SSLC & PUC ನಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದಿರುವ ಮಕ್ಕಳಿಗೆ ಮಹಾಪೌರಾದ ಶ್ರೀ ಈರೇಶ ಅಂಚಟಗೇರಿ ಅವರಿಂದ ಸನ್ಮಾನ

 

ಇಂದು ಧಾರವಾಡದ ಮಾಳಾಪುರದ ಈರೇಶ ಕಾಲೋನಿಯಲ್ಲಿ, ಎಸ್. ಎಸ್. ಎಲ್. ಸಿ ಹಾಗೂ ಪಿ. ಯು. ಸಿ. ನಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದಿರುವ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮಕ್ಕೆ ಮಹಾಪೌರಾದ ಶ್ರೀ ಈರೇಶ ಅಂಚಟಗೇರಿ  . 


ಈ ಸಂದರ್ಭದಲ್ಲಿ, ಮಕ್ಕಳಿಗೆ ಹೆಚ್ಚಿನ ಅಂಕ ಪಡೆದಿದ್ದಾಕ್ಕಾಗಿ, ಅವರನ್ನು ಅಭಿನಂದಿಸಿ, ಸನ್ಮಾನಿಸಲಾಯಿತು. ಹಾಗೂ ಈ ತರಹದ ಸನ್ಮಾನ ಕಾರ್ಯಕ್ರಮಗಳು ಪ್ರತಿವರ್ಷ ನಡೆಯಬೇಕು, ಹಾಗೂ ಇದಕ್ಕೆ ನನ್ನ ಕಡೆಯಿಂದ ಸಹ ಸಹಾಯ ಹಸ್ತ ನೀಡುವ ಭರವಸೆ ನೀಡಲಾಯಿತು. ಇದೇ ಸಂದರ್ಭದಲ್ಲಿ, ಬಡಾವಣೆಯ ನಾಗರಿಕರ ಸಮಸ್ಯೆಗಳನ್ನು ಪರಿಶೀಲಿಸಿ, ಶೀಘ್ರವೇ ಪರಿಹಾರ ಒದಗಿಸುವ ಕುರಿತು, ಭರವಸೆ ನೀಡಲಾಯಿತು. ಈ ಸಂದರ್ಭದಲ್ಲಿ, ನನ್ನೊಂದಿಗೆ ಶ್ರೀ ಬಸವರಾಜ ಪಲ್ಲೋಟಿ, ಶ್ರೀ ನಾಗಣ್ಣ ಹಾತರಕಿ ಹಾಗೂ ಬಡಾವಣೆಯ ಹಿರಿಯರು ಉಪಸ್ಥಿತರಿದ್ದರು.

ನವೀನ ಹಳೆಯದು

نموذج الاتصال