ್ಯದಿಂದ ಸರಕಾರದ ಸೌಲಭ್ಯಗಳು ಕೂಡ ಸಮಾಜದ‌ ಜನರಿಗೆ ಸಿಗುತ್ತಿಲ್ಲ. 
ಹಡಪದ ಸಮಾಜದವರು ಆರ್ಥಿಕವಾಗಿ , ರಾಜಕೀಯವಾಗಿ ಪ್ರಬಲವಾಗಿಲ್ಲ. ಇದರಿಂದ ಸಮಾಜದ ಜನರು ಮತ್ತಷ್ಟು  ತೊಂದರೆಗೆ ಸಿಲುಕಿದ್ದಾರೆ.
ಇದೀಗ ಕ್ಷೌರಿಕ ವೃತ್ತಿಯಲ್ಲಿರುವ ಜನರ ಪರವಾಗಿ ಧ್ವನಿ ಎತ್ತಿರುವ ಮುತಾಲಿಕ ಅವರ ಅವರಿಗೆ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಮತ್ತು ಮುಂಬರುವ ದಿನಗಳಲ್ಲಿ ಸಮಾಜದ ಪರವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.
ಈ‌ ಸಂದರ್ಭದಲ್ಲಿ ಮಾತನಾಡಿದ ಪ್ರಮೋದ ಮುತಾಲಿಕ, ಕ್ಷೌರಿಕ ವೃತ್ತಿಯಲ್ಲಿ ಬಾಂಗ್ಲಾ ನುಸುಳುಕೋರರು ಮತ್ತು ಅನ್ಯ ಧರ್ಮೀಯರ ಪ್ರವೇಶವನ್ನು ತಡೆಯಲು ಹೋರಾಟ ನಡೆಸಲಾಗುವುದು.‌
ಆದ್ದರಿಂದ ಸಮಾಜದವರು ತಮ್ಮ ಜೊತೆ ಇರಬೇಕು ಎಂದರು.ಅಲ್ಲದೇ ‌ಸಮಾಜದ ಎಲ್ಲ‌ ಸಮಸ್ಯೆಗಳ ಬಗ್ಗೆ ಸಂದರ್ಭಾನುಸಾರ ಬೆನ್ನಿಗೆ ನಿಲ್ಲುವುದಾಗಿ ಮುತಾಲಿಕ ಭರವಸೆ ನೀಡಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಸಂತೋಷ ಹಡಪದ, ಕಾರ್ಯಾಧ್ಯಕ್ಷ ನಾಗರಾಜ ಸರ್ಜಾಪುರ, ಮುಖಂಡರಾದ ದೇವು ಮುಂಡರಗಿ,  ಈರಣ್ಣ ಬೆಳ್ಳಿಕಟ್ಟಿ, ಈರಣ್ಣ ಹಡಪದ ಸಣ್ಣೂರ, ಉಳವಪ್ಪ‌ ಹಡಪದ, ಸುರೇಶ ನವಲಗುಂದ, ಮಲ್ಲಿಕಾರ್ಜುನ ಹಡಪದ‌ ಮತ್ತಿತರರು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال