ಧಾರವಾಡದ ಸಮಗ್ರ ಅಭಿವೃದ್ಧಿ ಸಹಿಸದ ಕೇಂದ್ರ ಸಚಿವ*.

ಧಾರವಾಡದ ಸಮಗ್ರ ಅಭಿವೃದ್ಧಿ ಸಹಿಸದ ಕೇಂದ್ರ ಸಚಿವ*.
     
     ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಯ ಸದಸ್ಯರ ಅಧಿಕಾರ ಮೋಟಕುಗೊಳಿಸುವ ಗಾಳಿ ಸುದ್ಧಿ ಹಬ್ಬಿಸಿ, ಬೇಳೆ ಬೇಯಿಸಿಕೊಳ್ಳುವ ಸ್ವಯಂ ಘೋಷಿತ ನಾಯಕರುಗಳಿಗೆ ಬರುವಂತಹ ದಿನಗಳಲ್ಲಿ, ಧಾರವಾಡದ ಜನತೆ ತಕ್ಕ ಪಾಠ ಕಲಿಸಿಯೇ ಕಲಿಸುತ್ತಾರೆ.
   ಧಶಕದ ಹೋರಾಟದ ಫಲ, ಶಾಸಕ ವಿನಯ ಕುಲಕರ್ಣಿಯವರ ಇಚ್ಛಾಶಕ್ತಿಯಿಂದ ಇಂದು ಧಾರವಾಡದ ಜನತೆಯ ಕನಸು ನನಸಾಗಿದೆ.
      ಆದರೆ ಕೈಲಾಗದವ ಮೈ ಪರಚಿಗೊಂಡಂತೆ, ಕೆಲವೊಂದಿಷ್ಟು ಜನರು ಬುದ್ದಿ ಬ್ರಮಣರಾದಂತೆ ವತಿಸುತ್ತಿರುವದು ಖೇದಕರ.ತಮ್ಮದೇ ಬಿಜೆಪಿ ಸರ್ಕಾರವಿದ್ದಾಗ ಮಾಡಲಾಗದ ಕೆಲಸವನ್ನು ವಿನಯ ಕುಲಕರ್ಣಿಯವರು ಮಾಡಿದ್ದನ್ನು ಅರಗಿಸಿ ಕೊಳ್ಳಲಾಗದೆ, ಸೂಪರ್ ಸೀಡ್ ಮಾಡಿ ಸದಸ್ಯರ ಅಧಿಕಾರ ಮೋಟುಕುಗೊಳಿಸುವ ಹುನ್ನಾರ ಎಂದು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವದು ಖಂಡನೀಯ.
     ಈರೇಶ ಅಂಚಟಗೇರಿ ಯವರು, ಪತ್ರಿಕಾ ಪ್ರಕಟಣೆ ನೀಡಿ,   ಶಾಸಕರಾದ ವಿನಯ ಕುಲಕರ್ಣಿಯವರು ತಮ್ಮ ಕಾರ್ಯವೈಫಲ್ಯ ಮುಚ್ಚಿ ಹಾಕಲು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ,ಎನ್ನುವುದು ಹಾಸ್ಯಸ್ಪದವೆ ಸರಿ, ಅಂಚಟಗೆರಿಯವರೇ, ನಿಮ್ಮಿಂದ ಅಭಿವೃದ್ಧಿ ಪಾಠ ಕಲಿಯುವ ಅವಶ್ಯಕತೆ ಇಲ್ಲ, ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯ ನೋಡಿಯೇ ನಿಮಗೆ ಸಹಿಸಲು ಆಗುತ್ತಿಲ್ಲ ಎಂಬುದು ಕಟು ಸತ್ಯ.
    ಧಾರವಾಡ ಪಾಲಿಕೆಗೆ ಅವಶ್ಯಕತೆ ಇರುವ, ವಿಸ್ತೀರ್ಣ, ಜನಸಂಖ್ಯೆ, ಆರ್ಥಿಕ ವ್ಯವಸ್ಥೆ ಇದ್ದ ಕಾರಣಕ್ಕಾಗಿಯೇ ಘೋಷಣೆ ಮಾಡಿದ್ದು ಎಂಬುದು ಎಲ್ಲರಿಗೂ ಗೊತ್ತು ಆದರೆ
 ಎಲ್ಲಿ ನಿಮ್ಮ ನಾಯಕರ ಅಸ್ತಿತ್ವ ಮರೆಯಾಗುತ್ತದೆಯೋ ಎಂಬ ಚಿಂತೆ ನಿಮಗಿರಬೇಕು, ಇಲ್ಲಸಲ್ಲದ ಆರೋಪ ಬಿಟ್ಟು ಇನ್ನಾದರೂ ಪ್ರಬುದ್ಧರಾಗಿ.ನಿಮಗೆ ಧಾರವಾಡದ ಅಭಿವೃದ್ಧಿ ಯ ಇಚ್ಚಾಶಕ್ತಿ ಇದ್ದರೆ,ಕೇಂದ್ರ ಸಚಿವರಿಗೆ ಹೇಳಿ ಧಾರವಾಡ ಮಹಾನಗರ ಪಾಲಿಕೆಗೆ ಅನುವು ಮಾಡಿ ಕೊಡಿ.

   ಧಾರವಾಡ  ಜನತೆ ಪ್ರಜ್ಞಾವಂತರು, ಅವರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸರ್ಕಾರ ಧಾರವಾಡ ಮಹಾನಗರ ಪಾಲಿಕೆಯ ಘೋಷಣೆಯಾದಾಗ, ನಿಮ್ಮ ನಾಯಕರುಗಳೇ ಗಲ್ಲಿ ಗಲ್ಲಿ ಬ್ಯಾನರಗಳನ್ನು ಅಳವಡಿಸಿ ನಾವು ಮಾಡಿದ್ದೂ ನಾವು ಮಾಡಿದ್ದೂ ಎಂದು ತಮ್ಮ ಬೆನ್ನು ತಾವೇ ಚಪ್ಪರಸಿಕೊಂಡ ಆ ನಾಟಕವನ್ನು ಇನ್ನು ಮರೆತಿಲ್ಲ.
    ಇಂತಹ ಬಾಲಿಷ ಹೇಳಿಕೆ ಬಿಡಬೇಕು, ಜನರ ದಾರಿ ಅಪ್ಪಿಸುವ ಕೆಲಸ ಬಿಟ್ಟು, ಧಾರವಾಡದ ಅಭಿವೃದ್ಧಿಗೆ ಕೈ ಜೋಡಿಸಿ ನಿಮ್ಮ ನಾಟಕಕ್ಕೆ ತೆರೆ ಎಳೆದು ಧಾರವಾಡ ಜನತೆಯ ಕ್ಷಮೆ ಕೇಳಿ ಮಾನ ಉಳಿಸಿಕೊಳ್ಳ
ನವೀನ ಹಳೆಯದು

نموذج الاتصال