16 ರಿಂದ ಧಾರವಾಡ ಘರಾಣೆಯ ಪ್ರೊ, ಅಬ್ದುಲ್ ಕರೀಮ್ ಖಾನರ ಸಂಸ್ಮರಣೆ
ಪರಂಪರಾ ಸಂಗೀತೋತ್ಸವ .
ಧಾರವಾಡ 15 : ಧಾರವಾಡ ಘರಾಣೆಯ ಸಿತಾರರತ್ನ ರಹಿಮತ್ ಖಾನರ ಪುತ್ರ ಸಿತಾರ ನವಾಜ್ ಪ್ರೊ, ಅಬ್ದುಲ್ ಕರೀಮ್ ಖಾನರ ಸಂಸ್ಮರಣೆಯಲ್ಲಿ ಸಿತಾರರತ್ನ ಸಮಿತಿಯು ಮೇ 16 ರಿಂದ ಮೂರು ದಿನಗಳ 'ಪರಂಪರಾ' ಸಂಗೀತೋತ್ಸವವನ್ನು ಹಮ್ಮಿಕೊಂಡಿದೆ.
ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಭಾಭವನದಲ್ಲಿ ಮೇ. 16 ರಿಂದ 18 ರವರೆಗೆ ಧಾರವಾಡದ ಸಿತಾರರತ್ನ ಸಮಿತಿಯು ಆಯೋಜಿಸಿರುವ ಮೂರು ದಿನಗಳ ಸಂಗೀತೋತ್ಸವದಲ್ಲಿ ದೇಶದ ಪ್ರತಿಭಾವಂತ ಗಾಯಕ-ವಾದಕರ ಕಲಾವಂತಿಕೆ ಪ್ರದರ್ಶನಗೊಳ್ಳಲಿದೆ ಎಂದು ರಾಘವೇಂದ್ರ ಆಯಿ
ತಿಳಸಿದರು. ಪತ್ರಿಕಾಗೋಷ್ಷಿಯಲ್ಲಿ ಮಾತನಾಡಿದ ಅವರು
ಮೇ 16 ಶುಕ್ರವಾರದಂದು ಸಂಜೆ 5.30ಕ್ಕೆ ಆರಂಭಗೊಳ್ಳುವ ಈ ಸಂಗೀತೋತ್ಸವದಲ್ಲಿ ಪುಣೆಯ ಸೌರಭ ನಾಯಕ ಅವರ ಗಾಯನ ಹಾಗೂ ಕೋಲ್ಕತ್ತಾದ ಅನಿಕೇತ ಚಕ್ರವರ್ತಿ ಅವರ ಸರೋದ ವಾದನ ಮೂಡಿಬರಲಿದೆ. ಇವರಿಗೆ ಕೇಶವ ಜೋಶಿ ಹಾಗೂ ಹೇಮಂತ ಜೋಶಿ ತಬಲಾ ಸಾಥ್ ನೀಡಿದರೆ, ಶಿರಸಿಯ ಭರತ ಹೆಗಡೆ ಹಾರ್ಮೋನಿಯಂ ಸಾಥ್ ಸಂಗತ್ ಮಾಡಲಿದ್ದಾರೆ.
ಮೇ 17 ಶನಿವಾರದಂದು ರವಿವಾರ ಸಂಜೆ 5.30ಕ್ಕೆ ಪುಣೆಯ ಪಂ. ಪ್ರಮೋದ ಗಾಯಕವಾಡ ಅವರ ಶಹನಾಯಿ ವಾದನ ಹಾಗೂ ದೆಹಲಿಯ ರಾಮ ನಾರಾಯಣ ಝಾ ಅವರಿಂದ ಗಾಯನ ಕಾರ್ಯಕ್ರಮಗಳು ನಡೆಯಲಿವೆ. ಇವರಿಗೆ ಕೇಶವ ಜೋಶಿ ಹಾಗೂ ನಿಸ್ಸಾರ್ ಅಹ್ಮದ ತಬಲಾ ಹಾಗೂ ಬಸವರಾಜ ಹಿರೇಮಠ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ಮೇ 18 ರವಿವಾರ ಪಂ. ರಘುನಾಥ ನಾಕೋಡ ಹಾಗೂ ಪುತ್ರ ಡಾ. ರವಿಕಿರಣ ನಾಕೋಡ ಅವರ ತಬಲಾ ಜುಗಲಬಂದಿ ನಡೆಯಲಿದೆ. ನಂತರ ಪುಣೆಯ ರಾಧಿಕಾ ಜೋಶಿ ಅವರು ಗಾಯನ ಪ್ರಸ್ತುತಪಡಿಸುವರು. ಕೊನೆಯ ಕಾರ್ಯಕ್ರಮವಾಗಿ ಗೋವಾದ ಸುಭಾಷ ಪವಾರ ಅವರ ಗಾನಸುಧೆ ಹರಿದುಬರಲಿದೆ. ಇವರಿಗೆ ಶಂಕರ ಕಬಾಡಿ ಅವರು ವಯೋಲಿನ್, ಶ್ರೀಹರಿ ದಿಗ್ಗಾವಿ, ಪ್ರಶಾಂತ ಮಡಿವಾಳರ ಅವರ ತಬಲಾ ಹಾಗೂ ಬಸವರಾಜ ಹಿರೇಮಠ ಮತ್ತು ವಿನೆ ಪಾಟೀಲ ಅವರ ಹಾರ್ಮೋನಿಯಂ ಸಾಥ್ ಸಂಗತ್ ಮಾಡಲಿದ್ದಾರೆ. ಎಂದರು. ಪತ್ರಿಕಾಗೋಷ್ಠಿಯಲ್ಲಿ ಮೌಸೀನ್ ಖಾನ,ಅಬ್ದುಲ್ ಖಾನ್ ಇದ್ದರು.