ಸರ್ಕಾರಿ ಪ್ರೌಢಶಾಲೆಗೆ ಪ್ರೊಜೆಕ್ಟರ್ ಸ್ಕ್ರೀನ್ ಮತ್ತು ಕಂಪ್ಯೂಟರ್ ಟೇಬಲ್ ಕೊಡುಗೆ
ಧಾರವಾಡ. ತಾಲೂಕಿನ ಯಾದವಾಡ ಸರಕಾರಿ ಪ್ರೌಡ ಶಾಲೆಗೆ ರೋಟರಿ ಕ್ಲಬ್ ಧಾರವಾಡ ಮಿಡ್ ಟೌನ್ ನಿಂದ ಶಾಲೆಯಲ್ಲಿ ಇಂಟ್ರಾಕ್ಟ್ ಕ್ಲಬ್ಬನ್ನು ಸ್ಥಾಪಿಸಿ ಹೊಸ ಪ್ರೊಜೆಕ್ಟರ್ ಸ್ಕ್ರೀನ್ ಮತ್ತು ಕಂಪ್ಯೂಟರ್ ಟೇಬಲ್ ಗಳನ್ನು ಕೊಡುಗೆಯಾಗಿ ನೀಡಿದರು.
ರಾಜ್ಯ ರಾಜ್ಯೋಸ್ತವ ಪ್ರಶಸ್ತಿ ಪುರಸ್ಕೃತ ಡಾ.ಎಸ್. ಆರ್. ರಾಮನಗೌಡರ್ ಎಲ್ಈಡಿ ಪ್ರೊಜೆಕ್ಟರ್ ಸ್ಕ್ರೀನ ಗೆ ಶಾಲೆಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ವಿದ್ಯಾರ್ಥಿಗಳು ಶ್ರಮದಿಂದ ಕೆಲಸ ಮಾಡಿದ್ದಲ್ಲಿ ಯಶಸ್ಸು ಖಂಡಿತವಾಗಿ ಸಿಗುವುದು ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರ ನೀವು ಅಂದು ಕೊಂಡ ಯಶಸ್ಸು ಸಿಗುವುದು ಹಾಗೂ ಊರಿನ ನಾಗರಿಕರ ಸಹಕಾರವನ್ನು ಹೀಗೆ ಮುಂದುವರೆಯಲಿ ಎಂದರು.
ರೋಟರಿ ಕ್ಲಬ್ ಧಾರವಾಡ ಮಿಡ್‌ಟೌನ್ ಅಧ್ಯಕ್ಷ ರೋ. ಹರ್ಷಕುಮಾರ್ ತುರಮರಿ ಮಾತನಾಡಿ, ನಮ್ಮ ರೋಟರಿ ಕ್ಲಬ್ ಧಾರವಾಡ ಮಿಡ್ ಟೌನ್ ವತಿಯಿಂದ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಕಾರ್ಯಗಳನ್ನು ಮಾಡುತ್ತೇವೆ. ಶಾಲೆಗಳಲ್ಲಿ ಶಿಕ್ಷಕರ ಸಹಕಾರವು ಅಷ್ಟೇ ಮುಖ್ಯ, ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಸಾಮಾಜಿಕ ಚಿಂತನೆಯ ಕಾರ್ಯಗಳನ್ನು ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಣ ಪೇಮಿ ರೋ.ಡಾ.ಪ್ರಕಾಶ ರಾಮನಗೌಡರ್, ರೋ.ಅಮೃತ್ ಕಬಾಡಿ, ಯರಿಸ್ವಾಮಿ ಗುರೂಜಿ ಹಾಗೂ ಶಾಲೆಯ ಎಸ್ ಡಿ ಎಂ ಸಿ ಕಾರ್ಯಧ್ಯಕ್ಷರಾದ ಹನುಮಂತಪ್ಪ ಮಾಕನ್ನವರ ಮತ್ತು ಸರ್ವ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಪಾರ್ವತಮ್ಮ ಹಿರೇಮಠ, ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ಐ.ಎಂ. ಆಯಟ್ಟಿ ಹಾಗೂ ಗುರು ಮಾತೆಯರು, ಇನ್ಸ್ಟಾಲೇಶನ್ ಆಫೀಸರ್ ಆಗಿ ಡಿಸಿಸಿ ರೋ. ಕಿರಣ್ ಹಿರೇಮಠ ಅವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಈಶ್ವರ ಉದಮೇಶಿ ನಿರೂಪಿಸಿದರು.