SDMC ಪದಾಧಿಕಾರಿಗಳಿಗೆ ಸನ್ಮಾನ ಸಮಾರಂಭ


 

🌹 *ನೂತನ ಆಯ್ಕೆಯಾದ SDMC ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಹಾಗೂ ಕ್ಷೇತ್ರ ಸಮನ್ವಯಧಿಕಾರಿಗಳ ಸನ್ಮಾನ ಸಮಾರಂಭ,,,,,,,,,,,,,,,,,,,,,*



ಇಂಡಿ: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ   ಸರಕಾರಿ KBHPS ಹಿರೇಮಸಳಿ ಶಾಲೆಯಲ್ಲಿ, ನೂತನವಾಗಿ ರಚನೆಯಾದ,  SDMC ಅಧ್ಯಕ್ಷರಾದ ಶ್ರೀ ಪೀರಪ್ಪ ಭಾವಿಕಟ್ಟಿ, ಸರ್ವ ಸದಸ್ಯರೆಲ್ಲರಿಗೂ ಆತ್ಮೀಯವಾದ ಸನ್ಮಾನ ಹಾಗೂ ನಮ್ಮ ತಾಲೂಕಿಗೆ ಹೊಸದಾಗಿ ಕ್ಷೇತ್ರ ಸಮನ್ವಯಧಿಕಾರಿಗಳಾಗಿ ಅಧಿಕಾರ ಸ್ವೀಕಾರ ಮಾಡಿರುವ ಶ್ರೀ ಎಸ್ ಆರ್ ನಡುಗಡ್ಡಿ ಸರ್, BRP ಯಾವರಾಗಿರುವ ಶ್ರೀ ಆಯ್ ಜೆ ಆಳೂರ್ ಸರ್, CRP ರವರಾದ ಶ್ರೀ ಟಿ ಜಿ ಗಿಣ್ಣಿ ಇವರೆಲ್ಲರಿಗೂ ಆತ್ಮೀಯವಾದ ಸನ್ಮಾನ ಕೈಗೊಳ್ಳಲಾಯಿತು. ಸನ್ಮಾನ ಕಾರ್ಯಕ್ರಮದ ಜೊತೆ ಶಾಲಾ ಮಕ್ಕಳಿಗೆ SDMC ಅಧ್ಯಕ್ಷರು ಹಾಗೂ ಸಮನ್ವಯಧಿಕಾರಿಗಳು, BRP, CRP ಸಾಹೇಬರಿಂದ ಪಠ್ಯಪುಸ್ತಕ ವಿತರಣೆ ಹಾಗೂ ಶಾಲಾ ಶಿಕ್ಷಕರಿಗೆ ಇಲಾಖೆಯಿಂದ ಕೊಡಮಾಡುವ ಐ ಡಿ ಕಾರ್ಡಗಳನ್ನು ವಿತರಿಸಲಾಯಿತು.ಸರಕಾರಿ ಶಾಲೆಗಳು ಅಭಿವೃದ್ಧಿ ಆಗಬೇಕಾದರೆ SDMC ಯವರ ಪಾತ್ರ ಬಹುಮುಖ್ಯ. ಅವರ ಸಹಕಾರ ಇದ್ದರೆ ಮಾತ್ರ ಶಾಲೆಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಮನ್ವಯಧಿಕಾರಿಗಳು ಹೇಳಿದರು. ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿದ ಎಲ್ಲಾ ಮಹನೀಯರು, ಅಧಿಕಾರಿಗಳಿಗೆ,
ಶ್ರೀ ಆನಂದ ಭೀ ಕೆಂಭಾವಿ ಪ್ರಭಾರಿ 
ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗ ಸರಕಾರಿ KBHPS ಹಿರೇಮಸಳಿ ವಂದಿಸಿದರು. ಅಧಿಕಾರ ವಹಿಸಿಕೊಂಡ ಅದ್ಯಕ್ಷರಾದ ಪೀರಪ್ಪ ಭಾವಿಕಟ್ಟಿ ಶಿಕ್ಷಕರ ಸಹಕಾರದಿಂದ ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವೆ, ಶಾಲೆ ಇದೊಂದು ದೇವ ಮಂದಿರ, ಇಲ್ಲಿ ಕಲಿಯುವ ಮಕ್ಕಳು ದೇವರಿದ್ದಂತೆ ಎಂದರು,ಶಾಲೆ ಅಭಿವೃದ್ಧಿ ಆದರೆ ಮಾತ್ರ ಗ್ರಾಮಗಳು ಉದ್ಧಾರ ಆಗುತ್ತವೆ. ಶಾಲೆಯ ಅಭಿವೃದ್ಧಿಗಾಗಿ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ ಅಂತ ಹೇಳಿದರು.

ನವೀನ ಹಳೆಯದು

نموذج الاتصال